50ಲಕ್ಷ ರೂ. ವೆಚ್ಚದಲ್ಲಿ ಗುಂಡಯ್ಯ ಬ್ರಹ್ಮಯ್ಯ ಸಭಾಭವನ ನಿರ್ಮಾಣಕ್ಕೆ ಗುದ್ದಲಿ ಪೂಜೆ

50ಲಕ್ಷ ರೂ. ವೆಚ್ಚದಲ್ಲಿ ಗುಂಡಯ್ಯ ಬ್ರಹ್ಮಯ್ಯ ಸಭಾಭವನ ನಿರ್ಮಾಣಕ್ಕೆ ಗುದ್ದಲಿ ಪೂಜೆ  50 lakhs. Gudali puja for the construction of Gundaya Brahmayya Sabha Bhavan at a cost of Rs.

50ಲಕ್ಷ ರೂ. ವೆಚ್ಚದಲ್ಲಿ ಗುಂಡಯ್ಯ ಬ್ರಹ್ಮಯ್ಯ ಸಭಾಭವನ ನಿರ್ಮಾಣಕ್ಕೆ ಗುದ್ದಲಿ ಪೂಜೆ  

ಬ್ಯಾಡಗಿ 11 : ಸಮುದಾಯ ಭವನಗಳು ಸಮಾಜಕ್ಕೆ  ಸಂಪನ್ಮೂಲಗಳಾಗಿವೆ ಹಾಗೂ ಅವುಗಳು ಸಮುದಾಯದ ಅಭಿವೃದ್ಧಿಗೆ ಅನೇಕ ರೀತಿಯಲ್ಲಿ ಕೊಡುಗೆ ನೀಡುತ್ತವೆ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.ಅವರು ತಾಲೂಕಿನ ಗುಂಡೇನಹಳ್ಳಿ ಗ್ರಾಮದಲ್ಲಿ  ನಿರ್ಮಿತಿ ಕೇಂದ್ರದ ಆಶ್ರಯದಲ್ಲಿ 50 ಲಕ್ಷ ರೂ.ಗಳ ವೆಚ್ಚದದಲ್ಲಿ ನಿರ್ಮಿಸುತ್ತಿರುವ ಶ್ರೀ ಗುಂಡಯ್ಯ ಬ್ರಹ್ಮಯ್ಯ ದೇವಸ್ಥಾನದ ಸಭಾಭವನದ ಕಟ್ಟಡಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. ಈ ಸಮುದಾಯ ಭವನಗಳ ನಿರ್ಮಾಣಕ್ಕಾಗಿ ನೀಡಿರುವ ಅನುದಾನವನ್ನು ಸಮರ​‍್ಕವಾಗಿ, ಬಳಸಿಕೊಂಡು ಪಾರದರ್ಶಕತೆಯಿಂದ ಕಾರ್ಯ ನಿರ್ವಹಿಸಬೇಕೆಂದುಅಧಿಕಾರಿಗಳಿಗೆ ಸೂಚನೆ ನೀಡಿದರಲ್ಲದೇ ಸರ್ಕಾರದ ಅನುದಾನ ದುರ್ಬಳಕೆ ಕಂಡು ಬಂದರೆ ಅಂತಹವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.ಸಮಾಜ ಸೇವಕ ನಾಗರಾಜ್ ಆನ್ವೇರಿ ಮಾತನಾಡಿ ಸಮುದಾಯ ಭವನವನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡುವ ಮೂಲಕ ಉತ್ತಮ ಕಟ್ಟಡ ಕಟ್ಟಬೇಕು. ಸ್ವಚ್ಛತೆಗೆ ಆದ್ಯತೆ ನೀಡಬೇಕು. ಭವನದಲ್ಲಿ ಕಾರ್ಯಕ್ರಮಗಳು ನಡೆಸುವಾಗ ಸಾಮಾನ್ಯರಿಗೆ ಕೈಗೆಟಕುವಂತೆ ಬಾಡಿಗೆ ನಿಗದಿ ಮಾಡಬೇಕು. ಸಮುದಾಯ ಭವನಗಳನ್ನು ಒಂದು ಸಮುದಾಯದ ಬಳಕೆಗೆ ಮೀಸಲಿರಿಸದೆ ಎಲ್ಲಾ ಬಡ ವರ್ಗದವರ ಬಳಕೆಗೆ ಬರುವಂತೆ ನೋಡಿಕೊಳ್ಳಬೇಕೆಂದು ನಿರ್ದೇಶನ ನೀಡಿದರು. ಡಾ. ಬಿ.ವಿ. ವೀರಾಪುರ ಮಾತನಾಡಿದರು.ಕಾರ್ಯಕ್ರಮಲ್ಲಿ ತಾಲೂಕಾ ಕಾಂಗ್ರೆಸ್ ಅಧ್ಯಕ್ಷ ದಾನಪ್ಪ ಚೂರಿ, ಮಹಿಳಾ ತಾಲೂಕಾ ಅಧ್ಯಕ್ಷೆ ಲಕ್ಷ್ಮೀ ಜಿಂಗಾಡೆ, ಮುತ್ತಣ್ಣ ಶಿಗ್ಗಾಂವಿ, ಎಸ್‌.ಬಿ.ಅಗಡಿ, ಪ್ರಶಾಂತ ದೇಸೂರ, ಫಕ್ಕೀರ​‍್ಪ ಚನ್ನಗೇರಿ, ಶಿವಕುಮಾರ ಪಾಟೀಲ, ಬಸವರಾಜ ಆನ್ವೇರಿ, ಮಂಜಣ್ಣ ಯತ್ನಳ್ಳಿ, ನಿರ್ಮಿತಿ ಕೇಂದ್ರದ ಇಂಜೀನೀಯರ್ ಶಾಂತಕುಮಾರ, ಬಿಸಿಎಂ ಇಲಾಖಾಧಿಕಾರಿ ಸಿ.ಬಿ.ಪ್ರಸಾದಿಮಠ ಇದ್ದರು. ಶಾಲಾ ಮಕ್ಕಳು ಪ್ರಾರ್ಥಿಸಿದರು. ಶಿಕ್ಷಕ ಕರಿಯಪ್ಪನವರ ಸ್ವಾಗತಿ ವಂದಿಸಿದರು.