ಜನವಾಡದಲ್ಲಿ ಎಸ್ಸಿ ಕಾಲೋನಿಗಳ ಅಭಿವೃದ್ಧಿಗೆ 25 ಲಕ್ಷ ಅನುದಾನ: ಕಾಮಗಾರಿಗೆ ಚಾಲನೆ

ಜನವಾಡದಲ್ಲಿ ಎಸ್ಸಿ ಕಾಲೋನಿಗಳ ಅಭಿವೃದ್ಧಿಗೆ 25 ಲಕ್ಷ ಅನುದಾನ: ಕಾಮಗಾರಿಗೆ ಚಾಲನೆ 25 lakh grant for development of SC colonies in Janwada: Work launched

ಚಿಕ್ಕೋಡಿ 29 :  ತಾಲೂಕಿನ ಜನವಾಡ ಗ್ರಾಮದಲ್ಲಿನ ಪರಿಶಿಷ್ಟ ಜಾತಿ ಕಾಲೋನಿಗಳಲ್ಲಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ರೂ. 25 ಲಕ್ಷಗಳ ಅನುದಾನ ಮಂಜೂರಾಗಿದ್ದು, ಗ್ರಾಮಸ್ಥರು ಕಾಮಗಾರಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಸನಾತನ ಮಗದುಮ್ಮ ಹಾಗೂ ಕುಮಾರ ಮಧಾಳೆ ಅವರು, ಜನವಾಡ ಗ್ರಾಮದಲ್ಲಿ ಈಗಾಗಲೇ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆದಿದ್ದು, ಜಾನವಾಡ-ಚಾಂದಪುರ ರಸ್ತೆ ನಿರ್ಮಾಣಕ್ಕೆ ರೂ. 68.50 ಲಕ್ಷ ಹಾಗೂ ಜನವಾಡದಿಂದ ಶಿರದವಾಡ ಗಡಿಯವರೆಗೆ ಡಾಂಬರೀಕರಣ ಕಾಮಗಾರಿಗೆ ರೂ. 1 ಕೋಟಿ ಅನುದಾನದಲ್ಲಿ ರಸ್ತೆ ಕಾಮಗಾರಿಗಳು ಪೂರ್ಣಗೊಂಡಿವೆ ಎಂದು ಹೇಳಿದರು.

ಇದೀಗ ಪರಿಶಿಷ್ಟ ಜಾತಿ ಕಾಲೋನಿಗಳಲ್ಲಿ ಚರಂಡಿ ನಿರ್ಮಾಣಕ್ಕಾಗಿ ರೂ. 25 ಲಕ್ಷ ಅನುದಾನ ಮಂಜೂರಾಗಿರುವುದು ಗ್ರಾಮ ಅಭಿವೃದ್ಧಿಗೆ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ ಎಂದು ಅವರು ತಿಳಿಸಿದರು.ಈ ಎಲ್ಲಾ ಕಾಮಗಾರಿಗಳು ಕರ್ನಾಟಕ ಸರ್ಕಾರದ ನವದೆಹಲಿ ವಿಶೇಷ ಪ್ರತಿನಿಧಿಗಳು ಹಾಗೂ ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ ಬಾ ಹುಕ್ಕೇರಿ ಮತ್ತು ಚಿಕ್ಕೋಡಿ-ಸದಲಗಾ ಕ್ಷೇತ್ರದ ಶಾಸಕರಾದ ಗಣೇಶ ಪ್ರಕಾಶ ಹುಕ್ಕೇರಿ ಅವರ ಪ್ರಯತ್ನದಿಂದ ಸಾಧ್ಯವಾಗಿದ್ದು, ಗ್ರಾಮಸ್ಥರು ಇವರಿಗೆ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಜ್ಯೋತಿಬಾ ಮೋಕಾಶೆ, ರಾಮಚಂದ್ರ ಮೋಕಾಶೆ, ಶಿವಾಜಿ ಕಾಂಬಳೆ, ರಾಮಾ ಚೌಗಲೆ, ಅಣ್ಣಾ ಘಾಟಗೆ, ದೋಂಡಿರಾಮ ಪಾಟೀಲ, ಲಕ್ಷ್ಮಣ ಘಾಟಗೆ, ಪಪ್ಪು ಪಾಟೀಲ, ಅಮೋಲ ಪಾಟೀಲ, ಅಪ್ಪಾಸಾಬ ಪಾಟೀಲ, ಸುರೇಶ್ ಕೋರೆ, ಸೋಮರಾಯ ಗಾವಡೆ, ದೇವಾನಂದ ಘಾಟಗೆ ಸೇರಿದಂತೆ ಗ್ರಾಮಸ್ಥರು, ಸಹಕಾರ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಗುತ್ತಿಗೆದಾರ ಅಸ್ಲಂ ನದಾಫ್ ಉಪಸ್ಥಿತರಿದ್ದರು.