ಮುಧೋಳ ಕಂಠಿ ಕಾಲೇಜಿನ ಬಿಸಿಎ ಪರೀಕ್ಷೆಯಲ್ಲಿ 50 ಟಾಪರ್ಸ್
50 toppers in Mudhol Kanthi College's BCA exam
ಲೋಕದರ್ಶನ ವರದಿ
ಮುಧೋಳ 09: ಬಾಗಲಕೋಟ ವಿಶ್ವವಿದ್ಯಾಲಯ, ಜಮಖಂಡಿ ಅವರು 2025-26 ನೇ ಸಾಲಿನ ಬಿ.ಸಿ.ಎ 6ನೇ ಸೆಮ್ ಗೆ ನಡೆಸಿದ ಪರೀಕ್ಷೆ ಫಲಿತಾಂಶ ಪ್ರಕಟಿಸಿದೆ. ಬಾಗಲಕೋಟ ಬಿವ್ಹಿವ್ಹಿ ಸಂಘದ ಮುಧೋಳದ ಶ್ರೀ ಎಸ್.ಆರ್.ಕಂಠಿ ಮಹಾವಿದ್ಯಾಲಯದ ಬಿ.ಸಿ.ಎ ವಿಭಾಗದ 6ನೇ ಸೆಮ್ ಪರೀಕ್ಷೆಯಲ್ಲಿ ಒಟ್ಟು 52 ವಿದ್ಯಾರ್ಥಿಗಳು ಹಾಜರು ಆಗಿದ್ದು ಈ ಪೈಕಿ 50 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಶೇ.96.15ರಷ್ಟು ಫಲಿತಾಂಶ ಬಂದಿದೆ. ಶ್ವೇತಾ ಪರಚನ್ನಗೌಡರ (ಸಿಜಿಪಿ-10.00), ಕೀರ್ತಿ ಗಾಣಿಗ (ಸಿಜಿಪಿ-10.00), ಮೇಘಾ ಕೋಟಿ (ಸಿಜಿಪಿ-10.00), ಕಿರಣ ನಾಯಕ (ಸಿಜಿಪಿ-9.88), ಸೃಷ್ಠಿ ತೇಲಿ (ಸಿಜಿಪಿ-9.83), ಸುಪ್ರಿತಾ ಲಾವನಿ (ಸಿಜಿಪಿ-9.71), ರೋಹಿತ ಪೂಜಾರ (ಸಿಜಿಪಿ-9.71), ಲಕ್ಷಿ-್ಮ ವಸ್ತ್ರದ (ಸಿಜಿಪಿ-9.71), ಸಹನಾ ಕೊಣ್ಣೂರ (ಸಿಜಿಪಿ-9.58), ತನುಜಾ ಶೆಟ್ಟರ (ಸಿಜಿಪಿ-9.58) ಈ ವಿದ್ಯಾರ್ಥಿಗಳು ಬಿಸಿಎ ವಿಭಾಗಕ್ಕೆ ಟಾಪರ್ಸ್ ಆಗಿದ್ದಾರೆ.
ಬಿಸಿಎ ವಿಭಾಗಕ್ಕೆ ಟಾಪರ್ಸ್ ಆಗಿಕುವ ವಿದ್ಯಾರ್ಥಿಗಳಿಗೆ ಬಿವ್ಹಿವ್ಹಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ, ಗೌರವ ಕಾರ್ಯದರ್ಶಿ ಮಹೇಶ ಎನ್. ಅಥಣಿ, ಸಂಘದ ಕಾಲೇಜುಗಳ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಗುರುಬಸವ ಸೂಳಿಭಾವಿ, ಕಾಲೇಜುಗಳ ಆಡಳತಾಧಿಕಾರಿ ಡಾ.ವಿಜಯಕುಮಾರ ಕಟಗಿಹಳ್ಳಿಮಠ, ಕಾಲೇಜುಗಳ ಪದ ನಿಮಿತ್ಯ ಕಾರ್ಯದರ್ಶಿ ಡಾ.ಎಸ್.ಎನ್. ಗಾಂವಕರ ಹಾಗೂ ಸದಸ್ಯರು ಮತ್ತು ಕಾಲೇಜಿನ ಪ್ರಾಚಾರ್ಯ ಡಾ.ಮಲ್ಲಿಕಾರ್ಜುನ ಜರಕುಂಟಿ, ಬಿಸಿಎ ವಿಭಾಗದ ಮುಖ್ಯಸ್ಥ ಬಸವರಾಜ ಲಿಂಗರಡ್ಡಿ, ಸಹ ಉಪನ್ಯಾಸಕರಾದ ದುಂಡಪ್ಪ ಇಂಗಳಗಿ, ಜ್ಯೋತಿ ಕಲಾಲ, ಸುಷ್ಮಾ ದಿವಾಣದ ಮತ್ತು ಬೋಧಕ-ಬೋಧಕೇತರ ಸಿಬ್ಬಂದಿಯವರು ಅಭಿನಂದಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 