ಮಹಿಳೆ ವೀರರಾಣಿ ಕಿತ್ತೂರ ಚನ್ನಮ್ಮ 201ನೇ ವಿಜಯೋತ್ಸವ
201st Victory Anniversary of the Woman Heroine Kitthura Channamma
ಲೋಕದರ್ಶನ ವರದಿ
ಮಹಿಳೆ ವೀರರಾಣಿ ಕಿತ್ತೂರ ಚನ್ನಮ್ಮ 201ನೇ ವಿಜಯೋತ್ಸವ
ಹುಬ್ಬಳ್ಳಿ23:ಸ್ವಾತಂತ್ರ್ಯಕ್ಕಾಗಿ ಬ್ರಿಟೀಶರ ವಿರುದ್ಧ ಹೊರಾಡಿದ ್ರ್ರಥಮ ಮಹಿಳೆ ವೀರರಾಣಿ ಕಿತ್ತೂರ ಚನ್ನಮ್ಮ 201ನೇ ವಿಜಯೋತ್ಸವದ ಶುಭ ಸಂದರ್ಭದಲಿ ್ಲಹುಬ್ಬಳ್ಳಿಯ ಮಧ್ಯಭಾಗದಲ್ಲಿರುವ ವೀರರಾಣಿ ಕಿತ್ತೂರ ಚನ್ನಮ್ಮ ಪ್ರತಿಮೆಗೆ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿ ಯವತಿಯಿಂದ ಮಾಲಾರೆ್ಣ ಮಾಡಿ ಭಕ್ತಿ, ಅಭಿಮಾನ, ಪ್ರೀತಿಯಿಂದ ಗೌರವ ಪೂವಕ ನಮನಗಳನ್ನುಸಲ್ಲಿಸಲಾಯಿತು.ಅತಿಥಿಗಳು ವೀರರಾಣಿ ಕಿತ್ತೂರ ಚನ್ನಮ್ಮನ ಸಾಹಸ, ದೈರ್ಯ, ದಿಟ್ಟತನ, ಮುಂತಾದ ಗುಣಗಳನ್ನು ಮುಕ್ತಕಂಠದಿಂದ ಸ್ಮರಿಸಿದರು.
ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಮಾಜಿ ಅಧ್ಯಕ್ಷ, ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ನೂತನ ಅಧ್ಯಕ್ಷ, ರಮೇಶ ಪಾಟೀಲ, ವಾಕರಸಾ ಸಂಸ್ಥೆಯ ಮಾಜಿ ಅಧ್ಯಕ್ಷ ಸದಾನಂದಡಂಗನವರ, ಉದ್ಯಮಿಲಕ್ಷ್ಮಿ ಕಾಂತ್ಪಾಟೀಲ್ ಮಾತನಾಡಿದರು. ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಅಧ್ಯಕ್ಷ, ನಿವೃತ್ಪ್ರಾಚಾರ್ಯ ಪ್ರೊಎಸ್.ಎಂ.ಸಾತ್ಮಾರ ಅವರು ವಂದಿಸಿದರು.ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್ನ ಜಿಲ್ಲಾಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನಟ್ರಸ್ಟಿ, ಗ್ರಂಥಪಾಲಕಡಾ. ಸುರೇಶಡಿ. ಹೊರಕೇರಿಅವರು ಕಾಯ9ಕ್ರಮವನ್ನು ಅಚ್ಚುಕಟ್ಟಾಗಿಆಯೋಜನೆಮಾಡಿದ್ದರು. ಸ್ವಾಗತಿಸಿ, ನಿರೂಪಿಸಿದರು.ಶಿಕ್ಷಕ ಸಾಹಿತಿ ಸುಭಾಸ್ಚವ್ಹಾಣ ಸ್ವರಚಿತ ಕವನವಾಚಿಸಿದರು.ಅಕ್ಕನಬಳಗದ ಅಧ್ಯಕ್ಷೆ ನಿರ್ಮಲಾ ಅಂಗಡಿ, ,ಅನುಸೂಯಾ ಅರಕೇರಿ, ಸಿ.ಜಿ.ಧಾರವಾಡ ಶೆಟ್ಟರ, ಪ್ರಮೋದಬದ್ದಿ, ರವಿಬಡ್ನಿ, ನವೀನ, ಶಿವಾನಂದ, ನಾಗರತ್ನ, ರೇಣುಕಾ ದೇಸಾಯಿ, ನವೀನ, ಅಂದಪ್ಪ, ಮಲ್ಲೇಶಪ್ಪ, ಮುಂತಾದವರು ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 