ರಾಂಪಾಲ ಮಹಾರಾಜ ಶಿಷ್ಯರಾದ 21 ಜನರು ಸೆ. 8ರಂದು ದೇಹ ತ್ಯಾಗಕ್ಕೆ ನಿರ್ಧಾರ
21 disciples of Rampala Maharaja decide to sacrifice their bodies on Sept. 8
ಸ್ವಯಂ ಪ್ರೇತರಾಗಿ ಬಂಧನದಲ್ಲಿ: ತಾಲೂಕಾ ಆಡಳಿತಕ್ಕೆ ತಲೆ ನೋವು
ಸಂಬರಗಿ 23: ಕರ್ನಾಟಕ ಮಹಾರಾಷ್ಟ್ರ ಗಡಿಯಲ್ಲಿರುವ ಅನಂತಪೂರ ಗ್ರಾಮದ ಹೊರವಲಯದ ಇರಕ ತೋಟದ ವಸ್ತಿಯಲ್ಲಿ ರಾಂಪಾಲ ಮಹಾರಾಜ ಶಿಷ್ಯರಾದ 21 ಜನರು ಸಪ್ಟೆಂಬರ 8ರಂದು ದೇಹ ತ್ಯಾಗ ಮಾಡುವವರಿದ್ದು ಸಧ್ಯದ ಸ್ಥಿತಿಯಲ್ಲಿ ಸ್ವಯಂ ಪ್ರೇತರಾಗಿ ಬಂಧನ ಸ್ಥಿತಿಯಲ್ಲಿದ್ದು ಇದರಿಂದ ತಾಲೂಕಾ ಆಡಳಿತಕ್ಕೆ ತಲೆ ನೋವಾಗಿದ್ದು ಸಾವಿರಾರು ಜನರು ಅವರನ್ನು ಭೇಟಿಯಾಗಲು ಬರುತ್ತಿದ್ದಾರೆ. ಗಡಿಭಾಗದಲ್ಲಿ ಇದೊಂದು ಅಶ್ಚರ್ಯಕರ ಘಟನೆಯಾಗಿದೆ. ಆದರೆ ಅವರು ತಮ್ಮ ಸ್ವಯಂ ಪ್ರೇರಿತ ಬಂಧನಕ್ಕೊಳಗಾಗಿದ್ದು, ಯಾರಿಗೂ ಭೇಟಿಯಾಗುತ್ತಿಲ್ಲ ತಾಲೂಕಾ ಹಾಗೂ ಜಿಲಾಡಳಿತಕ್ಕೆ ಇದೊಂದು ಸವಾಲಾಗಿದೆ.
ಕಳೆದ 5 ವರ್ಷಗಳ ಹಿಂದೆ ತುಕಾರಾಮ ಇರಕರ ಕುಟುಂಬದ ರಮೇಶ ಇರಕರ ಇವರು ಪುಣೆಯಲ್ಲಿ ರಾಂಪಾಲ ಮಹಾರಾಜರ ಗ್ರಂಥವನ್ನು ಓದಿದ ನಂತರ ಅವರು ಪ್ರೇರಿತರಾಗಿ ತಮ್ಮ ಕುಟುಂಬದ ತಾಯಿ ಸಾವಿತ್ರಿ ತಂದೆ ತುಕಾರಾಮ ಪತ್ನಿ ವೈಷ್ಣವಿ ತಂಗಿ ಮಾಯಾ ಶಿಂಧೆ ಇವರೆಲ್ಲರನ್ನು ಅವರ ಅನುಯಾಯಿ ಮಾಡಿ ಮನೆಯಲ್ಲಿರುವ ಬೆಲೆಬಾಳುವ ವಸ್ತುಗಳನ್ನು ಹಾಗು ದನಕರಗಳನ್ನು ಮಾರಿ ಸಾಲ ಮುಟ್ಟಿಸಿ ಕೇವಲ ನೀರಿನ ಮೇಲೆ ಜೀವನವನ್ನು ಸಾಗುಸುತ್ತಿದ್ದು ಯಾರಾದರು ಬೇಟಿಗೆ ಬಂದರೆ ಒಬ್ಬ ವ್ಯಕ್ತಿ ಮಾತ್ರ ಹೊರಬಂದು ಕೈ ಜೋಡಿಸಿ ನಮಸ್ಕರಿಸಿ ಯಾರೊಂದಿಗೂ ಮಾತನಾಡದೆ ಮರಳಿ ಮನೆ ಒಳಗೆ ಹೋಗುತ್ತಾರೆ. ಇವರ ಈ ವರ್ತನೆಯಿಂದ ಜನರಲ್ಲಿ ಅತಂಕ ಉಂಟಾಗಿದ್ದು ಅದಕ್ಕಾಗಿ ಇಗಾಗಲೆ ತಾಲೂಕಾ ಆಡಳಿತ ಬಂದು ಭೇಟಿಯಾಗಿ ಅವರ ಮನ ಒಲಿಸುವ ಪ್ರಯತ್ನ ಮಾಡದರು ಫಲಕಾರಿಯಾಗಿಲ್ಲ ಶನಿವಾರ ಬೆಳಿಗಿನ ಜಾವ ಉತ್ತರ ಪ್ರದೇಶದಿಂದ ಗೊವಿಂದ ದಾಸ ಪುಣೆಯ ಕಾತ್ರಜದಿಂದ ಪ್ರವೀಣ ದಾಸ ಹಾಗೂ ಚಂದನ ದಾಸ ಜಾಮಿನಿ ದಾಸಿ ಸವಿತಾ ದಾಸಿ ಇವರು ಮೂಲತಃ ಉತ್ತರ ಪ್ರದೇಶದವರಿದ್ದು ಈಗ ಪುಣೆಯಲ್ಲಿ ವಾಸಮಾಡುತ್ತಿದ್ದು ಇವರು ದೇಹ ತ್ಯಾಗ ಮಾಡಲು ಅನಂತಪೂರದ ಇರಕರ ತೋಟಕ್ಕೆ ಆಗಮಿಸಿದ್ದಾರೆ. ಇನ್ನೂ ವಿಜಯಪೂರದಿಂದ 5 ಜನರು ಪುಣೆಯಿಂದ 6 ಜನರು ಬರುವ ಶಂಕೆಯಿದೆ. ಸಪ್ಟೆಂಬರ 6, 7 ಹಾಗೂ 8 ರಂದು ತಮ್ಮ ಮನೆಯಲ್ಲಿ ವಿಶೇಷ ಪೂಜೆಯ ನಂತರ ದಿ 8ರಂದು ರಾತ್ರಿ 12 ಗಂಟೆಗೆ ಮಹಾರಾಜ ತೀರ್ಥ ಸೇವನೆ ನಂತರ ಶರೀರಿಂದ ಆತ್ಮ ಮುಕ್ತಿಯಾಗಿ ಪರಮಾತ್ಮನಡೆಗೆ ಹೋಗುವುದನ್ನು ತಾವು ಬಂದು ನೋಡಬಹುದು ಎಂದು ತಿಳಿಸಿದ್ದಾರೆ.
