ಕೆಎಲ್‌ಇ ಶಿಕ್ಷಣ ಸಂಸ್ಥೆಯ 5 ವಿದ್ಯಾರ್ಥಿಗಳು ಅಗ್ನಿವೀರ ಸೇನೆಗೆ ಆಯ್ಕೆ

ಕೆಎಲ್‌ಇ ಶಿಕ್ಷಣ ಸಂಸ್ಥೆಯ 5 ವಿದ್ಯಾರ್ಥಿಗಳು ಅಗ್ನಿವೀರ ಸೇನೆಗೆ ಆಯ್ಕೆ 5 students of KLE Educational Institute selected for Agniveer Sena


ಮಾಂಜರಿ, 25 : ಜಗತ್ತಿನಲ್ಲಿ ಭಾರತೀಯ ಸೇನೆಗೆ ಅಮೂಲ್ಯವಾದ ಸ್ಥಾನ ಇದ್ದು  ಗ್ರಾಮೀಣ ಭಾಗದ ಯುವಕರು ತನ್ನ ಮಾತೃಭೂಮಿ ರಕ್ಷಣೆಗಾಗಿ ಭಾರತೀಯ ಸೇನೆಯಲ್ಲಿ ಪಾಲ್ಗೊಂಡು ದೇಶ ಸೇವೆಗೆ ಮುಂದಾಗಬೇಕೆಂದು ರಾಜ್ಯಸಭೆಯ ಮಾಜಿ ಸದಸ್ಯ ಹಾಗೂ ಕೆಎಲ್‌ಇ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷರಾಗಿರುವ ಡಾ ಪ್ರಭಾಕರ್ ಕೋರೆ ಹೇಳಿದರು  

ಅವರ ಇಂದು ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿರುವ ಕೆಎಲ್‌ಇ ಶಿಕ್ಷಣ ಸಂಸ್ಥೆಯ ಶಾರದಾದೇವಿ ಕೋರೆ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ 5 ಎನ್‌ಸಿಸಿ ಕ್ಯಾಡಟಗಳ ಭಾರತೀಯ ಸೇನೆಯ ಅಗ್ನಿವೀರ ನೇಮಕಾತಿಯಲ್ಲಿ ಆಯ್ಕೆಯಾಗಿ ಸಂದರ್ಭದಲ್ಲಿ ಅವರನ್ನು ಸನ್ಮಾನಿಸುವ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು ಸುರಜ್ ಸಾವಂತ್‌. ಸಂದೀಪ್ ಕಮತೆ. ಸುದರ್ಶನ್ ಪಡದಾಳೆ. ಪ್ರವೀಣ್ ಚೌಗುಲೆ. ಕೃಷ್ಣಾತ್ ಹೆದ್ದೂರೆ 5 ವಿದ್ಯಾರ್ಥಿಗಳು ಭಾರತೀಯ ಸೇನೆಯ ಅಗ್ನಿವೀರ ನೇಮಕಾತಿಯಲ್ಲಿ ಆಯ್ಕೆಯಾಗಿದ್ದಾರೆ. 

ಈ ಯುವಕರ ಸನ್ಮಾನ ಸಮಾರಂಭದಲ್ಲಿ ರಾಯಬಾಗ್ ಶಾಸಕ ದುರ್ಯೋಧನ ಐಹೊಳೆ ಚಿದಾನಂದ ಪೂರೈ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಕೋರೆ ಉಪಾಧ್ಯಕ್ಷರಾದ ತಾತ್ಯಾಸಾಹೇಬ್ ಕಾಟೆ ನಿರ್ದೇಶಕರಾದ ಮಲ್ಲಪ್ಪ ಮೈಶಾಲೆ ಅಜಿತ್ ರಾವ್ ದೇಸಾಯಿ ಸುರೇಶ್ ಪಾಟೀಲ್ ಕೆಎಲ್‌ಇ ಸಂಸ್ಥೆಯ ಅಜೀವ ಸದಸ್ಯರಾದ ಬಿ ಎಸ್ ಅಂಬಿ ಪ್ರಾಚಾರ್ಯ ಪಿಎನ್ ತಳವಾರ್ ಎನ್‌ಸಿಸಿ ಅಧಿಕಾರಿಗಳಾದ ಸಂತೋಷ್ ಖೋತ್ ಹಾಗೂ ಮಹಾವಿದ್ಯಾಲಯದ ಸಿಬ್ಬಂದಿ ಹಾಜರಿದ್ದರು.