6 ಭಾಷೆಗಳಲ್ಲಿ ದಾಖಲೆಯ ಬಿಡುಗಡೆಗೆ ಸಿದ್ಧವಾಗುತ್ತಿದೆ 3D ಚಿತ್ರ “ಸಾಲ್ಮನ್”
ಬೆಂಗಳೂರು, ಮೇ 25,ತ್ರಿD ಸಿನೆಮಾವೊಂದು ಆರು ಭಾಷೆಗಳಲ್ಲಿ ಬಿಡುಗಡೆಗೆ ಸಿದ್ಧವಾಗಿ ದಾಖಲೆ ಸೃಷ್ಠಿಸಲು ಮುಂದಾಗುತ್ತಿದೆ. ಅದೇ “ಸಾಲ್ಮನ್” ದಕ್ಷಿಣ ಭಾರತದಲ್ಲೇ ಪ್ರತಿಭಾನ್ವಿತ ನಿರ್ದೇಶಕನೆಂಬ ಭರವಸೆ ಮೂಡಿಸಿರುವ ಶಲೀಲ್ ಕಲೂರ್ ಈ ಚಿತ್ರದ ನಿರ್ದೇಶಕರು. ಇದೊಂದು ರೊಮ್ಯಾಂಟಿಕ್ ಸಸ್ಪೆನ್ಸ್ ಚಿತ್ರವಾಗಿದ್ದು, ಬಹುತೇಕ ಭಾಗದ ಚಿತ್ರೀಕರಣವು ಆಕರ್ಷಕ ತಾಣಗಳಾದ ಕುಲು-ಮನಾಲಿ, ರಾಮೋಜಿರಾವ್ ಫಿಲಂಸಿಟಿ ಅಲ್ಲದೇ, ದುಬೈ, ಮಲೇಷ್ಯಾ ಮುಂತಾದ ಕಡೆ ಪೂರ್ಣಗೊಂಡಿದೆ. ಈ ಚಿತ್ರವು ಕನ್ನಡ, ತೆಲುಗು, ತಮಿಳು, ಮಲೆಯಾಳಂ, ಹಿಂದಿ ಮತ್ತು ಮರಾಠಿ ಭಾಷೆಗಳಲ್ಲೂ ತೆರೆಕಾಣಲಿದೆ.ಎಂ.ಜೆ.ಎಸ್.ಮೀಡಿಯಾ ಬ್ಯಾನರ್ ಈ ಚಿತ್ರವನ್ನು ಸುಮಾರು 12 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿದ್ದು, ಡಾ ಟಿ.ಎನ್.ವಿನೀತ್ ಭಟ್, ಶಾಜು ಥಾಮಸ್, ಜೋಸ್.ಡಿ.ಪೇಕಾಟ್ಟಿಲ್ ಮತ್ತು ಜಾಯಿಸ್.ಟಿ.ಪೇಕಾಟ್ಟಿಲ್ ಇದರ ನಿರ್ಮಾಪಕರಾಗಿದ್ದಾರೆ.
ಹುಟ್ಟಿದ ತಕ್ಷಣವೇ ಅನಾಥವಾಗುವ ವೈಶಿಷ್ಯತೆಯನ್ನು ಹೊಂದಿರುವ ಸಾಲ್ಮನ್ ಮೀನಿನ ಹೆಸರನ್ನು ಈ ಚಿತ್ರಕ್ಕೆ ಇಡಲಾಗಿದ್ದು, ಅದು ತನ್ನ ಬದುಕಿನಲ್ಲಿ ಎದುರಾಗುವ ಪ್ರತಿಕೂಲ ಪರಿಸ್ಥಿತಿಗಳನ್ನು ದಾಟಿ ಹಲವಾರು ಉಪಖಂಡ ಪ್ರದೇಶಗಳನ್ನು ಹೇಗೆ ಸೇರುತ್ತದೆಯೋ, ಅದೇರೀತಿ ಕಥಾನಾಯಕನ ಜೀವನದ ಸುತ್ತ ನಡೆಯುವ ಸಸ್ಪೆನ್ಸ್ ಥ್ರಿಲ್ಲರ್ ಘಟನಾವಳಿಗಳೇ ಈ ಸಿನೇಮಾದ ಕಥಾವಸ್ತುವಾಗಿದೆ. ದುಬೈನಲ್ಲಿ ತನ್ನ ಕುಟುಂಬ ಸಮೇತ ನೆಲೆಸಿ ಒಮ್ಮೆ ಹುಟ್ಟೂರಿಗೆ ಆಗಮಿಸಿದ ವೇಳೆ ಅನಿರೀಕ್ಷಿತವಾಗಿ ನಡೆಯುವ ದಾರುಣ ಸಾವು, ಆ ಬಳಿಕ ಅನಾವರಣಗೊಳ್ಳುವ ಆತ್ಮದ ಹಿನ್ನೆಲೆಯು ಈ ಸಿನೆಮಾದ ಕಥಾಹಂದರವಾಗಿದೆ. ಖ್ಯಾತ ಗಾಯಕರಾದ ಜೇಸುದಾಸ್ ಅವರ ಪುತ್ರ ವಿಜಯ್ ಜೇಸುದಾಸ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ರಾಹುಲ್ ಮೆನನ್ ಕ್ಯಾಮರಾ ನಿರ್ವಹಿಸಿದ್ದು, ಜೀಮೋನ್ ಪಲ್ಲೇಲಿ ತ್ರೀ ಡಿ ಸ್ಟೀರಿಯೋಸ್ಕಾಪಿಕ್ ಜವಾಬ್ದಾರಿ ಹೊತ್ತಿದ್ದಾರೆ, ಈ ಚಿತ್ರವು ಸದ್ಯದಲ್ಲೇ ಬಿಡುಗಡೆಗೆ ಸಿದ್ಧವಾಗಲಿದೆ.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 