ತೀರ್ಥ ನೀಡಲು ಬರುವ ಮಹಾರಾಜರಿಗೆ ಬೆಳ್ಳಿಯ ಕುರ್ಚಿಯನ್ನು ತಂದಿದ್ದು ಅವರು ಬರುವ ದಿನದ ವರೆಗೂ ಆ ಕುರ್ಚಿಗೆ ಪ್ರತಿ ಗಂಟೆಗೆ ಒಂದು ಬಾರಿ ಸಾಷ್ಟಾಂಗ ನಮಸ್ಕಾರ ಮಾಡುತ್ತು ತೀರ್ಥ ಸೇವನೆಯ ದಿನವನ್ನು ಕಾಯುತ್ತಾ ಸ್ವಯಂ ಬಂಧನದಲ್ಲಿದ್ದಾರೆ.
ಸ್ಥಳಕ್ಕೆ ಚಿಕ್ಕೋಡಿ ಎಸಿ ಸುಭಾಸ ಸಂಪಗಾಂವಿ ಡಿವಾಯ್‌ಎಸ್‌ಪಿ ಪ್ರಶಾಂತ ಮುನ್ನವಳಿ ತಹಶೀಲ್ದಾರ ಸಿದರಾಯ ಭೋಸಗೆ ಕಂದಾಯ ನೀರೀಕ್ಷಕರ ವಿನೋದ ಕದಮ ಗ್ರಾಮ ಆಡಳಿತಾಧಿಕಾರಿ ನಾಗೇಶ ಖಾನಾಪೂರ ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರ ಜೋತೆ ಚರ್ಚೆಮಾಡಿ ಅವರ ಮನಸು ಬದಲಿಸುವ ಪ್ರಯತ್ನ ಮಾಡಿದ್ದಾರೆ ಅದರೆ ಯಾವುದೇ ಪರಿಣಾಮ ಬೀರಿಲ್ಲ ಅದಕ್ಕಾಗಿ ಅವರು ಕಾನೂನು ರೀತಿ ಕ್ರಮ ಕೈಗೋಳ್ಳುವ ಸಾಧ್ಯತೆಯಿದ್ದು ಈ ಘಟನೆಯು ನಡಯಬಾರದೆಂದು ಜಿಲ್ಲಾಡಳಿತ ಹಾಗೂ ತಾಲೂಕಾ ಅಡಳಿತ ಪ್ರಯತ್ನ ಮಾಡುತ್ತಿದೆ.
ಬರುವ ಮಹಾರಾಜರಿಗೆ ಬೆಳ್ಳಿಯ ಕುರ್ಚಿ ತಮ್ಮ ಮನೆಯಲ್ಲಿರುವ ಬೆಲೆಬಾಳುವ ವಸ್ತುಗಳನ್ನು ಹಾಗೂ ಜಾಣುವಾರಗಳನ್ನು ಮಾರಾಟ ಮಾಡಿದ್ದಾರೆ ಅವರ ಮನೆಗೆ ಹೋಗಲು ದಾರಿಯಿಲ್ಲ ಕಂದಾಯ ಇಲಾಖೆ ಹಾಗೂ ಪೋಲೀಸ ಇಲಾಖೆ ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ ಮತ್ತು ಮಹಾರಾಷ್ಟ್ರದ ಜತ್ತ ತಾಲೂಕಿನ ಪೋಲಿಸ ಅಧಿಕಾರಿಗಳು ಮಗಳು ಮಾಯಾ ಶೀಂದೆ ಮಹಾರಾಷ್ಟ್ರದ ಕೊಡನೂರ ಗ್ರಾಮದ ಇವರುನ್ನು ಠಾಣೆಗೆ ಕರಯಿಸಿ ಪರೀಶೀಲನೆ ಮಾಡಿ ಈ ಪ್ರಕರಣವನ್ನು ಅಥಣಿ ಪೋಲಿಸ ಠಾಣೆಗೆ ವರ್ಗಾಯಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 