ಐರಾವತ ಕ್ಷೇತ್ರ ಐರಣಿ ಹೊಳೆಮಠದಲ್ಲಿ ಮುಪ್ಪಿನಾರ್ಯ ಮಹಾತ್ಮಾಜಿಯವರ 41ನೇ ಪುಣ್ಯಾರಾಧನೆ
41st Commemoration of Muppinarya Mahatmaji at Airani Hole Mata, Airavat Kshetra
ರಾಣೇಬೆನ್ನೂರ 1 : ಮಠದ ಪರಂಪರೆ ಧಾರ್ಮಿಕ ಆಚಾರ ವಿಚಾರಗಳು ಎಲ್ಲಿ ನೆಲೆಯೂರಿರುತ್ತವೆ ಅಂತಹ ಮಠಗಳು ಹಾಗೂ ಆ ಕ್ಷೇತ್ರಗಳು ಪಾವಿತ್ರತೆಯಿಂದ ಕೂಡಿರುತ್ತವೆ. ಅಂತಹ ಪವಿತ್ರವಾದ ಶಕ್ತಿ ಕೇಂದ್ರವಾಗಿ ಹೊರಹೊಮ್ಮಿರುವುದು ಐರಣಿ ಹೊಳೆಮಠವೇ ಸಾಕ್ಷಿಯಾಗಿದೆ ಎಂದು ಮಾಜಿ ಶಾಸಕ ಅರುಣಕುಮಾರ ಪೂಜಾರ ಹೇಳಿದರು.ಶನಿವಾರ ತಾಲೂಕಿನ ಐರಾವತ ಕ್ಷೇತ್ರ ಐರಣಿ ಹೊಳೆಮಠದಲ್ಲಿ ನಡೆದ ಶ್ರೀ ಗುರು ಮುಪ್ಪಿನಾರ್ಯ ಮಹಾತ್ಮಾಜಿಯವರ 41ನೇ ವರ್ಷದ ಪುಣ್ಯರಾಧನೆ, ಸಾಮೂಹಿಕ ವಿವಾಹ, ತುಲಾಭಾರ, ಅಂಬಾರಿ ಉತ್ಸವ, ರಥೋತ್ಸವ ಕಾರ್ಯಕ್ರಮಗಳ ಧರ್ಮಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಐರಣಿ ಹೊಳೆಮಠವು ಬಸವರಾಜ ದೇಶೀಕೇಂದ್ರಮಹಾಸ್ವಾಮಿಗಳ ಶಕ್ತಿಯಿಂದ ಮಠವು ಅಪಾರ ಸಂಖ್ಯೆಯಲ್ಲಿ ಭಕ್ತರನ್ನು ಹೊಂದಿ ಶ್ರದ್ಧಾ ಭಕ್ತಿ ಕೇಂದ್ರವಾಗಿದೆ. ಇಂತಹ ಮಠದಲ್ಲಿ ಬರುವ ಭಕ್ತರೆಲ್ಲರೂ ಗುರುವಿನ ಮಾರ್ಗದಲ್ಲಿ ಮುನ್ನಡೆಯಬೇಕು ಅಂದಾಗ ನಿಮ್ಮ ಜೀವನ ಪಾವನವಾಗುವುದು ಎಂದರು.ಮಾಜಿ ಶಾಸಕ ಪ್ರಕಾಶ ಕೋಳಿವಾಡ ಮಾತನಾಡಿ, ಪ್ರಾಣಿ ಪಕ್ಷಿಗಳಿಗೆ ಇರುವ ಸೌಜನ್ಯ ಇಂದು ಇಲ್ಲದಾಂತಾಗಿದೆ.
