ಶ್ರೀ ಬಾಲಾಜಿ ದೇವಸ್ಥಾನದ 40ನೇ ವಾರ್ಷಿಕೋತ್ಸವ
40th Anniversary of Shri Balaji Temple
ಲೋಕದರ್ಶನ ವರದಿ
ಬೆಟಗೇರಿ 28 : ಸುಮಾರು 91 ವರ್ಷಗಳ ಹಿಂದೆ ಬೆಟಗೇರಿ ರಜಪೂತ ಗಲ್ಲಿಯಲ್ಲಿ ಚಿಕ್ಕದಾಗಿ ಶ್ರೀ ಬಾಲಾಜಿ ದೇವಸ್ಥಾನ ನಿರ್ಮಿಸಿದ್ದರು. ಸಮಾಜ ಬಾಂಧವರ, ಸದ್ಭಕ್ತರ ಸಹಾಯ ಸಹಕಾರದಿಂದ 1987 ರಲ್ಲಿ ದೇವಸ್ಥಾನ ನವೀಕರಣಗೊಂಡು ಹೊಸದಾಗಿ ಮೂರ್ತಿ ಪ್ರತಿಷ್ಠಾಪನೆಗೊಂಡಿತು. ದಿನಾಂಕ 28 ರಂದು ನಡೆದ ಈ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಹುಬ್ಬಳ್ಳಿಯ ರಜಪೂತ ಸಮಾಜದ ಮಹಿಳಾ ಮಂಡಳಿ ಯವರು ಶ್ರೀಮತಿ ಶೋಭಾ ಕಿಲ್ಲೇದಾರ ಅವರ ನೇತೃತ್ವದಲ್ಲಿ ವಿಧ್ಯಾ ರಜಪೂತ, ಲತಾ ರಜಪೂತ, ಉಮಾ ಎಸ್. ಸರೋಜನಿ ಕಡೆಮನಿ, ನಾಗವತಿ ರಜಪೂತ. ಸುರೇಖಾ ಬಿ,ಕಲ್ಪನಾ ಶಿವಾನಂದ, ಸುಧಾ ಹೋಳಿಯನ್ನವರ,.ಕಸ್ತೂರಿ, ಗೀತಾ ಧೋಂಡಗೆ, ವಿಜಯಾ ಬಧಿ, ರೇಖಾ ಬಧಿ, ಸೇರಿದಂತೆ ಹಲವಾರು ಸದ್ಭಕ್ತರು ಭಾಗವಹಿಸಿದ್ದರು. ಪ್ರಾರಂಭದಲ್ಲಿ ಗದಗ ಬೆಟಗೇರಿ ರಜಪೂತ ಸಮಾಜ ಅಧ್ಯಕ್ಷ ಗಣೇಶಸಿಂಗ ಬ್ಯಾಳಿ ಸ್ವಾಗತಿಸಿ ಪ್ರಸ್ತಾವಿಕ ಮಾತನಾಡಿದರು. ಕೊನೆಗೆ ಟಿ ಜಿ ಕಾಟೆವಾಲ ವಂದಿಸಿದರು.
ಮೈದುಂಬಿ ಹರಿಯುತ್ತಿರುವ ಘಟಪ್ರಭಾ ನದಿ: ಭರ್ತಿ ಹಂತದಲ್ಲಿ ಹಿಡಕಲ್ ಜಲಾಶಯ
ಎಚ್ಚರ ಅನಾಹುತಕ್ಕೆ ಕೈ ಮಾಡಿ ಕರೆಯುತ್ತಿದೆ: ರಸ್ತೆಯ ಭೂಗತ ವಿದ್ಯುತ್ ತಂತಿಯಿಂದ ಹೊರಬರುತ್ತಿದೆ ಬೆಂಕಿ ಕಿಡಿ-ಹೊಗೆ
ಹುಕ್ಕೇರಿ ತಾಲೂಕಿನ ಅತಿ ಹಿರಿಯ 107 ವಯಸ್ಸಿನ ನಾಗರಿಕ ನಿಜಪ್ಪ ಜಾಡರ್ ವಿಧಿವಶ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ 