4 ವರ್ಷದ ಮೇಕೆ 2 ಕ್ವಿಂಟಾಲ್ ಚೀಲ ಎಳೆದು ಅದ್ಭುತ ಸಾಹಸ
4-year-old goat pulls 2 quintal bag in amazing stunt
ಕೊಲ್ಹಾರ 05 : ಪಟ್ಟಣದ ಚಂದ್ರಾಮಪ್ಪ ಉಳ್ಳಾಗಡ್ಡಿ (ಬೆಳ್ಳುಬ್ಬಿ)ಅವರ ಮೇಕೆ ಭಾರವಾದ ಗೋಧಿ ಚೀಲವನ್ನು ಎಳೆದು ಶನಿವಾರ ಅದ್ಭುತ ಸಾಹಸ ಮೆರೆದಿದೆ 4 ವರ್ಷದ ಮೇಕೆಯು ಬರೊಬ್ಬರಿ 2 ಕ್ವಿಂಟಾಲ್ 60 ಕೆಜಿ ಗೋದಿ ಚೀಲದ ಭಾರವನ್ನು ಕೊಲ್ಹಾರ ಪಟ್ಟಣದ ಎಸ್ ಎಲ್ ಪಾಟೀಲ ಪೆಟ್ರೋಲ್ ಬಂಕ್ ದಿಂದ ಬಸವೇಶ್ವರ ವೃತ್ತ ರಾಣಿ ಚೆನ್ನಮ್ಮ ವೃತ್ತದಿಂದ ನೇರವಾಗಿ ದಿಗಂಬರೇಶ್ವರ ಮಠಕ್ಕೆ ಹೋಗಿ ಮರಳಿ ಸ್ವಾಮಿ ವಿವೇಕಾನಂದರ ವೃತ್ತದವರೆಗೆ ಸುಮಾರು ಎರಡು ಕಿಲೋಮೀಟರ್ ವರೆಗೆ ಭಾರವನ್ನು ಎಳೆದು ಸಾಹಸ ಮೆರೆದ ಹಿನ್ನೆಲೆಯಲ್ಲಿ ದಿಗಂಬರೇಶ್ವರ ಸಂಸ್ಥಾನ ಮಠದ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಪರಮ ಪೂಜ್ಯ ಕಲ್ಲಿನಾಥಶ್ರೀಗಳು ಮೇಕೆಗೆ ಹಾರ ಹಾಕಿ ಮೇಕೆ ಮಾಲಿಕನಿಗೆ ಸನ್ಮಾನಿಸಿದರು ಇದೆ ಸಂದರ್ಭದಲ್ಲಿ ಹಣಮಂತ ಬೆಳ್ಳುಬ್ಬಿ ,ಪರಸಪ್ಪ ಬೆಳ್ಳುಬ್ಬಿ ನಿವೃತ್ತ ಶಿಕ್ಷಕ ಶಂಕ್ರ್ಪ ಪತಂಗಿ,ಬಸಪ್ಪ ಕೋಠಾರಿ, ಬಸವರಾಜ ಉಳ್ಳಾಗಡ್ಡಿ,ಕಲ್ಲು ಬಾಲಗೊಂಡ ಇತರರು ಉಪಸ್ಥಿತರಿದ್ದರು
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 