ರೋಣಿಹಾಳದಲ್ಲಿ 5 ದಿನ ರಾಣಿ ಚೆನ್ನಮ್ಮನವರ ಪ್ರವಚನ ಕಾರ್ಯಕ್ರಮ

ರೋಣಿಹಾಳದಲ್ಲಿ 5 ದಿನ ರಾಣಿ ಚೆನ್ನಮ್ಮನವರ ಪ್ರವಚನ ಕಾರ್ಯಕ್ರಮ 5-day discourse program by Rani Chennamma in Ronihala

ವಿಜಯಪುರ 25:  ಶ್ರೀ ವೀರ ಮಾತೆ ರಾಣಿ ಚೆನ್ನಮ್ಮನವರ ಪ್ರವಚನ ಕಾರ್ಯಕ್ರಮವು ವಿಜಯಪುರ ಜಿಲ್ಲೆ ಕೋಲ್ಹಾರ (ರೋಣಿಹಾಳ)ದಲ್ಲಿ ದಿ. 26 ರಿಂದ 30ರವರೆಗೆ 5 ದಿನಗಳವರೆಗೆ ಸಂಜೆ 7 ರಿಂದ 8 ಗಂಟೆಯವರೆಗೆ ಪ್ರವಚನ ಕಾರ್ಯಕ್ರಮ ಜರುಗಲಿವೆ.  

ಪ್ರವಚನಕಾರರಾಗಿ ಪ. ಪೂ. ಕವಿಶ್ರೀ ಶ್ರೀ ಸಂಗಮೇಶ ಸ್ವಾಮಿಗಳು ಸಿದ್ಧಸಿರಿ ಅರೈತ ಆಶ್ರಮ, ವಿಜಯಪುರರವರು ಪ್ರವಚನ ನೀಡಲಿದ್ದಾರೆ ಎಂದು ಮಲ್ಲನಗೌಡ ಸೋಮನಗೌಡ ಪಾಟೀಲ ತಿಳಿಸಿದ್ದಾರೆ. 

ಈ ಕುರಿತು ಪ್ರಕಟಣೆ ನೀಡಿದ ಅವರು, ಅದರಂತೆ ನಾಡಿನ ವಿವಿಧ ಮಠಾಧೀಶರು, ಶರಣರು, ಸಂತರು, ವಿವಿಧ ರಾಜಕೀಯ ಮುಖಂಡರು ಹಾಗೂ ಗಣ್ಯಮಾನ್ಯರು ಉಪಸ್ಥಿತಿ ವಹಿಸುವರು. 

