ಕಾರ್ಮಿಕರು, ಬೀದಿ ವ್ಯಾಪಾರಿಗಳಿಗೆ 5 ಸಾವಿರರೂ. ನೆರವು ಕೊಡಿ: ರೇವಣ್ಣ

ಹಾಸನ,  ಏ 16, ಲಾಕ್ ಡೌನ್  ನಿಂದ ಕಷ್ಟದಲ್ಲಿ ಇರುವ  ಜಿಲ್ಲೆಯ  ನೂರಾರು  ಕೂಲಿ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳ ಬದುಕು ಬಹಳ ಶೋಚನೀಯವಾಗಿದ್ದು ಅಂತಹ ಕುಟುಂಬಗಳಿಗೆ  ತಿಂಗಳಿಗೆ 5 ಸಾವಿರರೂ ನೆರವು ಹಾಗೂ ಜಿಲ್ಲೆಗೆ ತುರ್ತಾಗಿ 5 ಕೋಟಿ ಬಿಡುಗಡೆಗೆ ಮಾಡಬೇಕು ಎಂದು  ಮಾಜಿ ಸಚಿವ ಹೆಚ್.ಡಿ.ರೇವಣ್ಣ  ಸರ್ಕಾರವನ್ನು ಒತ್ತಾಯ  ಮಾಡಿದ್ದಾರೆ.ಹಾಸನದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು,,  ಬವವರು ಬಹಳ ಕಷ್ಟದಲ್ಲಿ ಇದ್ದಾರೆ ಈ ಬಗ್ಗೆ ಮುಖ್ಯಮಂತ್ರಿಯವರಿಗೆ ವಿವರವಾಗಿ  ಮನವಿ ಸಲ್ಲಿಸಿಸಿದ್ದೇನೆ ಎಂದು ಹೇಳಿದರು  . ಬೆಂಗಳೂರಿನಿಂದ ಸುಮಾರು  ಸಾವಿರಾರು  ಕುಟುಂಬಗಳು  ಜಿಲ್ಲೆಗೆ ಬಂದಿದ್ದು  ನಿತ್ಯದ ಜೀವನಕ್ಕೂ ಬಹಳ  ಕಷ್ಟಪಡುತ್ತಿದ್ದಾರೆ ಅವರಿಗೆ ತಿಂಗಳಿಗೆ  5 ಸಾವಿರ ನೀಡಬೇಕು ಎಂದರು. ಸಾವಿರಾರು ಕ್ಷೌರಿಕರು ಸಂಕಷ್ಟದಲ್ಲಿದ್ದಾರೆ ರೈತರು  ಉತ್ಪನ್ನಗಳು ಮಣ್ಣು ಪಾಲಾಗುತ್ತಿವೆ ಕಬ್ಬು ಕಟಾವಿಗೆ ಬಂದಿದ್ದರೂ ಸಾಗಣೆ ಮಾಡಲಾಗುತ್ತಿಲ್ಲ ಎಂದರು 
ಈ ಸಂಕಷ್ಟ ಸಮಯದಲ್ಲಿ  ಒಂದೊಂದು ಜಿಲ್ಲೆಗೆ ತುರ್ತಾಗಿ 5 ಕೋಟಿ ಬಿಡುಗಡೆಗೆ ಮಾಡಬೇಕು ಎಂದರು. ಅಲುಲೂಗಡ್ಡೆ ಬೆಳೆಗಾರರಿಗೆ ಶೇ.50 ರಷ್ಟು ಸಬ್ಸಿಡಿ ಬೇಡಿಕೆಗೆ ಸಿಎಂ ಅಸ್ತು ಎಂದಿದ್ದಾರೆ
20 ದಿನ ಕಳೆದರೂ ಸರ್ಕಾರ ಸ್ಪಷ್ಟ ಮಾರ್ಗಸೂಚಿ ಬಿಡುಗಡೆ ಮಾಡಿಲ್ಲ ಸಂಕಷ್ಟದಲ್ಲಿರುವವರಿಗೆ ನಯಾಪೈಸೆ ಪರಿಹಾರ ನೀಡಿಲ್ಲಸರ್ಕಾರ ದಿವಾಳಿಯಾಗಿದೆಯೇ ? ಪರಿಹಾರ ಕೊಡಲು ಆಗುವುದಿಲ್ಲ ನೆರವಾಗಿಯೆ ಹೇಳಲಿ ರಾಜ್ಯದ ಹಣಕಾಸು ಪರಿಸ್ಥಿತಿ ಬಗ್ಗೆ ಶ್ವೇತ ಪತ್ರ ಹೊರಡಿಸಬೇಕು ತೆರಿಗೆ ಸಂಗ್ರಹ ಸೇರಿ ಯಾವ ಹಣ ಎಷ್ಟು ಹಣ ಖರ್ಚಾಗಿದೆ ಎಂದು ನಾಡಿನ ಜನರ ಮುಂದೆ ಬಹಿರಂಗಪಡಿಸಲಿ  ಎಂದೂ  ಆಕ್ರೋಶ ವ್ಯಕ್ತಪಡಿಸಿದರು.  ಈವರೆಗೆ ದೇಶದ ಪ್ರಧಾನಿ, ಸಿಎಂ ಹೇಳಿದ್ದನ್ನು ಜನ ಮೂಖ ಪ್ರೇಕ್ಷಕರಾಗಿ ಪಾಲಿಸಿದ್ದಾರೆ ಊಟ ಇಲ್ಲದೆ ಸಾವಿರಾರು ಕುಟುಂಬ ಸಾಯುವ ಪರಿಸ್ಥಿತಿ ನಿರ್ಮಾಣವಾಗಿದೆ  ಜನರ ಕಷ್ಟ ಪರಿಹರಿಸಿ ಎಂದು ಹೇಳಿದರು. ಎಂಎಲ್ಎ, ಎಂಎಲ್ಸಿ ಅನುದಾನ ನಿಲ್ಲಿಸಬೇಡಿ, ಈ ಬಗ್ಗೆ ಪುನರ್ ಪರಿಶೀಲನೆ ಮಾಡಬೇಕು ಕೊರೊನಾ ವಿಷಯದಲ್ಲಿ ಕೇಂದ್ರ, ರಾಜ್ಯ ಸರ್ಕಾರ ಒಂದು ಸಮುದಾಯವನ್ನು  ಗುರಿ ಮಾಡುವುದು ಬೇಡ ಬೇಡ ಎಂದು ಮಾಜಿ ಸಚಿವ  ರೇವಣ್ಣ ಹೇಳಿದರು.