21ನೇ ವಾರ್ಷಿಕ ಸರ್ವ ಸಾದಾರಣ ಸಭೆ

21ನೇ ವಾರ್ಷಿಕ ಸರ್ವ ಸಾದಾರಣ ಸಭೆ 21st Annual General Meeting

ಸಂಬರಗಿ  22: ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಂಘದಲ್ಲಿ 73 ಲಕ್ಷ 89 ಸಾವಿರ ಐದು ನೂರು ಇದ್ದು ಸಂಘದಿಂದ 7 ಕೋಟಿ 50 ಲಕ್ಷ 14 ಸಾವಿರ 814 ರೂಪಾಯಿ ಸಾಲ ವಿತರಿಸಲಾಗಿದ್ದು ಸಂಘದ ಸದಸ್ಯರಿಗೆ 7ಅ ಲಾಭಾಂಶವನ್ನು ವಿತರಿಸಲಾಗುವುದು ಸಂಘವು ಉನ್ನತ ಮಟ್ಟ ಹೊಗಲು ಶಾಸಕ ಲಕ್ಷ್ಮಣ ಸವದಿ,ಶಾಸಕರಾದ ರಾಜು ಕಾಗೆ ಇವರ ಪಾತ್ರ ದೊಡ್ಡದಿದೆ ಎಂದು ಸಂಘದ ಅಧ್ಯಕ್ಷರಾದ ರಾವಸಾಬ ಬೆವನೂರ ಹೇಳಿದರು. 

ಶಿವನೂರ ಗ್ರಾಮದಲ್ಲಿ ಸಂಘದ 21ನೇ ವಾರ್ಷಿಕ ಸರ್ವ ಸಾದಾರಣ ಸಭೆಯಲ್ಲಿ ಅದ್ಯಕ್ಷ ಸ್ಥಾನ ವಹಿಸಿ ಮಾತನಾಡಿದ ಅವರು ಸಂಘ ದುಡಿಯುವ ಬಂಡವಾಳ 9 ಕೋಟಿ 90 ಲಕ್ಷ 1ಸಾವಿರ 314ಇದ್ದು ಸಂಘದ ವಾರ್ಷಿಕ ವಹಿವಾಟು 21 ಕೋಟಿ ಇದೆ ಸಂಘದಿಂದ ಹೈನುಗಾರಿಕೆ ಸಾಲು ನೀಡುತ್ತೆವೆ. ಸಂಘದ ನಿರ್ದೆಶಕರು, ಸದಸ್ಯರು ಹಾಗೂ ಸಿಬ್ಬಂದಿ ವರ್ಗದಿಂದ 12 ಲಕ್ಷ ಲಾಭ ಪಡೆದಿದೆ,ಸಂಘದ ಯಾವುದೆ ಸದಸ್ಯರು ಮೃತರಾದರೆ ಕುಟುಂಬಕ್ಕೆ ಅಂತ್ಯಸಂಸ್ಕಾರಕ್ಕೆ ಎರಡು ಸಾವಿರ ನಿಡುತ್ತೆವೆ ಜಿಲ್ಲೆಯಲ್ಲಿ ಅಷ್ಟೆ ಅಲ್ಲದೆ ರಾಜ್ಯದಲ್ಲಿ ಏಕೈಕ ಸಂಘ ಎಂದು ಹೆಮ್ಮೆಯಿಂದ ಹೆಳಿದರು ಸಂಘದಲ್ಲಿ ಒಟ್ಟು 796 ಸದಸ್ಯರ ಸಂಖ್ಯೆ ಹೊಂದಿದೆ ಚಿಕ್ಕ ಉದ್ದಮಿದಾರರಿಗೆ ಪಿಡಿಪಿ ಮುಖಾಂತರ ಸಾಲ ನೀಡಿ ಪ್ರೋತ್ಸಾಹ ನಿಡುತ್ತಿದ್ದೆವೆ ಎಂದರು. 

ಈ ವೇಳೆ ಸಂಘದ ಉಪಾಧ್ಯಕ್ಷರಾದ ಹೂವಣ್ಣ ಮಾನೆ,ನಿರ್ದೇಶಕರಾದ ಅಪ್ಪಸಾಬ ಕಿರಣಗಿ,ಅಶೋಕ ಕಿರಣಗಿ,ರಾವಸಾಬ ಗುಗ್ಗರಿ,ರೋಹಿತ ಮಗದುಮ್ಮ,ಪಂಡಿತ ಕಾಂಬಳೆ ಶ್ರೀಮತಿ ಸರಸ್ವತಿ ಆಜೂರ,ರೇಖಾ ಬಿರಾದಾರ ಸುಖದೇವ ಸನದಿ,ಅವಣ್ಣ ವಾಘರೆ, ಕರಣ ಬೆವನೂರ ಎ.ಟಿ ಮಾಳಿ ಅಡಹಳ್ಳಿ ಸರ್,ಅಣ್ಣಪ್ಪ ಮಾನೆ ಕಿರಣ ಬುರ್ಲಿ,ರಾಜು ಆಜೂರ,ರಾವಸಾಭ ಬಿರಾದಾರ,ರಾಜು ಬೇವನೂರ ಉಪಸ್ಥಿತಿ ಇದ್ದರು. ಸಂಘದ ಮುಖ್ಯ ಕಾರ್ಯನಿರ್ವಾಹಕರು ವರದಿ ವಾಚನ ಮಾಡಿದರು,ಶ್ರೀಶೈಲ ಪಾಟೀಲ ವಂದಿಸಿದರು 

ಸಂಘದ ನಿರ್ದೇಕರು ಸಂಭಾಜಿ ವಾಘಮೋಡೆ ಮಾತನಾಡಿ ರೈತರು ರಾಸಾಯನಿಕ ಗೊಬ್ಬರ ಹೊರೆತು ಪಡೆಸಿ ತಿಪ್ಪೆ ಗೊಬ್ಬರ ಬಳಸಿ ರೈತರು ಉತ್ತಮ ಗುಣಮಟ್ಟದ ಬೇಳೆ ಬೇಳೆಯಲು ಸಾಧ್ಯವಿದೆ, ರೈತರು ಯಾವುದೇ ಕಾರ್ಖಾನೆಗಳ ತ್ಯಾಜ್ಯ ನೀರು ಬಳಸದಿರು ವಿನಂತಿಸಿದರು. ಇದರ ಪರಿಣಾಮ ಕುಡಿಯುವ ನೀರು ಸವಳಾಗಿ ಜನರ ಆರೋಗ್ಯದ ಮೇಲೆ ಪರಿಣಾಮ ಬಿರುತ್ತದೆ ಎಂದು ತಿಳಿಸಿದರು