ಇಡ್ಲಿಬ್ ನಲ್ಲಿ ಉಗ್ರರ ದಾಳಿ: 40 ಸಿರಿಯಾ ಯೋಧರು ಸಾವು

ಮಾಸ್ಕೊ, ಜ 23    :       ಇಡ್ಲಿಬ್ ನಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ 40 ಸಿರಿಯಾ ಸರ್ಕಾರಿ ಪಡೆಯ ಸೈನಿಕರು ಮೃತಪಟ್ಟಿದ್ದಾರೆ ಎಂದು ಸಿರಿಯಾದಲ್ಲಿನ ರಷ್ಯಾದ ಮರುಸಂಧಾನದ ಕೇಂದ್ರ ತಿಳಿಸಿದೆ.  

ಬುಧವಾರ ರಾತ್ರಿ ಸುಮಾರು 450 ಭಯೋತ್ಪಾದಕರು ದಾಳಿ ನಡೆಸಿದ್ದರು. ‘ ದಾಳಿಗಳಲ್ಲಿ ಸಿರಿಯಾ ಸರ್ಕಾರಿ ಪಡೆಗಳ 40 ಸೈನಿಕರು ಮೃತಪಟ್ಟಿದ್ದು, 80ಕ್ಕೂ ಸೈನಿಕರು ಗಾಯಗೊಂಡಿದ್ದಾರೆ.’ ಎಂದು ರಷ್ಯಾ ಕೇಂದ್ರದ ಪ್ರಕಟಣೆ ತಿಳಿಸಿದೆ. 

ಘರ್ಷಣೆಗಳಲ್ಲಿ ಸುಮಾರು 50 ಭಯೋತ್ಪಾದಕರು ಮೃತಪಟ್ಟಿದ್ದು, ಇತರ 90 ಮಂದಿ ಗಾಯಗೊಂಡಿದ್ದಾರೆ ಎಂದು ಕೇಂದ್ರ ತಿಳಿಸಿದೆ. 

ಮತ್ತೊಂದು ದಾಳಿ ಭೀತಿಯಿಂದ ಸರ್ಕಾರಿ ಪಡೆಗಳು ಆಗ್ನೇಯ ಭಾಗದಿಂದ ಸ್ಥಳಾಂತರಗೊಂಡಿವೆ. 

ಈ ಮಧ್ಯೆ, ಅಲೆಪ್ಪೊ ಮೇಲೆ ಸುಮಾರು 50 ಉಗ್ರರು ದಾಳಿ ಯತ್ನ ನಡೆಸಿದ್ದಾರೆ. ಆದರೆ, ದಾಳಿಯನ್ನು ನಿಗ್ರಹಿಸಲಾಗಿದ್ದು, ಘರ್ಷಣೆಯಲ್ಲಿ ಏಳು ಉಗ್ರರು ಹತರಾಗಿದ್ದಾರೆ. ಸಿರಿಯಾ ಸರ್ಕಾರಿ ಪಡೆಯ ಇಬ್ಬರು ಸೈನಿಕರು ಮೃತಪಟ್ಟು, ನಾಲ್ವರು ಗಾಯಗೊಂಡಿದ್ದಾರೆ ಎಂದು ಕೇಂದ್ರ ತಿಳಿಸಿದೆ.