ನ್ಯೂ ಜಿಲೆಂಡಿನಲ್ಲಿ 5.3ತೀವ್ರತೆಯ ಭೂಕಂಪನ

ಬೀಜಿಂಗ್, ಜನವರಿ 18, ನ್ಯೂಜಿಲೆಂಡ್‌ನ ರೌಲ್ ದ್ವೀಪದಲ್ಲಿ   ಭೂಕಂಪನ  ಸಂಭವಿಸಿದ್ದು ಅದರ ತೀವ್ರತೆ  ರಿಕ್ಟರ್ ಮಾಪನದಲ್ಲಿ 5.3 ಎಂದು ದಾಖಲಾಗಿದೆ. ರೌಲ್ ದ್ವೀಪದ 178 ಕಿಲೊಮೀಟರ್ ದೂರದಲ್ಲಿ ಕಂಪನ ಶನಿವಾರ ಸಂಭವಿಸಿದೆ ಎಂದು ಅಮೆರಿಕ  ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ.29.62 ಡಿಗ್ರಿ ದಕ್ಷಿಣ ಅಕ್ಷಾಂಶ ಮತ್ತು 176.1014 ಡಿಗ್ರಿ ಪಶ್ಚಿಮ ರೇಖಾಂಶದಲ್ಲಿ ಕಂಪನದ ಕೇಂದ್ರ ಬಿಂದು ದಾಖಲಾಗಿತ್ತು ಎನ್ನಲಾಗಿದೆ.