ಕೊಪ್ಪಳದ ಗವಿಸಿದ್ದೇಶ್ವರ ಅಜ್ಜನ ಜಾತ್ರೆಗೆ ದೇವಸಮುದ್ರದಿಂದ 25ಸಾವಿರ ಜೋಳದ ರೊಟ್ಟಿ ಜೊತೆಗೆ ಅಕ್ಕಿ
25,000 jola rotis along with rice from Devsamudra for the Gavisiddeshwara Ajjana fair in Koppal
ಕಂಪ್ಲಿ 31 : ಕೊಪ್ಪಳದ ಗವಿಸಿದ್ದೇಶ್ವರ ಅಜ್ಜನ ಜಾತ್ರೆಗೆ ಆಗಮಿಸುವ ಭಕ್ತರ ದಾಸೋಹಕ್ಕಾಗಿ ದೇವ ಸಮುದ್ರ ಗ್ರಾಮ ಪಂಚಾಯತಿ ತುರಮುಂದಿ ಬಸವೇಶ್ವರ ಯುವಕ ಸಂಘದವರು 25ಸಾವಿರ ಜೋಳದ ರೊಟ್ಟಿ ಹಾಗೂ 5ಕ್ವಿಂಟಲ್ ಅಕ್ಕಿಯನ್ನು ಸಂಗ್ರಹಿಸಿ ಮಠಕ್ಕೆ ಕಳುಹಿಸಿ ಕೊಡಲಾಗುತ್ತಿದೆ.2026ರಂದು ಜನವರಿ 5ರಂದು ಕೊಪ್ಪಳದಲ್ಲಿ ಅಜ್ಜನ ಜಾತ್ರೆ ಆರಂಭವಾಗಲಿದ್ದು, ದೇವಸಮುದ್ರ ಗ್ರಾಮದ ಶ್ರೀಲಕ್ಷ್ಮೀ ನಾರಾಯಣಸ್ವಾಮಿ ದೇವಸ್ಥಾನದ ಆವರಣದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಸರ್ವಧರ್ಮದ ಮಹಿಳೆಯರು ಜೋಳದ ರೊಟ್ಟಿಯನ್ನು ಬಿಡುವಿಲ್ಲದೆ ತಯಾರಿಸುವಲ್ಲಿ ತೊಡಗಿ ಕೊಂಡಿದ್ದಾರೆ ಗ್ರಾಮದ ಕೆಲವರು ತಮ್ಮ ತಮ್ಮ ಮನೆಗಳಲ್ಲಿಯೇ ರೊಟ್ಟಿಗಳನ್ನು ತಯಾರಿಸಿ ತಂದು ಕೊಡುತ್ತಿದ್ದಾರೆ. ಮೊದಲು ಐದು ಸಾವಿರ ಜೋಳದ ರೊಟ್ಟಿ ತಯಾರಿಸಿ ಕೊಡುವ ಯೋಜನೆ ಇತ್ತು.ಆದರೆ ಗ್ರಾಮದ ಮಹಿಳೆಯರು ಹೆಚ್ಚಿನ ಉತ್ಸಾಹದಿಂದ ರೊಟ್ಟಿ ತಯಾರಿಸಲು ಸ್ವತಃ ಮುಂದೆ ಬಂದಿದ್ದರಿಂದ 25 ಸಾವಿರ ರೊಟ್ಟಿ ನೀಡಲು ಯೋಜನೆ ರೂಪಿಸಿದ್ದು,
ಈಗಾಗಲೇ ಹದಿನೈದು ಸಾವಿರ ರೊಟ್ಟಿಗಳನ್ನು ಸಂಗ್ರಹಿಸಲಾಗಿದೆ.ಉಳಿದ ರೊಟ್ಟಿಗಳನ್ನು ಎರಡು ದಿನಗಳಲ್ಲಿ ಸಂಗ್ರಹಿಸಲಾಗುವುದು. ಜ.2ರಿಂದ ಗ್ರಾಮದ ಯುವಕರು ಪಾದಯಾತ್ರೆ ಮೂಲಕ ಕೊಪ್ಪಳದ ಗವಿಮಠಕ್ಕೆ ತೆರಳಿ ಎರೆಡು ಮೂರು ದಿನ ವಾಸ್ತವ್ಯ ಹೂಡಿ ಅಜ್ಜನ ಸೇವೆ ಮಾಡಲಿದ್ದಾರೆಂದು ಶ್ರೀ ತುರುಮುಂದಿ ಬಸವೇಶ್ವರ ಯುವಕ ಮಂಡಳಿಯ ಪದಾಧಿಕಾರಿಗಳು ತಿಳಿಸಿದರು.ಈ ಸಂದರ್ಭದಲ್ಲಿ ಮುಖಂಡರಾದ ಜಿ.ಅಮರೇಗೌಡ, ಗುಡ್ಡದ ಜಂಬುನಾಥ ಅಳ್ಳಳ್ಳಿ ಮಂಜುನಾಥ, ಅಗಸಿ ಬಸವನಗೌಡ, ಎಚ್‌ಎಸ್.ಮಲ್ಲಿಕಾರ್ಜುನ, ಎಸ್. ಚಿದಾನಂದಪ್ಪ, ರುದ್ರಗೌಡ, ಜೆ.ಚೆನ್ನವೀರ್ಪ ಸೇರಿದಂತೆ ಇತರರು ಇದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 