2ಎ ಮೀಸಲಾತಿ ಮುಂದುವರಿಕೆಗೆ ಸರ್ಕಾರಕ್ಕೆ ಮನವಿ

2ಎ ಮೀಸಲಾತಿ ಮುಂದುವರಿಕೆಗೆ ಸರ್ಕಾರಕ್ಕೆ ಮನವಿ  2A Appeal to Govt for continuation of reservation

ಇಂಡಿ 22 : ಬಂಜಿಗ ಸಮುದಾಯವನ್ನು ಪ್ರವರ್ಗ 2ಎ ಅಡಿಯಲ್ಲಿಯೇ ಮುಂದುವರಿಸಿ, ಉದ್ಯೋಗ ಮೀಸಲಾತಿ ಸೌಲಭ್ಯವನ್ನು ಮುಂದುವರಿಸುವಂತೆ ಆಗ್ರಹಿಸಿ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಯಿತು.  ತಹಶೀಲ್ದಾರ್ರ ಮೂಲಕ ಸಲ್ಲಿಸಿದ ಮನವಿಯಲ್ಲಿ, ಬಂಜಿಗ ಸಮುದಾಯಕ್ಕೆ ಸಂಬಂಧಿಸಿದ ಮೀಸಲಾತಿ ವಿಚಾರದಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು. ಕರ್ನಾಟಕ ಹೈಕೋರ್ಟ್ನ ಕಲಬುರಗಿ ಪೀಠದಲ್ಲಿ ವಿಚಾರಣೆಗೆ ಬಂದಿದ್ದ ಪ್ರಕರಣವೊಂದರಲ್ಲಿ, ಬಂಜಿಗ ಸಮುದಾಯವನ್ನು ಉದ್ಯೋಗದ ಉದ್ದೇಶಕ್ಕೆ ಒಂದು ಪ್ರವರ್ಗದಲ್ಲಿ ಹಾಗೂ ಶಿಕ್ಷಣದ ಉದ್ದೇಶಕ್ಕೆ ಮತ್ತೊಂದು ಪ್ರವರ್ಗದಲ್ಲಿ ವರ್ಗೀಕರಿಸುವುದು ಸಂವಿಧಾನದ ಆಶಯಕ್ಕೆ ವಿರುದ್ಧವಾಗುತ್ತದೆ ಎಂಬ ಅಂಶವನ್ನು ಮನವಿಯಲ್ಲಿ ಉಲ್ಲೇಖಿಸಲಾಗಿದೆ.  

ಸಂವಿಧಾನದ ಅನುಚ್ಛೇದ 16(4)ರ ಆಶಯದಂತೆ ಬಂಜಿಗ ಸಮುದಾಯವನ್ನು ಪ್ರವರ್ಗ 2ಎ ಅಡಿಯಲ್ಲಿಯೇ ಪರಿಗಣಿಸಿ ಉದ್ಯೋಗ ಮೀಸಲಾತಿ ಸೌಲಭ್ಯವನ್ನು ಮುಂದುವರಿಸಬೇಕು. ಸಮುದಾಯದ ಶೈಕ್ಷಣಿಕ ಹಾಗೂ ಸಾಮಾಜಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಯಾವುದೇ ಗೊಂದಲಕ್ಕೆ ಅವಕಾಶ ನೀಡದೆ ಮೀಸಲಾತಿ ಸೌಲಭ್ಯ ಮುಂದುವರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.  ಈ ಸಂದರ್ಭದಲ್ಲಿ ತಾಲ್ಲೂಕು ಅಧ್ಯಕ್ಷ ಸಂಗಣಗೌಡ ಫಿರಾಬಟ್ಟಿ, ಸಂತೋಷ ಸಂಘ, ಸಿದ್ದಾರಾಮ ಲಬ್ಬಿ, ಬಸವರಾಜ ನಿಚ್ಚಳ, ಸಂತೋಷ ಪಾಟೀಲ, ಬಸವರಾಜ ಬಂಕೂರ, ಶಿವಾನಂದ ಅಂಗಡಿ, ರವಿ ನಿಗಡಿ, ಗೀರೀಶ್ ಪೊಪ್ಪಡಿ, ಪ್ರಭು ನಾಡಗೌಡ, ಅನಿಲ್ ಜಂಪಾ, ಸುನೀಲ್ ರಬಶೆಟ್ಟಿ, ಶಿವಪುತ್ರ ಕಡಕೋಳ, ಉಮೇಶ್ ಇಂಗಳೇಶ್ವರ ಸೇರಿದಂತೆ ಹಲವರು ಉಪಸ್ಥಿತರಿದ್ದರು.