ಕ್ಯೂಬಾ , ಡಿ 23, ನಾಲ್ಕು ದಶಕಗಳ ನಂತರ
ಮೊದಲ ಬಾರಿಗೆ ಕ್ಯೂಬಾದ ಪ್ರಧಾನ ಮಂತ್ರಿಯಾಗಿ ಪ್ರವಾಸೋದ್ಯಮ ಸಚಿವ ಎಮ್ಯಾನುಯೆಲ್
ಮಾರ್ರೆರೊ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. 56 ರ ಹರೆಯದ ಮರ್ರೆರೊ ಅವರನ್ನು ಸರ್ಕಾರದ ಮುಖ್ಯಸ್ಥರನ್ನಾಗಿ
ನೇಮಕ ಮಾಡಿರುವುದು ಕಮ್ಯುನಿಸ್ಟ್ ಪಕ್ಷದ ಆಡಳಿತ ವಿಸ್ತರಿಸುವ, ವಿಕೇಂದ್ರೀಕರಣ ಮತ್ತು ಹೊಸ ಪೀಳಿಗೆಯ ಬದಲಾವಣೆಯ ಪ್ರಕ್ರಿಯೆಯ
ಒಂದು ಭಾಗವಾಗಿದೆ. "ಈ ಪ್ರಸ್ತಾಪವನ್ನು ಕ್ಯೂಬಾದ
ಕಮ್ಯುನಿಸ್ಟ್ ಪಕ್ಷದ ರಾಜಕೀಯ ಬ್ಯೂರೋ ಅಂಗೀಕರಿಸಿದೆ" ಎಂದು ಅಧ್ಯಕ್ಷ ಮಿಗುಯೆಲ್ ಡಯಾಜ್-ಕ್ಯಾನೆಲ್ ದೇಶದ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ನಿರ್ಣಯ ಮಂಡಿಸಿದರು,ನಂತರ ಇದನ್ನು ಸರ್ವಾನುಮತದಿಂದ ಅಂಗೀಕರಿಸಿ ಸಹಿ ಹಾಕಲಾಯಿತು. ಪ್ರಧಾನ ಮಂತ್ರಿ ಸ್ಥಾನವನ್ನು ಕೊನೆಯ
ಬಾರಿಗೆ 1976 ರಲ್ಲಿ ಫಿಡೆಲ್ ಕ್ಯಾಸ್ಟ್ರೊ ನಿರ್ವಹಿಸಿದ್ದರು. ಕ್ಯಾಸ್ಟ್ರೊ ಅಧ್ಯಕ್ಷ ಪದವಿಗೇರಿದ್ದಾಗ ಈ ಹುದ್ದೆಯನ್ನು
ರದ್ದುಪಡಿಸಲಾಗಿತ್ತು.