ಯೋಗಿ ನಾರೇಯಣ ಯತೀಂದ್ರರ 190 ನೇ ಆರಾಧನೆ

ಯೋಗಿ ನಾರೇಯಣ ಯತೀಂದ್ರರ 190 ನೇ ಆರಾಧನೆ 190th worship of Yogi Narayana Yatindra

ಹೊಸಪೇಟೆ 29 :  ಬಲಿಜ ಭವನದಲ್ಲಿ ಹೊಸಪೇಟೆ ಬಲಿಜ ಸಂಘ ವತಿಯಿಂದ ನಡೆದ ಯೋಗಿ ನಾರೇಯಣ ಯತೀಂದ್ರರ 190 ನೇ ಆರಾಧನೆ ಹಾಗೂ  ಯೋಗಿ ನಾರಾಯಣ ವೃತ್ತಕ್ಕೆ ಪೂಜೆ ಹಾಗು ಪ್ರತಿಭಾ ಪುರಸ್ಕಾರ ಮತ್ತು ವಿವಿಧ ಕಾರ್ಯಕ್ರಮಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್‌.ಎನ್‌. ಮೊಹಮ್ಮದ್ ಇಮಾಮ್ ನಿಯಾಜಿ ಅವರು ಭಾಗವಹಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ವಿದ್ಯಾರ್ಥಿಗಳಿಗೆ ಸನ್ಮಾಸಿಸುವ ಮೂಲಕ ಪ್ರೋತ್ಸಾಹಿಸಿದರು 

ಕೈವಾರ ತಾತಯ್ಯ ಎಂದೇ ಪ್ರಸಿದ್ಧಿಯಾಗಿರುವ ಯೋಗಿ ನಾರಾಯಣ ಯತೀಂದ್ರ ಅವರು ಪದ್ಯ ಕೀರ್ತನೆ ಹಾಗೂ ಸ್ತೋತ್ರಗಳ ಮೂಲಕ ಸಾಹಿತ್ಯ ರೂಪದಲ್ಲಿ ಜನತೆಗೆ ತಿಳಿಸಿಕೊಟ್ಟ ಮಹಾನ ಯೋಗಿ  ಪ್ರಪಂಚದಲ್ಲಿಯೇ ಮುಂದೊಂದು ದಿನ ನಡೆಯ ಬಹುದಾದ ಪಾಪಗಳ ಪ್ರಾಬಲ್ಯ, ಪ್ರಳಯ, ಸಂಪತ್ತಿನ ವಿನಾಶ, ಘೋರ ವೈಪರಿತ್ಯಗಳ ಭ್ರಷ್ಟಾಚಾರ, ದೌರ್ಜನ್ಯ, ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ, ಧಾರ್ಮಿಕವಾಗಿ ನಡೆಯುವ ಅನ್ಯಾಯದ ಘಟನೆಗಳನ್ನು  ಯೋಗಿ ನಾರಾಯಣ ಯತೀಂದ್ರ ಅವರು ತಮ್ಮ ಕಾಲಜ್ಞಾನದಲ್ಲಿ ತಿಳಿಸಿದ್ದಾರೆ ಹಾಗು ಅನೇಕ ಪವಾಡಗಳನ್ನು ಮಾಡಿದ್ದಾರೆ ಎಂದು ಸ್ಮರಿಸಿದರು 

ಜಾತಿ ಮತಗಳ ಕೂಲ ಗೋತ್ರಗಳ ವರ್ಣಭೇದವನ್ನು ಖಂಡಿಸುತ್ತಾ ದೀನ ದಲಿತರ ಶೋಷಿತರ ಉದ್ಧಾರಕ್ಕಾಗಿ ವಿಶ್ವಮಾನವ ಸಂದೇಶ ಸಾರಿದ ಯೋಗಿನಾರಾಯಣ ಯತೀಂದ್ರ ಅವರ ಜಯಂತಿ ಆಚರಿಸುತ್ತಿರುವುದು ನಿಜವಾಗಲೂ ಅರ್ಥಪೂರ್ಣವಾಗಿದೆ ಇಂತಹ ಮಹಾನ್ ನಾಯಕರ ಆದರ್ಶ ಗುಣಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು 

ಇದೇ ಸಂದರ್ಭಗಳಲ್ಲಿ ಹೊಸಪೇಟೆ ಬಲಿಜ ಸಂಘದ ಅಧ್ಯಕ್ಷರಾದ ಜಿ. ಪಾಂಡುರಂಗ ಪ್ರಧಾನ ಕಾರ್ಯದರ್ಶಿ ಜಿ. ರಾಜೇಂದ್ರ ಅವರು ಹಾಗೂ ಬಲಿಜ ಸಂಘದ ಕಾರ್ಯಕಾರಿ ಮಂಡಳಿ ಸದ್ಯಸರು ಪದಾಧಿಕಾರಿಗಳು ಸಮಾಜದ ಹಿರಿಯ ಮುಖಂಡರು ಸಾವಿರಾರು ಮಹಿಳೆಯರು ಯುವಕರು ಮಕ್ಕಳು ಭಾಗವಹಿಸಿದ್ದರು