452 ನೇ ಮಾಸಿಕ ಶಿವಾನುಭವ ಘೋಷ್ಠಿಗೆ ಚಾಲನೆ

452 ನೇ ಮಾಸಿಕ ಶಿವಾನುಭವ ಘೋಷ್ಠಿಗೆ ಚಾಲನೆ 452nd Monthly Shivanubhav Ghoshti Launched

452 ನೇ ಮಾಸಿಕ ಶಿವಾನುಭವ ಘೋಷ್ಠಿಗೆ ಚಾಲನೆ 

ಯಮಕನಮರಡಿ 14 : ಸ್ಥಳಿಯ ಜಗದ್ಗುರು ಶೂನ್ಯ ಸಂಪಾಧನಾ ಹುಣಸಿಕೊಳ್ಳಮಠದಲ್ಲಿ ದಿನಾಂಕ 13 ರಂದು ಬಸವಾದಿ ಶರಣರ ಕೃಪಾ ಬೆಳಕಿನಲ್ಲಿ ಮಾಸಿಕ ಸತ್ಸಂಗ ಮಹಾಮನೆಯ ತತ್ವೋಪದೇಶ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಉಪನ್ಯಾಸಕರಾಗಿ ಶರಣಿಯರಾದ ಸವಿತಾ ಮತ್ತಿಕಟ್ಟಿ ಬೆಳಗಾವಿ ಇವರು ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಾ ವಿಭೂತಿ ಎಂದರೇನು ಪ್ರಕಾರಗಳು ಮತ್ತು ಪ್ರಯೋಜನೆಗಳು ಹೀಗೆ ಹಲವಾರು ವಿಷಯಗಳನ್ನು ಮಾರ್ಮಿಕವಾಗಿ ತಿಳಿಸಿ ಹೆಳಿದರು. ಅಷ್ಟವರ್ಣ ಪಂಚಾಕ್ಷರಿ ಶತಸ್ಥಳ, ವಿಭೂತಿಗಳಿದ್ದು ಮೋದಲು ಆಕಳು ಸ್ವಚ್ಚವಾಗಿರಬೇಕು ಆಕಳ ಕೊಠಡಿ ಸ್ವಚ್ಚತೆಯಿಂದ ಕೂಡಿರಬೇಕು ಆಕಳ ಶಗಣಿಯಿಂದ ವಿಭೂತಿಯನ್ನು ತಯ್ಯಾರಿಸಲಾಗುತ್ತದೆ. ಚೌಕಾಕಾರ ಗುಂಡಾಕಾರ ಈ ಪ್ರಕಾರವಾಗಿ ವಿಭೂತಿಗಳನ್ನು ತಯ್ಯಾರಿಸಿ ಸದಾ ಗಟ್ಟಿ ಕ್ರಿಯಾಗಟ್ಟಿ ವಿಭೂತಿಗಳ ಬಗ್ಗೆ ತಿಳಿಸಿದರು. ಶಿವಯೋಗಿ ಮಂದಿರದಲ್ಲಿ ದೊರೆಯುವ ವಿಭೂತಿಯನ್ನು ಪ್ರತಿಯೋಬ್ಬರು ಲಿಂಗಾಯತರು ಪ್ರತಿನಿತ್ಯವು ಹಣೆಯ ಮೇಲೆ ದರಿಸುವುದರಿಂದ ಸಾಂಕ್ರಾಮಿಕ ಬಾದೆಗಳು ವಿಬೂತಿಯಿಂದ ಹೊಗುತ್ತವೆ. ಇವತ್ತಿನ ದಿನಮಾನಗಳಲ್ಲಿ ಲಿಂಗಾಯತರು ವಿಭೂತಿ ಧರಿಸುತ್ತಿಲ್ಲ ಆದರೂ ತಂದೆ ತಾಯಿಗಳು ಮಕ್ಕಳಲ್ಲಿ ಸಂಸ್ಕಾರ ಜೊತೆಗೆ ವಿಭೂತಿಯನ್ನು ಧರಿಸಿಕೊಳ್ಳುವುದನ್ನು ಕಲಿಸಬೇಕು. ಹಾಗೂ ಕರೆ ಮತ್ತು ಬಿಳಿ ಬಟ್ಟೆಗಳ ಬಗ್ಗೆ ಮಕ್ಕಳಿಗೆ ತಿಳಸಬೇಕು ಮನುಷ್ಯನಿಗೆ ಬಿಳಿಬಟ್ಟೆ ಅತ್ಯವಶ್ಯಕ ಕುಂಬಾರ ಗುಂಡಯ್ಯನ ಕಥೆ ಬಗ್ಗೆ ಸವಿಸ್ಥಾರವಾಗಿ ತಿಳಿಸಿದರು ಸಾನಿಧ್ಯ ವಹಿಸಿದ್ದ ಸಿದ್ದಬಸವ ದೇವರು ಗುರುಸಿದ್ದ ಮಹಾಸ್ವಾಮಿಗಳು ರಾಚೋಟಿಮಹಾಸ್ವಾಮಿಗಳು ಶ್ರೀ ಮಠದಲ್ಲಿ ಶಿವಾನುಭವ ಘೋಷ್ಠಿ ನಡೆಸುತ್ತಾ ಬಂದಿದ್ದರು ಅದೇ ಪರಂಪರೆಯನ್ನು ಮುಂದು ವರೆಸುತ್ತಿದ್ದೇವೆ. ವಿಭೂತಿಯಲ್ಲಿ ವಿಶಿಷ್ಠವಾದ ಶಕ್ತಿ ಇದೆ ಹಾಗೂ ಬಸವ ಸಂಸ್ಕೃತಿ ಅಭಿಯಾನದ ಮತ್ತು ಜಾತಿ ಗಣತಿ ಸಮೀಕ್ಷೇಯಲ್ಲಿ ಲಿಂಗಾಯತ ಧರ್ಮದವರು ಲಿಂಗಾಯತ ಎಂದು ನಮೂದಿಸಬೇಕು ಧರ್ಮದ ಕಾಲಮಯದಲ್ಲಿ ತಿಳಿಪಡಿಸಿದರು. ಕಾರ್ಯಾಕ್ರಮದಲ್ಲಿ ಕಣಗಲಾ ಗ್ರಾಮದ ಹಾಗೂ ಸ್ಥಳೀಯ ಅಕ್ಕನ ಬಳಗದವರು ಸರ್ವ ಬಳಗದವರು ಪತ್ರಕರ್ತರಾದ ಗೋಪಾಲ ಚಪಣಿ ಉಪನ್ಯಾಸಕರಾದ ಎಸ್ ಆರ್ ತಬರಿ ಹಾಗೂ ಗ್ರಾಮದ ನಾಗರಿಕರು ಉಪಸ್ಥಿತರಿದ್ದರು.