ಮುಂಡಗೋಡದಲ್ಲಿ 58 ದಿನಗಳ ಆತ್ಮೀಯ ವಾಸ ಅಂತ್ಯ: ದಲೈಲಾಮಾ ಧರ್ಮಶಾಲಾಗೆ ಪ್ರಯಾಣ
58 days of intimate stay in Mundagoda come to an end: Dalai Lama travels to Dharamshala
ಮುಂಡಗೋಡ 10 : ಟಿಬೆಟಿಯನ್ನರ ಪರಮೋಚ್ಚ ಧರ್ಮಗುರು ಹಾಗೂ ನೊಬೆಲ್ ಶಾಂತಿ ಪುರಸ್ಕೃತರಾದ ಪರಮಪೂಜ್ಯ ದಲೈಲಾಮಾ ಅವರು 58 ದಿನಗಳ ಸುದೀರ್ಘ ಮುಂಡಗೋಡ ಭೇಟಿಯನ್ನು ಸೋಮವಾರ ಮುಗಿಸಿ, ಬೆಳಿಗ್ಗೆ 6.50ಕ್ಕೆ ಮುಂಡಗೋಡ ಟಿಬೆಟಿಯನ್ ಕಾಲೋನಿಯಿಂದ ಹುಬ್ಬಳ್ಳಿ ಮಾರ್ಗವಾಗಿ ಧರ್ಮಶಾಲಾಗೆ ಪ್ರಯಾಣ ಬೆಳೆಸಿದರು. ಪ್ರಯಾಣದ ವೇಳೆ ಮಾರ್ಗದ ಎರಡು ಬದಿಗಳಲ್ಲಿ ನೆರೆದಿದ್ದ ಸಾವಿರಾರು ಭೌದ್ಧ ಅನುಯಾಯಿಗಳಿಗೆ ದಲೈಲಾಮಾ ಅವರು ಕೈಬೀಸಿ ಆಶೀರ್ವಾದ ನೀಡಿದರು. ಭಕ್ತರು ಭಾವುಕವಾಗಿ ತಮ್ಮ ಧರ್ಮಗುರುಗೆ ಬೀಳ್ಕೊಟ್ಟರು.
ಇದೇ ದಿನ ಬೆಳಿಗ್ಗೆ 8.30ಕ್ಕೆ ಹುಬ್ಬಳ್ಳಿಯಿಂದ ವಿಶೇಷ ವಿಮಾನದಲ್ಲಿ ದೆಹಲಿ ತಲುಪಿದ ದಲೈಲಾಮಾ ಅವರು ಅಲ್ಲಿಂದ ಧರ್ಮಶಾಲಾಗೆ ತೆರಳಿದರು. ದಲೈಲಾಮಾ ಅವರ ಪ್ರಯಾಣದ ಹಿನ್ನೆಲೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್. ಅವರ ನೇತೃತ್ವದಲ್ಲಿ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ ಜಾರಿಗೊಳಿಸಲಾಗಿತ್ತು. ಈ ಸಂದರ್ಭದಲ್ಲಿ ಹೆಚ್ಚುವರಿ ಎಸ್ಪಿ ಜಿ. ಕೃಷ್ಣಮೂರ್ತಿ, ಡಿವೈಎಸ್ಪಿ ಗೀತಾ ಪಾಟೀಲ್, ತಹಶೀಲ್ದಾರ್ ಶಂಕರ್ ಗೌಡಿ, ಸಿಪಿಐ ರಂಗನಾಥ್ ನೀಲಮ ನವರ ಸೇರಿದಂತೆ ಪೊಲೀಸ್ ಹಾಗೂ ಆಡಳಿತದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 