ಹೊನ್ನಾವರ ತಾಲೂಕಿನಲ್ಲಿ ಸತತ 5 ಗಂಟೆ ಮಳೆ : 91.5 ಮಿಲಿಮೀಟರ್ ಮಳೆ
5 hours of continuous rain in Honnavar taluk: 91.5 millimeters of rain
ಹೊನ್ನಾವರ ತಾಲೂಕಿನಲ್ಲಿ ಸತತ 5 ಗಂಟೆ ಮಳೆ : 91.5 ಮಿಲಿಮೀಟರ್ ಮಳೆ
ಕಾರವಾರ 26 : ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ದಲ್ಲಿ ರವಿವಾರ ಭಾರೀ ಮಳೆ ಸರಿಯಿತು. ರವಿವಾರ ಬೆಳಗಿನ ಜಾವ 2 ಗಂಟೆಯಿಂದ 5 ಗಂಟೆ ತನಕ ಸತತ ಮಳೆ ಸುರಿಯಿತು. ಕಾರವಾರ ತಾಲೂಕಿನ ಸಣ್ಣ ಮಳೆಯಾದರೆ, ಕುಮಟಾ ,ಭಟ್ಕಳ ಪಟ್ಟಣ ಮತ್ತು ಗ್ರಾಮಾಂತರ ಭಾಗದಲ್ಲಿ ಮಳೆ ಸುರಿಯಿತು. ಅಂಕೋಲಾದ ಹಾರವಾಡ, ಬೇಲೇಕೇರಿ.ಭಾವಿಕೇರಿ, ಕುಮಟಾದ ಹನೇಹಳ್ಳಿ ಯಲ್ಲಿ ಮಳೆ ಪ್ರಮಾಣ ತಗ್ಗಿತ್ತು . ಕರಾವಳಿ ತಾಲೂಕುಗಳಲ್ಲಿ ಆಗಾಗ ರಭಸದಮಳೆ ಮುಂದುರಿದಿದೆ . ಹೊನ್ನಾವರದ ಕಾಸರಕೋಡ 91.5 ಮಿಲಿಮೀಟರ್, ಕಡ್ಲೆ 83, ಜಾಲಿ 86, ಹೊಸಾಕುಳಿ 82, ಕೆಳಗಿನೂರು 81 , ಸಾಲ್ಕೊಡು 75, ಮಾವಿನ ಕುರ್ವಾದಲ್ಲಿ 75, ಕರ್ಕಿ 70, ಬೆಂಗ್ರೆ ದಲ್ಲಿ 68, ಹೊನ್ನಾವರದ ಮುಗ್ವಾ ದಲ್ಲಿ 64, ಮುಟ್ಟಳ್ಳಿ 68, ಕಾಗಾಲ 59, ದೀವಗಿ 55.5, ವಾಲಗಳ್ಳಿ, 50.5, ಹನೇಹಳ್ಳಿ 34.5 ಗೋಟೆಗಾಳಿ 42,ವಂದಿಗೆ 43 , ಗೇರುಸೊಪ್ಪ 12 ಮಿಲಿಮೀಟರ್ ಮಳೆಯಾಗಿದೆ. ಇನ್ನು ಘಟ್ಟದ ಮೇಲೆ ದಾಂಡೇಲಿ ,ಹಳಿಯಾಳದಲ್ಲಿ ರವುವಾರ ತುಂತುರು ಮಳೆಯಾಗಿದೆ. ಘಟ್ಟದ ಇತರೆ ತಾಲೂಕುಗಳಲ್ಲಿ ಸಹ ಸಣ್ಣ ಮಳೆ ಸುರಿದಿದೆ. ಎಲ್ಲಿಯೂ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಅ.27 ರತನಕ ಮಳೆ ಮುಂದುವರಿಯಲಿದೆ .ಕಡಲಿಗೆ ಇಳಿಯದಂತೆ ರವಿವಾರ ಸಹ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ. .....
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 