32ನೇ ವರ್ಷದ ಗೂಳ್ಯದ ಗಾದಿಲಿಂಗೇಶ್ವರ ಪುರಾಣ: 16 ಜೋಡಿಗಳ ಉಚಿತ ಸಾಮೂಹಿಕ ವಿವಾಹ
32nd year of Gulyada Gadilingeshwara Purana: Free mass marriage of 16 couples
ಹೊಸಪೇಟೆ 22: ಇಂದು ಪಾಪಿನಾಯಕನ ಹಳ್ಳಿ ಯ ಗಾದಿಲಿಂಗೇಶ್ವರ ಸೇವಾ ಟ್ರಸ್ಟ್ ವತಿಯಿಂದ ಗ್ರಾಮದ ಆಂಜನೇಯ ದೇವಸ್ಥಾನದ ಆವರಣದಲ್ಲಿ ಶ್ರಾವಣ ಮಾಸದ ಅಂಗವಾಗಿ ಹಾಗೂ 32ನೇ ವರ್ಷದ ಗೂಳ್ಯದ ಗಾದಿಲಿಂಗೇಶ್ವರ ಪುರಾಣದ ಪ್ರಯುಕ್ತ 16 ಜೋಡಿಗಳ ಉಚಿತ ಸಾಮೂಹಿಕ ವಿವಾಹಗಳ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಒಂದು ಸಾಮೂಹಿಕ ವಿವಾಹದ ದಿವ್ಯ ಸಾನಿಧ್ಯವನ್ನು ದೇವರ ಗೊಳ್ಳದ ದಿಗಂಬರ ರಾಜ ಭಾರತೀ ಸವಾಮೀಜಿ ( ಜೋಗದ ತಾತ) ಇವರು ವಹಿಸಿದ್ದರು.
ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್ ಎನ್ ಮೊಹಮ್ಮದ್ ಇಮಾಮ್ ನಿಯಾಜಿ ರವರು ಈ ಒಂದು ಸಾಮೂಹಿಕ ವಿವಾಹದ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿ ಇಂತಹ ಸರಳ ವಿವಾಹಗಳನ್ನು ಪ್ರತಿಯೊಂದು ಸಂಘ ಸಂಸ್ಥೆಗಳು ಆಯೋಜಿಸುವ ಮೂಲಕ ಸಮ ಸಮಾಜದ ನಿರ್ಮಾಣ ಮಾಡಬೇಕು ಕರೆ ನೀಡಿದರು.
ಹಾಗು ಸಾಮೂಹಿಕ ವಿವಾಹಗಳು ಅರ್ಥಿಕವಾಗಿ ಬಡತನದಲ್ಲಿರುವವರಿಗೆ ವರದಾನವಾಗಲಿದ್ದು ಅರ್ಥಿಕ ಸಂಕಷ್ಠದಿಂದ ದೂರವಿರಲು ಸಾಧ್ಯವಾಗುತ್ತದೆ ಹಾಗೂ ಇಂತಹ ಸಮಾರಂಭಗಳಲ್ಲಿ ಮದುವೆಯಾಗುವವರು ಎಲ್ಲಾ ಜಾತಿ ಧರ್ಮಗಳ ಹಿರಿಯರ ಅಶಿರ್ವಾದ ಪಡೆಯುವುದರಿಂದ ಅವರ ಬದುಕು ಸಿರಿವಂತಿಕೆಯಿಂದ ಕೂಡಿರಲಿ ಎಂದು ನವ ದಂಪತಿಗಳಿಗೆ ಶುಭ ಹಾರೈಸಿದರು. ಈ ಒಂದು ಸಾಮೂಹಿಕ ವಿವಾಹದ ಸಮಾರಂಭವನ್ನು ಅಚ್ಚುಕಟ್ಟಾಗಿ ಆಯೋಜಿಸಿ ಅತ್ಯಂತ ಸಂಭ್ರಮದಿಂದ ಪೂರ್ತಿ ಗೊಳಿಸಲು ಪ್ರತ್ಯಕ್ಷವಾಗಿ ಹಾಗು ಪರೋಕ್ಷವಾಗಿ ಸಹಸಕರಿಸಿದ ಎಲ್ಲಾರಿಗೂ ಅಭಿನಂದನೆಗಳನ್ನು ತಿಳಿಸಿದರು.
ಈ ಒಂದು ಸಾಮೂಹಿಕ ವಿವಾಹದ ದಿವ್ಯ ಸಾನಿಧ್ಯವನ್ನು ವಹಿಸಿದ ದೇವರ ಗೊಳ್ಳದ ದಿಗಂಬರ ರಾಜ ಭಾರತೀ ಸವಾಮೀಜಿ ( ಜೋಗದ ತಾತ) ಇವರು ಮಾತನಾಡಿ ನವದಂಪತಿಗಳಿಗೆ ಆಶೀರ್ವದಿಸುತ್ತ ಉತ್ತಮ ಸಮಾಜವನ್ನು ನಿರ್ಮಾಣ ಮಾಡಲು ಮಕ್ಕಳನ್ನು ಹೆಚ್ಚು ಶಿಕ್ಷಕರನ್ನಾಗಿ ಮಾಡಬೇಕಾಗಿರುತ್ತದೆ ಈ ಮೂಲಕ ಉತ್ತಮ ಸಮಾಜದ ಬಾಂಧವ್ಯವನ್ನು ನಿರ್ಮಾಣ ಮಾಡಲು ಮಕ್ಕಳನ್ನು ಹೆಚ್ಚು ಹೆಚ್ಚು ವಿದ್ಯಾವಂತರನ್ನಾಗಿ ಮಾಡಬೇಕಾಗಿ ಇರುವುದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ
ಪ್ರಾಮುಖ್ಯತೆ ನೀಡಬೇಕೆ ಹೊರತು ಹೆಣ್ಣು ಮಕ್ಕಳು ಮತ್ತು ಗಂಡು ಮಕ್ಕಳು ಎಂಬ ತಾರತಮ್ಯ ಮಾಡಬಾರದೆಂದು ಹಾಗೂ ಹೆಣ್ಣು ಮಕ್ಕಳೇ ಬೇಕು ಅಥವಾ ಗಂಡು ಮಕ್ಕಳೇ ಬೇಕೆಂದು ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಬಾರದೆಂದು ನೂತನ ದಂಪತಿಗಳಿಗೆ ತಿಳುವಳಿಕೆ ನೀಡಿದರು. ಹಾಗೂ ಈ ಒಂದು ಸಾಮೂಹಿಕ ವಿವಾಹದಿಂದ ಊರಿನ ಎಲ್ಲಾ ಜಾತಿ ಜನಾಂಗ ಧರ್ಮದ ಭೇದವಿಲ್ಲದೆ ಒಗ್ಗಟ್ಟಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಕ್ಕೆ ಅಭಿನಂದನೆಗಳನ್ನು ತಿಳಿಸಿದರು ಹಾಗೂ ಇನ್ನೂ ಈ ಒಂದು ಸರ್ವ ಜಾತಿ ಜನಾಂಗದ ಧರ್ಮಗಳ ಬಾಂಧವ್ಯ ಒಟ್ಟುಗೂಡಿಕೆಯಿಂದಾಗಿ ಇನ್ನು ಹೆಚ್ಚಿನ ಅಭಿವೃದ್ಧಿಯನ್ನು ಈ ಒಂದು ಪಾಪಿನಾಯಕನಹಳ್ಳಿ ಕಾಣಲಿ ಎಂದು ಶುಭ ಹಾರೈಸಿ ಆಶೀರ್ವದಿಸಿದರು
ಈ ಒಂದು ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು, ಸದಸ್ಯರು ಹಾಗು ಊರಿನ ರೈತ ಭಾಂದವರು, ಹಾಗು ಮುಖಂಡರಾದ ಕೆಎಂ ಹಾಲಪ್ಪ, ಮೇಟಿ ಪಂಪಾಪತಿ, ಕೆ. ತಿಪ್ಪೇಸ್ವಾಮಿ, ಎನ್ ತಿಪ್ಪೇಸ್ವಾಮಿ, ಡಿ ರಾಮು, ವಿ ಗುರುರಾಜ, ಕೆ ಅಯ್ಯಪ್ಪ, ಕೆ ಮಲ್ಲೇಶಪ್ಪ, ಚೋಳ ರಾಜೇಂದ್ರ ಮೇಟಿ, ಕೆ ಮುರಳಿದರ, ಎನ್ ಅಂಕಲೇಶ, ಕೆ ಜಯಪ್ಪ, ಕೆ ತಾಯಪ್ಪ, ಹಾಗೂ ವಧು ವರರ ಪಾಲಕರು ಪೋಷಕರು ಹಾಗೂ ಸಾವಿರಾರು ಜನ ಗ್ರಾಮಸ್ಥರು ಸಮಾರಂಭದಲ್ಲಿ ಉಪಸ್ಥಿತರಿದ್ದರು
ಈ ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರಾದ ಬಿ. ಹನುಮಂತಪ್ಪ, ಕಪ್ಲಿ ಜಗನಾಥ್, ಈಡಿಗರ ಬಸವರಾಜ್, ಹೆಚ್, ಶೇಷಪ್ಪ, ಬಣಕಾರ್ ಗೌರೀಶ್, ಗಂಟಿ ಸೋಮಶೇಖರ್, ಅಯ್ಯಾಳಿ ಶಂಕ್ರಪ್ಪ ಅಯ್ಯಾಳಿ ಗಣೇಶಪ್ಪ. ಗುಜ್ಜಲ ವಿಶ್ವನಾಥ್, ಹಾಗೂ ತಾಲೂಕು ಮಾಜಿ ಸೈನಿಕರ ಸಂಘದ ಅಧ್ಯಕ್ಷರಾದ ಬಿ.ಸುಬ್ಬಣ್ಣ, ಉಪಾಧ್ಯಕ್ಷರಾದ ಜಿ.ವಿಶ್ವನಾಥ್, ಮಾಜಿ ಸೈಜಿಕರಾದ ಚನ್ನವೀರಯ್ಯ, ರಾಜಶೇಖರ್, ಶ್ರೀಧರ್, ವಿಜಯ ಕುಮಾರ್, ನಾಗರಾಜ್, ಹಾಗೂ ಊರಿನ ಸದ್ಭಕ್ತರು ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 