ಅದು 1778-1829ರ ಸಮಯ, ಗಂಗೆಯ ಬಯಲಲ್ಲಿ ಯಲಲ್ಲಿ ಕಾಡತೂಸಿನ ಧಡ್ ಧಡಾರ್ ಸಪ್ಪಳ,  

ಕೃಪೆಯ ಕಣಿವೆಯಲ್ಲಿ ರಕ್ತದ ಕಾಲುವೆ, ಘಟಪ್ರಭೆಯ ತಟದಲ್ಲಿ ಕುದಿಯುವ ಅಗ್ನಿ ಪರ್ವತ, ಮಲಪ್ರಭೆಯ ದಂಡೆಯಲ್ಲಿ ಹರ ಹರ ಮಹಾದೇವ' ವ್ಯಾಪಾರಕ್ಕೆಂದು ಈ ದೇಶಕ್ಕೆ ಬಂದು 'ಒಡೆದು ಆಳುವ ನೀತಿಯಿಂದ, ದತ್ತು ಸ್ವೀಕರದ ಕುರಿತು ಯುದ್ಧ ಸಾಲದವರ ಕಥೆ ರಾಜ್ಯಗಳನ್ನು ವಾಡೆಗಳನ್ನು ಅರಸೊತ್ತಿಗೆಗಳನ್ನು ಒಂದೊಂದಾಗಿ ಕಬಳಿಸಿದ ಬ್ರಿಟೀಷ್ ಸರ್ಕಾರದ ವಿರುದ್ಧ ಧಗಧಗಿಸುವ ಜ್ವಾಲೆಯಂತೆ, ತನ್ನ ಸಂಪರ್ಕಕ್ಕೆ ಬಂದವರನ್ನು ಬೆಂಕಿ ಕಿಡಿಯಾಗಿ ಪರಿವರ್ತಿಸಿ, ಅವರಿಗೆ ಸ್ವಾತಂತ್ರ್ಯದ ಕಿಚ್ಚು ಹಚ್ಚಿ ಪಾರತಂತ್ರ್ಯದ ವಿರುದ್ಧ ದೇಸಾಭಿಮಾನದ ಕತ್ತಿ ಎತ್ತಿದೆ ದಿಟ್ಟ ಮಹಿಳೆ. "ಕಿತ್ತೂರ ರಾಣಿ ಚೆನ್ನಮ್ಮ ಕಾಕತಿಯ ಧೂಳಪ್ಪಗೌಡ - ಪದ್ಮಾವತಿಯ ಏಕಮಾತ್ರ ಪುತ್ರಿ, ಕಿತ್ತೂರಿನ ಹನ್ನೊಂದನೆಯ ಅರಸ ಮಲ್ಲಸರ್ಜ ದೇಸಾಯವರ ಪ್ರೀತಿಯ ಮಡದಿ, ವಿಜಯಪುರ ಜಿಲ್ಲೆಯ ಕೊಟ್ನಾಳ-ಜಂಬಗಿ ದೇಶಮುಖರ ಮೊಮ್ಮಗಳು ಅವಳ ಜೀವನ ಭಾರತ ಸ್ವಾತಂತ್ರ್ಯ ಸಂಗ್ರಾಮದ ಸ್ವರ್ಣ ಅಧ್ಯಾಯ ಸ್ವಯಂ ಬೆಳಕು ನಿಗಿನಿಗಿ ಕೆಂಡದಂತೆ ಅವಳ ಮುಂದಾಳತ್ವದ ರಾಜ್ಯಭಾರ.ಛಿ1824 ಅಕ್ಟೋಬರ 23ರ ಕಿತ್ತೂರಿನ ಘಟನೆ ನೆನೆದುಕೊಂಡರೆ. ನೆನೆದವರ ಹೃದಯ ಕಂಪಿಸುತ್ತದೆ ಽ ಮನಸ್ಸು ಕೊತ ಕೊತ ಕುದಿಯುತ್ತದೆ !! ರೋಮಗಳು ನಿಮಿರುತ್ತವೆ !!! ದಂತಗಳು ದಡಬಡಿಸುತ್ತವೆ. ದೇಹ ಕಲಮಲಗೊಂಡು ಜಲ ಹೊರಸೂಸುತ್ತದೆ ! ಬ್ರಟೀಷ್ ಸೈನ್ಯಾಧಿಕಾರಿ 24. ವಿಂಡ್‌ಹ್ಯಾಮ್ ನ ದಂಡು ಮುಗ್ಗರಿಸಿದ್ದು, ಮುಂಬಯಿನ ಮನೋಜಾಪ್ಲಿನ್ ಛಾತಿ ಚದುರಿದ್ದು, ಕಲಕತ್ತೆಯ ಕರ್ನಲ್ ಪಿಯರ್‌ಸನ್ ಕಂಗೆಟ್ಟಿದ್ದು, ಇಂಗ್ಲಂಡೆದ ವೆಲ್ಲೆಸ್ಲಿ ಇಲ್ಲವಾಗಿದ್ದು, ಧಾರವಾಡದ ಕಲೆಕ್ಟರ್ ಥ್ಯಾಕರೆಯ ರುಂಡ ಚಂಡಾಡಿದ್ದು ಆ ಸಮಯದ ರೋಮಾಂಚನಕಾರಿ ಘಟನೆಗಳು. ಸರ್ದಾರ ಗುರುಸಿದ್ದಪ್ಪ, ಅಮಟೂರ ಬಾಳಪ್ಪ, ಸಂಗೊಳ್ಳಿ ರಾಯಣ್ಣ, ಬಿಚ್ಚುಗತ್ತಿ ಚೆನ್ನಬಸಪ್ಪ, ಸುಭೆದಾರ ಅಂಗಪ್ಪ, ಅವರಾದಿ ವೀರ​‍್ಪ, ಒಬ್ಬರೆ...! ಇಬ್ಬರೆ ..!! ಎಲ್ಲರೂ ಗಜವೀರರೇ, ಆಂಗ್ಲರ ವಿರುದ್ಧ ಭಾರತೀಯ ಸಂಸ್ಥಾನಿಕರು ಕೈಗೊಂಡ ಸಂಸ್ಥಾನಿಕ ಪ್ರಥಮ ಯುದ್ಧ ಇದು. ರಕ್ತದ ಹೊಳೆ ಹರಿಸಿ, ನೆತ್ತರದಲ್ಲಿ ತೇಲಾಡಿಸಿದವರಿವರು. ಗೆದ್ದ ಕಿತ್ತೂರ ತಂದು ಉದ್ದ ಬೀಳುವೆ ತಾಯಿ ಕದ್ದ ಮಾತಲ್ಲ, ನಿಮ್ಮಾಣಿ ಇಲ್ಲದಿರಕ ಬಿದ್ದು ಹೋಗುವ ರಣದಾಗ ಎಂಬುದು ಬಂಟ ಸಂಗೊಳ್ಳಿ ರಾಯಣ್ಣನ ಪ್ರತಿಜ್ಞೆಯಾಗಿತ್ತು. ಕಿತ್ತೂರು ಅರಸರಿಗೆ ರಾಜಗುರುಗಳಾಗಿದ್ದ ಕಲ್ಮಠದ ಗುರುಸಿದ್ದ ಮಹಾಸ್ವಾಮಿಗಳು ಪೀಠ ಪರಂಪರೆಯ ಆಗಿನ ಪೂಬ್ಬರು ಚೆನ್ನಮ್ಮಳಿಗೆ ಶ್ರೀರಕ್ಕೆ ಹಾಗೂ ಮಾರ್ಗದರ್ಶಕರಾಗಿದ್ದರು. ಮಠದಲ್ಲಿ ಹಾಲು-ಹುಗ್ಗಿ ಉಣಲಿಲ್ಲ. ಕೇಸರಿ ಬಣ್ಣದ ಕಾವಿ ಉಡಲಿಲ್ಲ, ಬದಲಿಗೆ ದೇಶಾಭಿಮಾನದ ನೂಲು ನೇಯ್ದರು ಮಠದಲ್ಲಿ ಕರ​‍್ೂರ - ಗುಗ್ಗಳ ಸುಡಲಿಲ್ಲ, ವಿದೇಶಿ ಬಟ್ಟೆ ಸುಟ್ಟರು. ಓಂ ನಮಃ ಶಿವಾಯ ಮಂತ್ರ ಜಪಿಸಲಿಲ್ಲ ಹರ ಹರ ಮಹಾದೇವ' ಎಂಬ ಯುದ್ಧ ಮಂತ್ರ ಹೇಳಿದರು. ರಾಜಗುರುಗಳು ರಾಜಮಾತೆ ಚೆನ್ನಮ್ಮಳಿಗೆ ಆದರ್ಶವಾದರು. ಅದಕ್ಕಾಗಿಯೇ 'ಚೆನ್ನಮ್ಮ ಎಂಬೋಳು ಸೀಮೆಗೆ ದೊಡ್ಡವಳು ಕಿತ್ತೂರ ಪ್ರಜೆಗಳ ಸೆರಗಲ್ಲಿ ಕಟಗೊಂಡು ಯುದ್ಧಕ್ಕೆ ಹೊಂಟಾಳ ಮುಂದಾಗಿ' ಎಂಬ ಜನಪದರ ಕಾವ್ಯ, ರಾಣಿ ಚೆನ್ನಮ್ಮನಳ ಇತಿಹಾಸವನ್ನು ಸಾರಿ ಹೇಳತ್ತದೆ. ಥ್ಯಾಕರೆ ಯುದ್ಧದಲ್ಲಿ ಮಡಿದರೂ ಬದುಕುಳಿದ ವೈರಿಗಳನ್ನು ಕಿತ್ತೂರು ಸೈನಿಕರು ಕೊಲ್ಲಲು ಮುಂದಾದಾಗ ಅವರನ್ನು ಬದುಕಿಸಿ, ಇಂಗ್ಲೆಂಡಿಗೆ ಒಪ್ಪಿಸಿದ ಓದಾರ್ಯತೆ ಆ ರಾಜಮಾತೆಯದ್ದು ಚೆನ್ನಮ್ಮನವರದ್ದು.  

ವಿಜಯಪುರ ಜಿಲ್ಲೆಯ ದೇಶಾಭಿಮಾನಿಗಳು ರಾಜ್ಯಮಾತೆ ಚೆನ್ನಮ್ಮಳ ಪ್ರವಚನ ಕೇಳಿ ಪುನಿತರಾಗಬೇಕೇಂದು ಮಲ್ಲನಗೌಡ ಸೋಮನಗೌಡ ಪಾಟೀಲ ಮನಗೂಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.