ಪ್ರಭಾಕರ್ ಕೋ ಆಫ್-ಕ್ರೆಡಿಟ್ ಸೊಸೈಟಿಯ 37ನೇ ವಾರ್ಷಿಕ ಸರ್ವಸಾಧಾರಣ ಸಭೆ
37th Annual General Meeting of Prabhakar Co-operative Credit Society
ಮಾಂಜರಿ, 20 ; ರಾಜ್ಯ ಸಭೆಯ ಮಾಜಿ ಸದಸ್ಯ ಹಾಗೂ ಕೆಎಲ್‌ಇ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷರಾಗಿರುವ ಡಾ ಪ್ರಭಾಕರ್ ಕೋರೆ ಇವರ ಮಾರ್ಗದರ್ಶನದಲ್ಲಿ ಸ್ಥಾಪನೆಗೊಂಡಿರುವ ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಡಾ ಪ್ರಭಾಕರ್ ಕೋರೆ ಕೋ ಅಪ್ ಕ್ರೆಡಿಟ್ ಸೊಸೈಟಿಯು ಬರುವ ದಿನಮಾನಗಳಲ್ಲಿ ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಸಂಸ್ಥೆಯ ಶಾಖೆಯನ್ನು ಪ್ರಾರಂಭಿಸಲಾಗುವುದು ಅದೇ ಪ್ರಕಾರ ಈ ವರ್ಷ ಸುಮಾರು 1511.28 ಕೋಟಿ ರೂಪಾಯಿ ಠೇವಣಿ ಸಂಗ್ರಹಿಸಿ 25.30 ನಿವ್ವಳ ಲಾಭ ಗಳಿಸಲಾಗಿದ್ದು ಸದಸ್ಯರಿಗೆ ಪ್ರತಿಶತ 15 ರಂತೆ ಲಾಭವನ್ನು ನೀಡಲಾಗುವುದೆಂದು ಸಂಸ್ಥೆಯ ಆಮಂತ್ರಿತ ಸದಸ್ಯರಾದ ರಾಷ್ಟ್ರೀಯ ಸಕ್ಕರೆ ಕಾರ್ಖಾನೆ ಮಹಾಮಂಡಳ ಹೊಸದೇಲಿಯ ನಿರ್ದೇಶಕರಾದ ಯುವ ಮುಖಂಡ ಅಮಿತ್ ಕೋರೆ ಹೇಳಿದರು
ಅವರು ಇಂದು ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿರುವ ಡಾ ಪ್ರಭಾಕರ್ ಕೋ ಆಫ್ ಕ್ರೆಡಿಟ್ ಸೊಸೈಟಿಯ 37ನೆಯ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು ಈ ವಾರ್ಷಿಕ್ ಸಭೆಯ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಮಹಾಂತೇಶ್ ಪಾಟೀಲ್ ವಹಿಸಿದ್ದರು ಅತಿಥಿಯಾಗಿ ಸಂಸ್ಥೆಯ ನಿರ್ದೇಶಕರಾದ ಡಾ. ಪ್ರೀತಿ ದೊಡ್ಡವಾಡ ಕೆಎಲ್‌ಇ ಸಂಸ್ಥೆಯ ಉಪಾಧ್ಯಕ್ಷರಾದ ಬಸವರಾಜ್ ತಟುವಟಿಗಿ ಇನಾಮುದಾರ್ ಸಕ್ಕರೆ ಕಾರ್ಖಾನೆಯ ನಿರ್ದೇಶಕರಾದ ವಿಜಯ ಮೆಟಗೋಡ ಹಾಜರಿದ್ದರು
