ಜಗದ್ಗುರು ಡಾ. ಗಂಗಾಧರ ರಾಜಯೋಗೀಂದ್ರ ಮಹಾಸ್ವಾಮಿಗಳವರ 23ನೇ ಪುಣ್ಯ ಸ್ಮರಣೋತ್ಸವ

ಜಗದ್ಗುರು ಡಾ. ಗಂಗಾಧರ ರಾಜಯೋಗೀಂದ್ರ ಮಹಾಸ್ವಾಮಿಗಳವರ 23ನೇ ಪುಣ್ಯ ಸ್ಮರಣೋತ್ಸವ 23rd Punya Smaranatsav of Jagadguru Dr. Gangadhar Rajyogindra Mahaswami

ಲೋಕದರ್ಶನ ವರದಿ 

ಹುಬ್ಬಳ್ಳಿ 27 : ಜಗದ್ಗುರು ಮೂರುಸಾವಿರಮಠ ಮಹಾಸಂಸ್ಥಾನದ ಮಠಾಧೀಶರಾಗಿದ್ದ ಮನ್ಮಹಾರಾಜ ನಿರಂಜನ ಜಗದ್ಗುರು ಡಾ. ಗಂಗಾಧರ ರಾಜಯೋಗೀಂದ್ರ ಮಹಾಸ್ವಾಮಿಗಳವರ 23ನೇ ಪುಣ್ಯ ಸ್ಮರಣೋತ್ಸವ ನಿಮಿತ್ತ ಪೂಜ್ಯ ಡಾ. ಗಂಗಾಧರ ಸ್ವಾಮಿಗಳವರ ಗದ್ದಿಗೆಗೆ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ,  ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿ ಹಾಗೂ ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಮಾಲಾರೆ​‍್ಣ ಮಾಡಿ ಗೌರವ ಪೂರ್ವಕವಾಗಿ ಶ್ರದ್ಧಾ ಭಕ್ತಿಯಿಂದ ಭಾವಪೂರ್ಣ ನಮನಗಳನ್ನು ಸಲ್ಲಿಸಲಾಯಿತು.   

ಸೋಹನ ಸುರೇಶ ಹೊರಕೇರಿ, ಸುಜಯ ಸುರೇಶ ಹೊರಕೇರಿ, ಮೂರುಸಾವಿರಮಠ ಪೂಜಾ ಸಮಿತಿಯ ಮುಖ್ಯಸ್ಥರಾದ ಚನ್ನಬಸಪ್ಪ ಧಾರವಾಡ ಶೆಟ್ಟರ್, ಸಾಹಿತಿ, ನುಡಿ ಕನ್ನಡ ಬಳಗದ, ಹಿರಿಯರಾದ ವೀರಣ್ಣ ಹೂಲಿ,  ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ,  ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ,ಮಠದ ಅರ್ಚಕ ಶಶಿಧರ ಹಿರೇಮಠ,  ಮುಂತಾದವರು ಭಾಗವಹಿಸಿದ್ದರು.  

ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ ಅವರು ಮಾತನಾಡಿ ಡಾ. ಗಂಗಾಧರ ರಾಜಯೋಗೀಂದ್ರ ಮಹಾಸ್ವಾಮಿಗಳವರು ಹುಬ್ಬಳ್ಳಿಯಲ್ಲಿ ಶಾಂತಿ ನೆಲೆಸಲು ಶ್ರೀಗಳು ಮಾಡಿದ ಕಾರ್ಯ ಅಪಾರವಾದದ್ದು.  ಸಾಹಿತ್ಯ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಯನ್ನು ಸ್ಮರಿಸಿದರು. ಶ್ರೀಗಳ ಆಶೀರ್ವಾದ ಭಕ್ತರ ಮೇಲೆ ಸದಾವಕಾಲ ಇರಲಿ ಎಂದು ಆಶಯ ವ್ಯಕ್ತಪಡಿಸಿದರು.