ಬೀಜಿಂಗ್, 25 ದಕ್ಷಿಣ ಚೀನಾದ ಗ್ವಾಂಗ್ಸಿ ಶ್ಯಾಂಗ್ ಸ್ವಾಯತ್ತ ಪ್ರದೇಶದಲ್ಲಿ ಸೋಮವಾರ ಬೆಳಗ್ಗೆ ಭೂಕಂಪವಾಗಿದೆ ಎಂದು ಚೀನಾ ಭೂಕಂಪ ಸಂಪರ್ಕ ಕೇಂದ್ರ (ಸಿಇಎನ್ ಸಿ) ತಿಳಿಸಿದೆ. ರಿಕ್ಟರ್ ಮಾಪನದಲ್ಲಿ 5.2. ತೀವ್ರತೆಯ ಭೂಕಂಪನ ದಾಖಲಾಗಿದ್ದು, 22.89 ಡಿಗ್ರಿ ಉತ್ತರ ಅಕ್ಷಾಂಶ ಮತ್ತು 106.65 ಡಿಗ್ರಿ ಪೂರ್ವ ರೇಖಾಂಶದಲ್ಲಿ ಇದರ ಕೇಂದ್ರಸ್ಥಾನ ಪತ್ತೆಯಾಗಿದೆ. ಭೂಮಿಯ 10 ಕಿಮೀ ಆಳದವರೆಗೆ ಕಂಪನ ಸಂಭವಿಸಿದೆ ಎಂದು ವರದಿ ತಿಳಿಸಿದೆ. ಯಾವುದೇ ಸಾವು ನೋವುಗಳ ಕುರಿತು ಇನ್ನೂ ವರದಿಯಾಗಿಲ್ಲ.