ಲಾಕ್ ಡೌನ್, ಪಡಿತರ ವಿತರಣೆಯಲ್ಲಿ ಕೊಡಗು ಜಿಲ್ಲೆಗೆ 3 ನೇ ಸ್ಥಾನ

ಮಡಿಕೇರಿ, ಎಪ್ರಿಲ್ 11,ಕೊರೊನಾ ಸೊಂಕಿನ ನಂತರ  ಲಾಕ್‌ಡೌನ್ ಜಾರಿಯಲ್ಲಿದ್ದರೂ  ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಮೂಲಕ ಸಮರ್ಪಕ ಪಡಿತರ ವಿತರಣೆಯಲ್ಲಿ  ಕೊಡಗು ಜಿಲ್ಲೆ ರಾಜ್ಯದಲ್ಲಿ ಮೂರನೇ ಸ್ಥಾನ ಪಡೆದಿದೆ. ಜಿಲ್ಲೆಯಲ್ಲಿ  ಪಡಿತರ ವಿತರಣೆಯಲ್ಲಿ ಶೇಕಡ  68 ರಷ್ಟು ಪ್ರಗತಿಯನ್ನು ಸಾಧಿಸಿಸಲಾಗಿದೆ ನಂತರದ ಸ್ಥಾನದಲ್ಲಿ ಮಂಡ್ಯ ಜಿಲ್ಲೆಯಿದೆ .ಅಧಿಕಾರಿಗಳು ಒಂದು ವಾರದಲ್ಲಿ ಗುರಿ ತಲುಪುವ ವಿಶ್ವಾಸದಲ್ಲಿದ್ದಾರೆ. ಪಡಿತರ ವಸ್ತುಗಳ ಸರಿಯಾದ ವಿತರಣೆಯ ಜೊತೆಗೆ, ಸಾಮಾಜಿಕ ಅಂತರವನ್ನು ತಪ್ಪದೆ ಪಾಲನೆ ಮಾಡಲಾಗುತ್ತಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಹೇಳಿಕೆ ನೀಡಿದ್ದು    ಕೊಡಗು, ಗುಡ್ಡಗಾಡು ಪ್ರದೇಶವಾಗಿದ್ದು, ಅಗತ್ಯ ವಸ್ತುಗಳ ಸರಬರಾಜಿಗೆ ಸವಾಲಾಗಿದೆ .
ದೈನಂದಿನ ಕೂಲಿ ಕಾರ್ಮಿಕರು ಮತ್ತು ಆರ್ಥಿಕವಾಗಿ ಹಿಂದುಳಿದ ಇತರ ವರ್ಗಗಳ  ತೊಂದರೆಯಲ್ಲಿನ  ಜನರಿಗೆ ಆದ್ಯತೆ ಮೇಲೆ  ಗ್ರಾಮಗಳಲ್ಲಿ ಪಡಿತರ ವಸ್ತುಗಳನ್ನು ವಿತರಿಸಲು ವ್ಯವಸ್ಥೆ ಮಾಡಲಾಗಿದೆ .ಜಿಲ್ಲೆಯಲ್ಲಿ 23,000 ಎಪಿಎಲ್, 93,000 ಬಿಪಿಎಲ್ ಮತ್ತು 10,000 ಆಂತ್ಯೋದಯ   ಕಾರ್ಡುದಾರರು ಇದ್ದಾರೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ವಿಭಾಗದ ಉಪನಿರ್ದೇಶಕ ಗೌರವ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ. ಜಿಲ್ಲೆಯಿಂದ ಸುಮಾರು 35,000 ಕ್ವಿಂಟಾಲ್ ಅಕ್ಕಿ ಮತ್ತು 4,200 ಕ್ವಿಂಟಾಲ್ ಗೋಧಿಯನ್ನು ಮುಂದಿನ ಎರಡು ತಿಂಗಳಿಗಾಗಿ  ಸಂಗ್ರಹಿಸಲಾಗಿದೆ.ರಾಜ್ಯದ  ಪಡಿತರ ಧಾನ್ಯ ವಿತರಣೆ ಮುಗಿದ ನಂತರ ಕೇಂದ್ರದ  ಪಡಿತರ ಧಾನ್ಯ ವಿತರಣೆ ಕಾರ್ಯ ನಡೆಯಲಿದೆ.