ಈ ವೇಳೆ ಅಮಿತ್ ಕೋರೆ ಮಾತನಾಡಿ ಗ್ರಾಮೀಣ ಭಾಗದಲ್ಲಿ ಸಹಕಾರಿ ಸಂಘದಲ್ಲಿ ಸ್ಥಾಪಿಸಿರುವ ಸಂಸ್ಥೆಗಳು ಇಂದು ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ ತಮ್ಮ ಕಾರ್ಯ ವ್ಯಾಪ್ತಿ ಹೊಂದಿದ್ದು ರಾಷ್ಟ್ರೀಕೃತ ಬ್ಯಾಂಕಿನ ಜೊತೆಗೆ ಸ್ಪರ್ಧೆಯನ್ನು ಮಾಡಿ ಸದಸ್ಯರಿಗೆ ಹಲವಾರು ಯೋಜನೆಗಳ ಮುಖಾಂತರ ಮತ್ತು ಕಡಿಮೆ ಬಡ್ಡಿ ದರದಿಂದ ಸಾಲುವನ್ನು ಹಂಚಲಾಗಿದೆ
ಸದ್ಯ ಸಂಸ್ಥೆಗೆ ಸುಮಾರು 97727 ಸದಸ್ಯರನ್ನು ಹೊಂದಿದ್ದು ಶೇರ ಬಂಡವಾಳ ಸುಮಾರು 140.83 ಕೋಟಿ ರೂಪಾಯಿ ಇದೆ ಈ ವರ್ಷ ಪ್ರಸಕ್ತ ಸಾಲಿನಲ್ಲಿ ಸಂಸ್ಥೆಯ ನಿರ್ದೇಶಕ ಮಂಡಳಿಯ ವಿಶ್ವಾಸ ಮತ್ತು ಗ್ರಾಹಕರ ನಿಸ್ವಾರ್ಥ ಸೇವೆಯಿಂದ 1511.28 ಕೋಟಿ ರೂಪಾಯಿ ಠೇವಣಿಯನ್ನು ಸಂಗ್ರಹಿಸಲಾಗಿದೆ ಕಾಯ್ದಿಟ್ಟು ಮತ್ತು ಇತರ ಒಟ್ಟು ನಿಧಿಗಳು ಸುಮಾರು 140.83 ಕೋಟಿ ರೂಪಾಯಿದೇ ಸಾಲ ಮತ್ತು ಮುಂಗಡಗಳು1063.56 ಕೋಟಿ ರೂಪಾಯಿ ಇದೆ ಗುಂತಾವನೆ ಮತ್ತು ಹೂಡಿಕೆಗಳು 579.56 ಕೋಟಿ ರೂಪಾಯಿ ಇದೆ ಬ್ಯಾಂಕ್ ಖಾತೆಯಲ್ಲಿ ಶುಲ್ಕ 109.61 ಕೋಟಿ ರೂಪಾಯಿ ಇದೆ ದುಡಿಯುವ ಬಂಡವಾಳ 1656.57 ಕೋಟಿ ರೂಪಾಯಿ ಇದೆ ವಾರ್ಷಿಕ ವಹಿವಾಟ 22076.36 ಕೋಟಿ ರೂಪಾಯಿ ಇದೆ ಸದರಿ ಸಂಸ್ಥೆಯು ಹಿಂದಿನವರೆಗೆ 55 ಶಾಖೆಗಳಲ್ಲಿ ಕಾರ್ಯನಿರ್ವಹಿಸಿ ಮುಂದಿನ ದಿನಮಾನಗಳಲ್ಲಿ ಗೋವಾ ಮತ್ತು ಮಹಾರಾಷ್ಟ್ರ ರಾಜ್ಯದ ಜೊತೆ ರಾಜ್ಯದಲ್ಲಿ ಸುಮಾರು 17 ಶಾಖೆಗಳನ್ನು ಶೀಘ್ರವಾಗಿ ಪ್ರಾರಂಭಿಸಲಾಗುವುದೆಂದು ಅವರು ಹೇಳಿದರು ಈ ವರ್ಷ ಸಂಸ್ಥೆಗೆ ಸುಮಾರು 25.30 ಕೋಟಿ ರೂಪಾಯಿ ನಿವಳ ಲಾಭ ಗಳಿಸಲಾಗಿದೆ ಆದ್ದರಿಂದ ಸದಸ್ಯರಿಗೆ ಪ್ರತಿಶತ 15ರಂತೆ ಲಾಭಾಂಶವನ್ನು ನೀಡಲಾಗುವುದೆಂದು ಅವರು ಹೇಳಿದರು ವಾರ್ಷಿಕ ಸಂಸ್ಥೆಯ ವರದಿಯನ್ನು ಸಂಸ್ಥೆಯ ಅಧ್ಯಕ್ಷ ಮಹಾಂತೇಶ್ ಪಾಟೀಲ್ ಮಂಡಿಸಿದರು ಅದೇ ಪ್ರಕಾರ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ದೇವೇಂದ್ರ ಕರೋಶಿಯವರು ಸಭೆಯ ಚರ್ಚಿಸಬೇಕಾದ ವಿಷಯಗಳನ್ನು ಮಂಡಿಸಿದರು ಇದೇ ವೇಳೆ ಸಂಸ್ಥೆಯ ಸಂಸ್ಥಾಪಕರಾದ ಪ್ರಭಾಕರ್ ಕೋರೆ ಇವರ ಹುಟ್ಟುಹಬ್ಬವಾಗಿ ಸತತ 18 ವರ್ಷಗಳ ಕಾಲ ರಕ್ತದಾನ ನೀಡಿದ ರಕ್ತಧಾನಿಗಳಿಗೆ ಅಮಿತ್ ಕೋರೆ ಮತ್ತು ಡಾ. ಪ್ರೀತಿ ದೊಡ್ಡವಾಡ ಹಾಗೂ ಸಂಸ್ಥೆಯ ಅಧ್ಯಕ್ಷ ಮತ್ತು ನಿರ್ದೇಶಕರ ವತಿಯಿಂದ ಸನ್ಮಾನಿಸಲಾಯಿತು ಅದೇ ಪ್ರಕಾರ ಠೇವಣೆಯಲ್ಲಿ ಅತಿ ಅತಿ ಹೆಚ್ಚು ಠೇವಣಿಯನ್ನು ಸಂಗ್ರಹಿಸಿದ ಧಾರವಾಡ ಶಾಖೆ ಮತ್ತು
ನಂದಿಕುರಳಿ ಶಾಖೆ ಸಿಬ್ಬಂದಿ ಮತ್ತು ಸಲಹಾ ಸಮಿತಿ ಸದಸ್ಯರನ್ನು ಸನ್ಮಾನಿಸಲಾಯಿತು ಜೊತೆಗೆ ಅತಿ ಹೆಚ್ಚು ಪಿಗ್ಮಿ ಸಂಗ್ರಹಿಕರಾದ ಹಾವೇರಿ ಶಾಖೆ ಬೆಳಗಾವಿನ ಕಾಲೇಜು ಮತ್ತು ನಂದಿಕುರಳಿ ಶಾಖೆಯ ಪಿಗ್ಮಿ ಸಂಗ್ರಾಯಕರನ್ನು ಕೂಡ ಇದೇ ವೇಳೆ ಸನ್ಮಾನಿಸಲಾಯಿತು ಇಂದಿನ ವಾರ್ಷಿಕ ಸಭೆಗೆ ಸಂಸ್ಥೆಯ ಉಪಾಧ್ಯಕ್ಷರಾದ ಸಿದ್ಧಗೌಡ ಮಗದೂಮ ಮಲ್ಲಿಕಾರ್ಜುನ್ ಕೋರೆ ಅಣ್ಣಸಾಹೇಬ್ ಸಂಕೇಶ್ವರಿ ಬಸನಗೌಡ ಆಸಂಗಿ ಸುಕುಮಾರ್ ಚೌಗುಲೆ ಪಿಂಟು ಹಿರೇಕುರುಬರ್ ಅಮಿತ್ ಜಾಧವ್ ಪ್ರಫುಲ್ ಶೆಟ್ಟಿ ಅನಿಲ್ ಪಾಟೀಲ್ ಶೋಭಾ ಜಕಾತೆ ಶೈಲಜಾ ಪಾಟೀಲ್ ಪಾರ್ವತಿ
ಧರನಾಯಕ್ ಜಯಶ್ರೀ ಮೇದಾರ್ ಶ್ರೀಕಾಂತ್ ಉಮರಾನೆ ವಿವೇಕಾನಂದ ಕಮತೆ ಹಾಗೂ ಎಲ್ಲ ಶಾಖೆಯ ಸಲಹಾ ಸಮಿತಿ ಅಧ್ಯಕ್ಷರು ಸದಸ್ಯರು ಮತ್ತು ಸಂಸ್ಥೆಯ ಎಲ್ಲ ಸದಸ್ಯರು ಹಾಜರಿದ್ದರು ವಾರ್ಷಿಕ ಸರಸಾಧಾರಣ ಸಭೆಯ ನಿರೂಪಣೆಯನ್ನು ಮಹೇಶ್ ನಿಡುಗುಂದೆ ಮಾಡಿ ಜ್ಯೋತಿ ತಮ್ಮಗೌಡ ಇವರು ವಂದಿಸಿದರು.
ಚುಚ್ಚುಮದ್ದು ನೀಡಿ ಪತಿ ಹತ್ಯೆ ಮಾಡಿದ್ದ ಪತ್ನಿ, ಪ್ರೀಯಕರ: ಸಮಾಧಿಯಿಂದ ಮಾಜಿ ಸೈನಿಕನ ಶವ ಹೊರಕ್ಕೆ, ತನಿಖೆ ಚುರುಕು
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ 