ಯಲ್ಲಮ್ಮ ದೇವಸ್ಥಾನದಲ್ಲಿ ಮೂರು ತಿಂಗಳಲ್ಲಿ 3.81 ಕೋಟಿ ಕಾಣಿಕೆ ಸಂಗ್ರಹ: ಹೊಸ ದಾಖಲೆ
3.81 crore collection in three months at Yallamma temple: a new record
ಉಗರಗೋಳ 09: ಸಮಿಪದ ಯಲ್ಲಮ್ಮನ ಗುಡ್ಡದಲ್ಲಿ ಬುಧವಾರ ಯಲ್ಲಮ್ಮ ದೇವಸ್ಥಾನ ಹುಂಡಿಗಳ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು ಮೂರು ತಿಂಗಳ ಅವಧಿಯಲ್ಲಿ ರೂ 3.81 ಕೋಟಿ ಮೌಲ್ಯದ ಕಾಣಿಕೆ ಸಂಗ್ರಹವಾಗಿದೆ.
ಇದರಲ್ಲಿ ರೂ 3,39,40,831 ನಗದು, 32,94,500 ಮೌಲ್ಯದ 340 ಗ್ರಾಂ ಚಿನ್ನಾಭರಣ, ರೂ 9,79,500 ಮೌಲ್ಯದ 8.797 ಕೆ,ಜಿ ಬೆಳ್ಳಿ ಆಭರಣ ಸೇರಿವೆ.
ದೇಶದ ನಾನಾ ಭಾಗಗಳಿಂದ ಯಲ್ಲಮ್ಮನಗುಡ್ಡಕ್ಕೆ ಆಗಮಿಸುವ ಭಕ್ತರು, ದೇವಸ್ಥಾನದ ಹುಂಡಿಯಲ್ಲಿ ಹಣ, ಚಿನ್ನಾಭರಣ ಮತ್ತು ಬೆಳ್ಳಿ ಆಭರಣಗಳನ್ನು ಹಾಕಿ ಭಕ್ತಿ ಸಮರ್ಿಸುತ್ತಾರೆ. 2025ರ ಎಪ್ರಿಲ್ 1 ರಿಂದ ಜೂನ್ 30ರ ಅವಧಿಯಲ್ಲಿ(3 ತಿಂಗಳು)ಹೀಗೆ ಹಾಕಿದ್ದ ಕಾಣಿಕೆಗಳನ್ನು ಐದು ಸುತ್ತುಗಳಲ್ಲಿ ಎಣಿಕೆ ಮಾಡಲಾಯಿತು.
2023 ರಲ್ಲಿ ಇದೇ ಅವಧಿಯಲ್ಲಿ ರೂ 1,65,17,056 ಕಾಣಿಕೆ, 2024ರಲ್ಲಿ ಈ ಅವಧಿಯಲ್ಲಿ ರೂ. 1,96,56,035 ಕಾಣಿಕೆ ಸಂಗ್ರಹವಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ದುಪ್ಪಟ್ಟು ಕಾಣಿಕೆ ಸಂಗ್ರಹವಾಗಿದ್ದು ಹೊಸ ದಾಖಲೆ ನಿರ್ಮಾಣವಾಗಿದೆ.
ದೇವಸ್ಥಾನದಲ್ಲಿ ವಿವಿಧ ಹೊಸ ಕ್ರಮಗಳನ್ನು ಅನುಸರಿಸಿದ್ದರಿಂದ ದೇವಸ್ಥಾನದ ಆದಾಯ ಹೆಚ್ಚಳವಾಗಿದೆ. ಇದನ್ನು ಸದ್ಬಳಕೆ ಮಾಡಿಕೊಂಡು ಭಕ್ತರಿಗೆ ವಿವಿಧ ಮೂಲಸೌಕರ್ಯ ಒದಗಿಸಲಾಗುವುದು. ವಸತಿ, ಶುದ್ದ ಕುಡಿಯುವ ನೀರು, ಸುಲಭ ದರ್ಶನ, ಭಕ್ತರಿಗೆ ನೆರಳಿನ ವೈವಸ್ಥೆ ಅಲ್ಲದೆ, ಸ್ವಚ್ಚತೆಯ ಕಡೆಗೆ ಗಮನ ನೀಡಲಾಗಿದೆ ಎಂದು ಯಲ್ಲಮ್ಮಾ ದೇವಸ್ಥಾನ ಅಭಿವೃದ್ದಿ ಕಾರ್ಯಧರ್ಶಿ ಅಶೋಕ ದುಡಗುಂಟಿ ತಿಳಿಸಿದರು.
ಸವದತ್ತಿ ತಹಶೀಲ್ದಾರ ಮಲ್ಲಿಕಾರ್ಜುನ ಹೆಗ್ಗಣ್ಣವರ, ಬೆಳಗಾವಿ ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿ ಬಾಳೇಶ ಅಬ್ಬಾಯಿ, ರಾಜು ಕಗದಾಳ, ಪ್ರಕಾಶ ಪ್ರಭುನವರ, ಅಲ್ಲಮಪ್ರಭು ಪ್ರಭುನವರ, ಆರ್ ಎಚ್ ಸವದತ್ತಿ, ಸಿ ಎನ್ ಕುಲಕರ್ಣಿ, ಸದಾನಂದ ಶಿಂತ್ರಿ, ಆಯ್ ಸಿ ಕಗದಾಳ, ಕೆನರಾ ಬ್ಯಾಂಕ್ ಮ್ಯಾನೇಜರ ಚಾಣಾಕ್ಷ ನವಲಕರ, ಮಂಜು ಆಡಕರ, ರಾಮಣ್ಣಾ ಕೊದಾಂನಪೂರ, ಎಮ್ ಎಮ್ ಕಗದಾಳ, ಪ್ರಭು ಹಂಜಗಿ, ಶಿವಾನಂದ ನೇಸರಗಿ, ಎಎಸ್‌ಆಯ್ ಬಿ ಆರ್ ಸಣ್ಣಮಾಳಗೆ, ಶ್ರೀಧರ ಗಲಗಲಿ, ಗೋವಿಂದರಾವ್ ಕುಲಕರ್ಣಿ, ಮಲ್ಲಪ್ಪ ದರೂರ, ಮುತ್ತು ಅಮಾತೇನ್ನವರ ಹಾಗೂ ದೇವಸ್ಥಾನದ ಅಧಿಕಾರಿ ಮತ್ತು ಸಿಬ್ಬಂದಿ ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 