ಯಾರೂ ಧರ್ಮದ ತಳಹದಿಯಲ್ಲಿ ಬದುಕುತ್ತಾರೋ ಅವರು ನೆಮ್ಮದಿಯಿಂದ ಇರಲು ಸಾಧ್ಯ. ಸಿದ್ದಾರೂಢರ ಪರಂಪರೆಯನ್ನು ಅರ್ಥೈಸಿಕೊಂಡು ಭಕ್ತಿಯ ಮಾರ್ಗದಲ್ಲಿ ಎಲ್ಲರೂ ಮುನ್ನಡೆದು ಜೀವನವನ್ನು ಸಾರ್ಥಕಗೊಳಿಸಿಕೊಳ್ಳಬೇಕು ಎಂದರು.ಹಿಪ್ಪರಗಿಯ ಶ್ರೀ ಸಿದ್ದಾರೂಢ ಶರಣರು ಮಾತನಾಡಿ, ಶ್ರೀ ಸಿದ್ದಾರೂಢರ ಹಾಗೂ ಮುಪ್ಪಿನಾರ್ಯರು ಸೇರಿದಂತೆ ಸಾಧು ಸಂತರ ಶರಣರ ಜೀವನ ಚರಿತ್ರೆಯನ್ನು ತಿಳಿಯಬೇಕು ಜೊತೆಗೆ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಅಂದಾಗ ನಿಮ್ಮ ಜೀವನ ಪಾವನವಾಗಲು ಸಾಧ್ಯ ಎಂದರು.ಸಿದ್ಧಾರೂಢರ ಹಲವಾರು ಪವಾಡಗಳು ಇವೆ. ಅವುಗಳನ್ನು ಅವರ ಪುರಾಣ ಕಥೆಗಳಲ್ಲಿ ಓದಿ ತಿಳಿದುಕೊಳ್ಳಬೇಕು. ಗುರುವಿನ ಮಾರ್ಗದಲ್ಲಿ ಮುನ್ನಡೆದು ಸನ್ಮಾರ್ಗದ ಬದುಕು ಕಟ್ಟಿಕೊಳ್ಳಬೇಕು. ಅಹಂಕಾರವನ್ನು ತೊರೆದು ಭಕ್ತಿಯ ಮಾರ್ಗದಲ್ಲಿ ಸಾಗಬೇಕು ಅಂದಾಗ ನಿಮ್ಮ ಜೀವನ ಸುಂದರವಾಗಿರಲು ಸಾಧ್ಯ ಎಂದರು.ಮಕ್ಕಳಿಗೆ ಧಾರ್ಮಿಕ ಮನೋಭಾವನೆಯನ್ನು ರೂಢಿಸಬೇಕು.
ಸಂಸ್ಕಾರ ಸಂಸ್ಕೃತಿಯನ್ನು ಕಲಿಸಬೇಕು ಅಂದಾಗ ನಿಮ್ಮ ಸುಂದರವಾದ ಕುಟುಂಬವು ಸುಸಂಸ್ಕೃತ ವಾಗಿರುತ್ತದೆ ಎಂದು ಶ್ರೀಗಳು ಹೇಳಿದರು.ಐರಣಿ ಹೊಳೆಮಠದ ಶ್ರೀ ಬಸವರಾಜ ದೇಶಿಕೇಂದ್ರ ಮಹಾತ್ಮಾಜೀಯವರು ಹಾಗೂ ನೂತನ ಪಟ್ಟಾಧಿಪತಿ ಶ್ರೀಸಿದ್ದಾರೂಢ ಭಾರತಿ ಸ್ವಾಮಿಗಳು ದಿವ್ಯ ಸಾನಿಧ್ಯವಹಿಸಿ ಆಶೀರ್ವಚ ನೀಡಿದರು. ಕುಳ್ಳೂರಿನ ಬಸವಾನಂದ ಭಾರತಿ ಶ್ರೀಗಳು, ಜೋಎಕುರಳಿಯ ಚಿದ್ಘನಾನಂದ ಭಾರತಿ ಶ್ರೀಗಳು, ಗದಗಿನ ಅಸುಂಡಿ ನೀಲಮ್ಮ ತಾಯಿಯವರು,ತೆಲಗಿಯ ಪೂರ್ಣಾನಂದ ಶ್ರೀಗಳು ಸೇರಿದಂತೆ ವಿವಿಧ ಮಠಾಧೀಶರು ನೇತೃತ್ವ ವಹಿಸಿದ್ದರು. ಐರಣಿ ಬಾಬಣ್ಣ ಶೆಟ್ಟರ, ಜಿಪಂ ಮಾಜಿ ಅಧ್ಯಕ್ಷ ಮಂಜುನಾಥ ಓಲೇಕಾರ, ಸಿದ್ದು ಚಿಕ್ಕಬಿದರಿ, ಚಂದ್ರಣ್ಣ ಬೇಡರ, ರಾಜಣ್ಣ ಮೋಟಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಭಕ್ತರಿಂದ ನಾಣ್ಯಗಳ ತುಲಾಭಾರ ಸೇವೆಗಳು ನೆರವೇರಿತು. ನಂತರ ಅಂಬಾರಿ ಉತ್ಸವ ಹಾಗೂ ರಥೋತ್ಸವವು ಸಕಲ ವಾದ್ಯಗಳೊಂದಿಗೆ ಸಹಸ್ರಾರು ಭಕ್ತರ ಮಧ್ಯೆ ಬಹು ವಿಜೃಂಭಣೆಯಿಂದ ಜರುಗಿತು. ಚಿತ್ರ: ತಾಲೂಕಿನ ಐರಣಿಹೊಳೆಮಠದಲ್ಲಿ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಸಮಾರಂಭವನ್ನು ಮಾಜಿ ಶಾಸಕ ಅರುಣಕುಮಾರ ಪೂಜಾರ ಉದ್ಘಾಟಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 