ಬಾಗ್ದಾದ್, ಜ. 21 : ಮಧ್ಯ ಬಾಗ್ದಾದ್‌ನ ಭಾರಿ ಭದ್ರತೆಯ ಹಸಿರು ವಲಯದಲ್ಲಿರುವ ಅಮೆರಿಕ ರಾಯಭಾರಿ ಕಚೇರಿಯ ಬಳಿ ಮೂರು ಕತ್ಯುಶಾ ರಾಕೆಟ್‌ಗಳು ಅಪ್ಪಳಿಸಿವೆ ಎಂದು ಆಂತರಿಕ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸೋಮವಾರ ಮಧ್ಯರಾತ್ರಿ ಮೂರು ರಾಕೆಟ್‌ಗಳು ಹಸಿರು ವಲಯದ ಅಮೆರಿಕ ರಾಯಭಾರಿ ಕಚೇರಿಯ ಬಳಿ ಅಪ್ಪಳಿಸಿವೆ. ಈ ಪ್ರದೇಶದಲ್ಲಿ ಇರಾಕಿನ ಪ್ರಮುಖ ಸರ್ಕಾರಿ ಕಚೇರಿಗಳಿವೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಕ್ಸಿನ್ಹುವಾ ಸುದ್ದಿಸಂಸ್ಥೆಗೆ ತಿಳಿಸಿದರು.
ಸಾವುನೋವುಗಳ ಬಗ್ಗೆ ತಕ್ಷಣ ಮಾಹಿತಿ ಸಿಕ್ಕಿಲ್ಲ ಎಂದು ಮೂಲಗಳು ತಿಳಿಸಿವೆ.
ಬಿಗಿ ಭದ್ರೆತೆಯ ಹಸಿರು ವಲಯವನ್ನು ಗುರಿಯಾಗಿಸಿ ಆಗಾಗ್ಗೆ ದಂಗೆಕೋರರು ರಾಕೆಟ್ ದಾಳಿ ನಡೆಸುತ್ತಿದ್ದಾರೆ. ಇರಾಕಿ ರಾಜಧಾನಿಯನ್ನು ಪ್ರತ್ಯೇಕಿಸುವ ಟೈಗ್ರಿಸ್ ನದಿಯ ಪಶ್ಚಿಮ ದಂಡೆಯಲ್ಲಿ ಸರಿಸುಮಾರು 10 ಚದರ ಕಿ.ಮೀ ವಲಯವನ್ನು ಗ್ರೀನ್ ಜೋನ್ ಎಂದು ಪರಿಗಣಿಸಲಾಗಿದೆ.
ಇರಾನಿನ ಮಿಲಿಟರಿ ನಾಯಕನ ಹತ್ಯೆಗೆ ಇರಾನಿನ ಆರಂಭಿಕ ಪ್ರತಿಕ್ರಿಯೆ ನೀಡಲಾಗಿದೆ. ಅಮೆರಿಕದ ವೈಮಾನಿಕ ದಾಳಿಗೆ ಇರಾಕ್ ಪ್ರತಿಕ್ರಿಯಿಸಲು ಇದು ಸೂಕ್ತ ಸಮಯವಾಗಿದೆ ಎಂದು ಈ ತಿಂಗಳ ಆರಂಭದಲ್ಲಿ, ಇರಾಕಿನ ಇರಾನ್ ಬೆಂಬಲಿತ ಶಿಯಾ ಸೇನೆ, ಖೈಸ್ ಅಲ್-ಖಜಾಲಿ ನೇತೃತ್ವದ ಅಸಾಯಿಬ್ ಅಹ್ಲ್ ಅಲ್-ಹಕ್ ತಿಳಿಸಿತ್ತು.
ಇರಾಕ್‌ನ ಪಶ್ಚಿಮ ಪ್ರಾಂತ್ಯದ ಅನ್ಬರ್‌ನಲ್ಲಿ ಮತ್ತು ಕುರ್ದಿಸ್ತಾನದ ಅರೆ ಸ್ವಾಯತ್ತ ಪ್ರದೇಶದ ರಾಜಧಾನಿಯಾದ ಎರ್ಬಿಲ್ ನಗರದ ಸಮೀಪ ಅಮೆರಿಕದ ಸೇನಾ ನೆಲೆಗಳ ಮೇಲೆ ಜನವರಿ 8 ರಂದು ಇರಾನ್ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿದ ನಂತರ ಅಲ್-ಖಜಾಲಿಯಾದಿಂದ ಈ ಬೆದರಿಕೆ ಬಂದಿದೆ.
ಜನವರಿ 3 ರಂದು, ಬಾಗ್ದಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕ ನಡೆಸಿದ ಡ್ರೋನ್ ವೈಮಾನಿಕ ದಾಳಿಯಲ್ಲಿ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನ್ ಗಾರ್ಡ್ಸ್ ಕಾರ್ಪ್ಸ್, ಕುಡ್ಸ್ ಫೋರ್ಸ್‌ನ ಕಮಾಂಡರ್ ಖಾಸಿಮ್ ಸುಲೈಮಾನಿ ಮತ್ತು ಇರಾಕ್‌ನ ಅರೆ ಸೇನೆಯಾದ ಹಶ್ದ್ ಶಾಬಿ ಪಡೆಗಳ ಉಪ ಮುಖ್ಯಸ್ಥ ಅಬು ಮಹ್ದಿ ಅಲ್-ಮುಹಂದಿಸ್ ಹತ್ಯೆಗೀಡಾಗಿದ್ದರು.
ಇಸ್ಲಾಮಿಕ್ ಸ್ಟೇಟ್ ಉಗ್ರರ ವಿರುದ್ಧದ ಹೋರಾಟದಲ್ಲಿ ಇರಾಕಿ ಪಡೆಗಳನ್ನು ಬೆಂಬಲಿಸಲು 5,000 ಕ್ಕೂ ಹೆಚ್ಚು ಅಮೆರಿಕ ಸೈನಿಕರನ್ನು ಇರಾಕ್‌ನಲ್ಲಿ ನಿಯೋಜಿಸಲಾಗಿದೆ.