2 ಲಕ್ಷ ಪಾಸ್ ವಿತರಣೆ: ಹೇಮಂತ್ ನಿಂಬಾಳ್ಕರ್

ಬೆಂಗಳೂರು,  ಏ.18, ಕೊರೊನಾ ನಿಯಂತ್ರಿಸಲು ಮೊದಲ ಹಂತದ ಲಾಕ್​ಡೌನ್ ಜಾರಿಯಾದಾಗಿಂದಲೂ  ಸಾರ್ವಜನಿಕರು ರಸ್ತೆಗಳಿಯುವುದನ್ನು  ನಿಯಂತ್ರಿಸಲು ನಗರ ಪೊಲೀಸರು ಹತ್ತು ಹಲವಾರು  ಕ್ರಮಗಳನ್ನ ಕೈಗೊಂಡಿದ್ದಾರೆ.ಅಲ್ಲದೇ, ತುರ್ತು  ಅಗತ್ಯವಿರುವವರಿಗಾಗಿ ಪೊಲೀಸ್ ಪಾಸ್​​ಗಳನ್ನು  ವಿತರಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಹೀಗಾಗಿ  ಇದುವರೆಗೂ ಒಟ್ಟು 2 ಲಕ್ಷ ಕೆಎಸ್​ಪಿ ಪಾಸ್​ಗಳನ್ನು  ವಿತರಣೆ ಮಾಡಲಾಗಿದೆ ಎಂದು  ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ಟ್ವೀಟ್ ಮಾಡಿದ್ದಾರೆ.ಇಲ್ಲಿಯವರೆಗೆ  2 ಲಕ್ಷ ಪಾಸ್ ವಿತರಿಸಲಾಗಿದ್ದು, ಅಗತ್ಯ ಇದ್ದವರಿಗೆ ಮಾತ್ರ  ವಿತರಿಸಲಾಗಿದೆ. 12  ಗಂಟೆ ವ್ಯಾಲಿಡಿಟಿ ಇರುವ ತುರ್ತು ಪಾಸ್​​ಗಳನ್ನು ನೀಡಲಾಗಿದೆ. ಅಲ್ಲದೇ, 55 ಲಕ್ಷದ 77  ಸಾವಿರ ಪಾಸ್ ಅಪ್ಲಿಕೇಷನ್‌ಗಳನ್ನು ತಿರಸ್ಕಾರ ಮಾಡಲಾಗಿದೆ ಎಂದು ಅವರು‌ ತಿಳಿಸಿದ್ದಾರೆ.ಅಲ್ಲದೇ, ಯಾವ ಯಾವ ವಲಯಕ್ಕೆ ಎಷ್ಟು ಪಾಸ್​ಗಳನ್ನ ವಿತರಿಸಲಾಗಿದೆ ಎಂಬುದರ ಕುರಿತು ಸಮಗ್ರ ಮಾಹಿತಿ ನೀಡಿದ್ದಾರೆ.