ಮುಂಡಗೋಡ ಲೋಕ್ ಅದಾಲತ್ನಲ್ಲಿ 220 ಪ್ರಕರಣಗಳ ಇತ್ಯರ್ಥ
220 cases disposed of in Mundagoda Lok Adalat
ಲೋಕದರ್ಶನ ವರದಿ
ಮುಂಡಗೋಡ 15 : ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ, ಬೆಂಗಳೂರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಕಾರವಾರ ಅವರ ನಿರ್ದೇಶನದಂತೆ ಮುಂಡಗೋಡ ನ್ಯಾಯಾಲಯದಲ್ಲಿ ಶನಿವಾರ (ಮಾ.14) ರಾಜ್ಯ ಲೋಕ್ ಅದಾಲತ್ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ನ್ಯಾಯಿಕ ಸದಸ್ಯರಾಗಿ ನ್ಯಾಯಾಧೀಶರಾದ ಅಕ್ಷತಾ ಸಿ.ಆರ್, ಹಾಗೂ ನ್ಯಾಯಿಕೇತರ ಸಂಧನಾಕಾರರಾಗಿ ವಕೀಲರಾದ ಗೀತಾ ಡಿ.ಕೆ. ಅವರು ಉಪಸ್ಥಿತರಿದ್ದು ಪ್ರಕರಣಗಳ ವಿಚಾರಣೆ ನಡೆಸಿದರು. ಲೋಕ್ ಅದಾಲತ್ನಲ್ಲಿ ನ್ಯಾಯಾಲಯದಲ್ಲಿ ಬಾಕಿ ಇದ್ದ ವಿವಿಧ ಪ್ರಕರಣಗಳನ್ನು ಪರಸ್ಪರ ಸಮಾಧಾನದ ಮೂಲಕ ಇತ್ಯರ್ಥಗೊಳಿಸಲಾಯಿತು. ಇದರಲ್ಲಿ 24 ಎನ್.ಐ. ಆ್ಯಕ್ಷ ಪ್ರಕರಣಗಳು, 38 ಅಮಲ್ಟಾರಿ ಪ್ರಕರಣಗಳು, 05 ಮೂಲದಾವಾ ಪ್ರಕರಣಗಳು, 45 ಜನನ-ಮರಣ ಪ್ರಕರಣಗಳು 01 ಪಿ.ಸಿ.ಆರ್. ಪ್ರಕರಣ, 02 ಕ್ರಿಮಿನಲ್ ಮಿಸಿಲೆನಿಯಸ್ ಪ್ರಕರಣಗಳು, 05 ಐ.ಪಿ.ಸಿ. ಪ್ರಕರಣ ಹಾಗೂ 100 ಕೆ.ಪಿ.ಆ್ಯಕ್ಟ್ ಪ್ರಕರಣಗಳು ಸೇರಿ ಒಟ್ಟು 220 ಪ್ರಕರಣಗಳು ಇತ್ಯರ್ಥಗೊಂಡವು.
ಈ ಪ್ರಕರಣಗಳಲ್ಲಿ ಒಟ್ಟು ರೂ.92,00,768 ಮೊತ್ತದ ವ್ಯವಹಾರ ಒಳಗೊಂಡಿದ್ದು, ರೂ.34,911 ದಂಡ ವಸೂಲಿ ಪ್ರಕರಣಗಳು ಇತ್ಯರ್ಥಗೊಂಡು ಒಟ್ಟು ರೂ.79,38,886 ಮೊತ್ತವನ್ನು ಸರ್ಕಾರ ಹಾಗೂ ಬ್ಯಾಂಕ್ಗಳಿಗೆ ಭರಣ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಮುಂಡಗೋಡ ವಕೀಲರ ಸಂಘದ ಅಧ್ಯಕ್ಷರಾದ ಎನ್.ಎ.ನಿಂಬಾಯಿ, ಉಪಾಧ್ಯಕ್ಷರಾದ ಎಸ್. ಎಮ್. ಮಲವಳ್ಳಿ, ಕಾರ್ಯದರ್ಶಿಗಳಾದ ಎಸ್.ಕೆ. ಕೊಳ್ಳಾನವರ, ಖಜಾಂಜಿಯಾದ ಕೆ.ಎಸ್. ಗುಲ್ತಾನವರ, ಹಾಗೂ ಹಿರಿಯ ವಕೀಲರಾದ ಸಿ.ಎಸ್. ಗಾಣೀಗೇರ, ಕೆ.ಎನ್.ಹೆಗಡೆ, ಬಿ. ಎಫ್ ಪೂಜಾರ , ಗುಡ್ಡಪ್ಪ ಎಸ್. ಕಾತೂರ , ಎಮ್. ಎ. ನಂದಿಗಟ್ಟಿ, ಸುಜಿತ ಎಸ್, ಎನ್. ಎಸ್. ಕಾತೂರ, ಆರ್. ಎಸ್. ಹಂಚಿನಮನಿ, ಆರ್. ಬಿ. ಹುಬ್ಬಳ್ಳಿ, ಜಿ. ಆರ್. ಆಲದಕಟ್ಟಿ, ಜ್ಯೋತಿ ತಲ್ಲೂರ, ಎನ್.ಬಿ. ಸಣ್ಣಳ್ಳಿಮನೆ, ಭಾರತಿ, ರವಿ ಹೆಗಡೆ, ಪ್ರಮೋದ ಸಣ್ಣಮನಿ, ಸೇರಿದಂತೆ ನ್ಯಾಯಾಲಯದ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಹಾಗೂ ಬ್ಯಾಂಕ್ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 