ಕಾಲುವೆಗಳಿಗೆ ನೀರು ಹರಿಸುವ ಮೂಲಕ 40 ಸಾವಿರ ಎಕರೆ ಜಮೀನಿಗೆ ಅನಕೂಲ: ರಾಜು ಕಾಗೆ..!
40,000 acres of land are being damaged by diverting water to canals: Raju Kage..!
ಕಾಗವಾಡ 19: ಮತಕ್ಷೇತ್ರದ ಉತ್ತರ ಭಾಗದ ರೈತರ ಬಹು ನೀರೀಕ್ಷಿತ ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆಯ ಮುಖಾಂತರ ಸನ್ 2025-26 ನೇ ಸಾಲಿನಲ್ಲಿ ಕಾಲುವೆಗೆ ನೀರು ಹರಿಸುವ ಯೋಜನೆಗೆ ಎರಡು ಪಂಪ್‌ಸೆಟ್‌ಗಳನ್ನು ಪ್ರಾರಂಭಿಸುವ ಮೂಲಕ ಚಾಲನೆ ನೀಡಲಾಗಿದ್ದು, ಇದರಿಂದ ಯೋಜನೆಯ ಮೊದಲ ಹಂತದ ಮಧಬಾವಿ ಹಾಗೂ ಅನಂತಪೂರ ಜಿಲ್ಲಾ ಪಂಚಾಯತ ವ್ಯಾಪ್ತಿಯ 40 ಸಾವಿರ ಎಕರೆ ಜಮೀನಿನ ರೈತರಿಗೆ ಅನಕೂವಾಗಲಿದೆಯೆಂದು ಶಾಸಕ ರಾಜು ಕಾಗೆ ಹೇಳಿದರು.
ಅವರು ಗುರುವಾರ ದಿ. 19 ರಂದು ತಾಲೂಕಿನ ಐನಾಪೂರ ಪಟ್ಟಣದಲ್ಲಿ ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆಯ ಜಾಕವೆಲ್ ಬಳಿ ಕಾಲುವೆಗೆ ನೀರು ಹರಿಸುವ ಯೋಜನೆಗೆ ಚಾಲನೆ ನೀಡಿ ಮಾತನಾಡುತ್ತಿದ್ದರು. ಈ ಯೋಜನೆ ಕೆಲ ವರ್ಷಗಳ ಹಿಂದೆಯೇ ಪೂರ್ಣಗೊಳ್ಳಬೇಕಿತ್ತು. ಆದರೆ ಹಣಕಾಸಿನ ಕೊರತೆ, ಕರೋನಾ, ಪ್ರವಾಹದಂತಹ ಅಡತಡೆಗಳು ಸೇರಿದಂತೆ ತಾಂತ್ರಿಕ ದೋಷಗಳ ಪರಿಣಾಮ ನಿಗದಿತ ಸಮಯದಲ್ಲಿ ಪೂರ್ಣಗೊಳ್ಳಲಿಲ್ಲ. ಸುಮಾರು 1363 ಕೋಟಿಯ ರೂಪಾಯಿಯ ಯೋಜನೆ ಇದಾಗಿದ್ದು, ಈಗಾಗಲೇ 11 ನೂರು ಕೋಟಿ ಅನುದಾನದ ಕಾಮಗಾರಿ ಮುಕ್ತಾಯವಾಗಿದ್ದು, ಇನ್ನೂ ಸರಿಸುಮಾರು 200 ಕೋಟಿ ಅನುದಾನದ ಅವಶ್ಯಕತೆ ಇದೆ. ಕೂಡಲೇ ಸರ್ಕಾರದಿಂದ ಅನುದಾನ ಬಿಡುಗಡೆಗೊಳಿಸಿ, ಮುಂಬರುವ ನಾಲ್ಕು ತಿಂಗಳಲ್ಲಿ ಪೂರ್ಣ ಪ್ರಮಾಣದ ಕಾಮಗಾರಿ ಕೈಗೊಂಡು ಸುಮಾರು 70 ಸಾವಿರ ಎಕರೆ ಜಮೀನುಗಳಿಗೆ ನೀರು ಹರಿಸಲಾಗುವುದು ಎಂದು ಹೇಳಿದರು.
ಈ ವೇಳೆ ತುಂಬಿ ಹರಿಯುತ್ತಿರುವ ಕೃಷ್ಣಾ ನದಿಗೆ ಶಾಸಕ ರಾಜು ಕಾಗೆ ಹಾಗೂ ಇತರ ಗಣ್ಯರು ಸೇರಿ ಬಾಗಿನ ಅರ್ಿಸಿದರು.
ಈ ವೇಳೆ ನೀರಾವರಿ ನಿಗಮದ ಸಿಇ ನಾಗರಾಜ ಬಿ.ಎ., ನೀರಾವರಿ ಇಲಾಖೆಯ ಅಧಿಕಾರಿಗಳಾದ ಪ್ರವೀಣ ಹುಣಸಿಕಟ್ಟಿ, ಪ್ರಶಾಂತ ಪೋತದಾರ, ಬಸವರಾಜ ಗಲಗಲಿ, ಗಾಯತ್ರಿ ಕನ್ಸಟ್ರಕ್ಸ್‌ನ್‌ನ ಎಸ್‌ಜೆಎಂ ಎಂ.ವ್ಹಿ. ಶೇಖರ, ಜಿಎಂ ನಾಗೇಶ ಕೆ., ಮುಖ್ಯ ಅಧಿಕಾರಿ ಎಂ.ವ್ಹಿ. ಶೇಖರ, ಕೆ. ನಾಗೇಶ, ಮುಖಂಡರಾದ ದಿಗ್ವಿಜಯ ಪವಾರ-ದೇಸಾಯಿ, ಅರುಣ ಗಾಣಿಗೇರ, ಚಂದ್ರಕಾಂತ ಇಮ್ಮಡಿ, ಸುರೇಶ ಅಡಿಶೇರಿ, ಗೂಳಪ್ಪ ಜತ್ತಿ, ಶಿವಾನಂದ ಗೋಲಭಾಂವಿ, ಅಶೋಕ ಕೌಲಗುಡ್ಡ, ಪ್ರಕಾಶ ಕೊರಬು, ಕುಮಾರ ಪಾಟೀಲ, ಸಾವಂತ ಖಾಂಡೇಕರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 