ಬದುಕಿನ ಮೌಲ್ಯಗಳನ್ನು ಸಾಹಿತ್ಯದ ಮೂಲಕ ಗಾಢವಾಗಿ ತೋರಿಸಿಕೊಟ್ಟವರು ಬೇಂದ್ರೆ : ಡಾ. ಮಲ್ಲಿಕಾ ಘಂಟಿ
44th Remembrance Program of Dr. Bendre
ಧಾರವಾಡ 28: ಒಬ್ಬ ಕವಿ ಕಾಲಾನಂತರದಲ್ಲಿಯೂ ಇಂದಿನ ಯುವಕರು ಕಥೆ, ಕಾವ್ಯವನ್ನು ಕಟ್ಟುವಂತಹ ರೀತಿಯಲ್ಲಿ ಬದುಕಿದ್ದರು. ಆ ಎಲ್ಲ ಪ್ರಸಂಗಗಳು ಮಾನವೀಯ ನೆಲೆಯೊಳಗೆ ಇರುವಂತಹವುಗಳು ಮತ್ತು ಬದುಕಿನ ಮೌಲ್ಯಗಳನ್ನು ಬಹಳಷ್ಟು ಗಾಢವಾಗಿ ತಮ್ಮ ಸಾಹಿತ್ಯದ ಮೂಲಕ ತೋರಿಸಿಕೊಟ್ಟವರು ಬೇಂದ್ರೆಯವರು ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಮಲ್ಲಿಕಾ ಘಂಟಿ ಅವರು ಅಭಿಪ್ರಾಯಪಟ್ಟರು.
ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್, ಧಾರವಾಡ ವತಿಯಿಂದ ದಿನಾಂಕ: 26.10.2025ರಂದು ಸಂಜೆ ಡಾ.ದ.ರಾ.ಬೇಂದ್ರೆ ಭವನ ಧಾರವಾಡ ಇಲ್ಲಿ ವರಕವಿ ಡಾ.ದ.ರಾ.ಬೇಂದ್ರೆ ಅವರ 44ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿದ್ದ ಡಾ.ಮಲ್ಲಿಕಾ ಘಂಟಿ ಅವರು ಮಾತನಾಡುತ್ತ, ಬೇಂದ್ರೆಯವರು ಮತ್ತು ಬಸವರಾಜ ಕಟ್ಟೀಮನಿಯವರ ಒಡನಾಟವನ್ನು ಸ್ಮರಿಸುತ್ತ ಬೇಂದ್ರೆಯವರ ಸಾಹಿತ್ಯವನ್ನು ಸ್ಪರ್ಶಿಸುವುದು, ಅವರ ಕಾವ್ಯವನ್ನು ಪ್ರವೇಶಿಸುವುದು ಸಾಮಾನ್ಯವಾದುದಲ್ಲ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಧಾರವಾಡ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಪಿ.ಶುಭ ಅವರು ಮಾತನಾಡುತ್ತ ಬೇಂದ್ರೆಯವರು ಅಜ್ಜಿ ಗೋಧುಬಾಯಿ, ತಾಯಿ ಅಂಬವ್ವ ಅವರಿಂದ ಬಹಳಷ್ಟು ಪ್ರಭಾವಿತರಾಗಿದ್ದರು. ಹೆಂಡತಿಯನ್ನು ಸಖೀಯನ್ನಾಗಿ ನೋಡಿದವರು. ತಾಯಿ ಹೆಸರನ್ನೊಳಗೊಂಡು ತಮ್ಮ ಕಾವ್ಯನಾಮವನ್ನು ಅಂಬಿಕಾತನಯದತ್ತ ಎಂದು ಹೊಂದಿರುವುದು ಅವರ ಸ್ತ್ರೀಪರ ವಿಶೇಷ ನೋಟವನ್ನು ಗಮನಿಸಬಹುದಾಗಿದೆ. ಇಂದಿನ ಮಕ್ಕಳಿಗೆ ಬೇಂದ್ರೆಯವರ ಕಾವ್ಯದ ಸೊಗಡನ್ನು ಅರ್ಥೈಸಬೇಕಿದೆ ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ಟ್ರಸ್ಟ್ ಅಧ್ಯಕ್ಷ ಡಾ. ಸರಜೂ ಕಾಟ್ಕರ್ ಅವರು ಮಾತನಾಡುತ್ತ 44 ವರ್ಷಗಳ ಹಿಂದೆ ದೀಪಾವಳಿಯ ನರಕ ಚತುದರ್ಶಿಯಂದೇ ದ.ರಾ.ಬೇಂದ್ರೆಯವರು ಅಸ್ತಂಗತರಾಗಿದ್ದು, ಇಡೀ ಕನ್ನಡ ಸಾರಸ್ವತ ಲೋಕಕ್ಕೆ ಕತ್ತಲೆ ಆವರಿಸಿದಂತಾಗಿತ್ತು. 44 ವರ್ಷಗಳು ಗತಿಸಿದರೂ ಸಹ ಅವರು ತಮ್ಮ ಸಾಹಿತ್ಯದ ಮೂಲಕ ಓದುಗರ ಜನಮಾನಸದಲ್ಲಿ ಹಾಸುಹೊಕ್ಕಾಗಿದ್ದಾರೆ. ಬೇಂದ್ರೆಯವರ ಕಾವ್ಯವು ನವನವೀನವಾದ ಕಾವ್ಯಗಳಾಗಿವೆ. ಅವುಗಳನ್ನು ಎಷ್ಟು ಸಲ ಓದುತ್ತೇವೆಯೋ ಅಷ್ಟು ಹೊಸ ಹೊಸ ಅರ್ಥಗಳನ್ನು ನೀಡುತ್ತವೆ. ಬೇಂದ್ರೆಯವರಿಗೆ ಕರ್ನಾಟಕ ಸರ್ಕಾರವು ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡುವುದರ ಜೊತೆಗೆ ಅವರ ಜನ್ಮದಿನ ಜನೆವರಿ 31 ನ್ನು “ಕವಿದಿನ” ಎಂದು ಘೋಷಣೆ ಮಾಡಬೇಕೆಂದು ಆಗ್ರಹಿಸಿದರು.
ಧಾರವಾಡದ ಗಾಯಕಿ ವಿದುಷಿ ರಾಧಾ ದೇಸಾಯಿ ಮತ್ತು ವೃಂದದವರು ಡಾ.ದ.ರಾ.ಬೇಂದ್ರೆಯವರ ಗೀತೆಗಳ ಗಾಯನ ಪ್ರಸ್ತುತ ಪಡಿಸಿದರು. ಟ್ರಸ್ಟ್ ಸದಸ್ಯ ಕಾರ್ಯದರ್ಶಿ ಕುಮಾರ ಬೆಕ್ಕೇರಿ, ಸದಸ್ಯರಾದ ಡಾ.ಶಿಲಾಧರ ಮುಗಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಡಾ.ಅಶೋಕ ಶೆಟ್ಟರ, ಡಾ. ಶರಣಮ್ಮ ಗೊರೇಬಾಳ, ಇಮಾಮಸಾಬ್ ವಲ್ಲೆಪ್ಪನವರ, ಪ್ರಭು ಕುಂದರಗಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಅಪೂರ್ವ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 