ಜ.2 ರಂದು ಜಗದ್ಗುರು ಪಂಡಿತಾರಾಧ್ಯ ಪ್ರೌಢ ಶಾಲೆಯ 18ನೇ ವಾರ್ಷಿಕೋತ್ಸವ

ಜ.2 ರಂದು ಜಗದ್ಗುರು ಪಂಡಿತಾರಾಧ್ಯ ಪ್ರೌಢ ಶಾಲೆಯ 18ನೇ ವಾರ್ಷಿಕೋತ್ಸವ 18th anniversary of Jagadguru Panditaradhya High School on January 2nd

ಲೋಕದರ್ಶನ ವರದಿ 

ಜಮಖಂಡಿ 01: ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ ಜ.2 ರಂದು ಸಾಯಂಕಾಲ 5.30ಕ್ಕೆ ಶ್ರೀ ಸಿದ್ದರಾಮೆಶ್ವರ ಜನಕಲ್ಯಾಣ ಪ್ರತಿಷ್ಠಾನದ ಶ್ರೀ ಜಗದ್ಗುರು ಪಂಚಾಚಾರ್ಯ ಪೂರ್ವ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲೆ, ಶ್ರೀ ಜಗದ್ಗುರು ಪಂಡಿತಾರಾಧ್ಯ ಪ್ರೌಢ ಶಾಲೆಯ 18ನೇ ವಾರ್ಷಿಕೋತ್ಸವ, ಪಂಚಾಚಾರ್ಯ ಪರ್ವ ಸಾಂಸ್ಕೃತಿಕ ಕಲಾ ರಂಗೋತ್ಸವ ಜರುಗಲಿದೆ. 

ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಸಾನ್ನಿದ್ಯವಹಿಸುವರು, ಸಂಗಮೇಶ್ವರ ಮಠದ ಪ್ರಭುಜಿ ಬೆನ್ನಾಳೆ ಮಹಾರಾಜರು ನೇತೃತ್ವ ವಹಿಸುವರು, ಚನ್ನಸಂಗಮೇಶ್ವರ ಮಠದ ಸಿದ್ಧಲಿಂಗ ಸಾಧು ಮಹಾರಾಜರು ಸಮ್ಮುಖ ವಹಿಸುವರು, ತೇರದಾಳ ಶಾಸಕ ಸಿದ್ದು ಸವದಿ ಅಧ್ಯಕ್ಷತೆ ವಹಿಸುವರು, ಬಿಇಓ ಎ.ಕೆ.ಬಸಣ್ಣವರ ಕ್ಯಾಲೆಂಡರ ಬಿಡುಗಡೆಗೊಳಿಸುವರು. 

ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಅವರಿಗೆ ದಕ್ಷ ಸಿರಿ ಪ್ರಶಸ್ತಿ, ಹುಬ್ಬಳ್ಳಿ ಸಿಪಿಐ ಸಂಗಮೇಶ ಪಾಲಬಾವಿ ಅವರಿಗೆ ಆರಕ್ಷಕ ಸಿರಿ ಪ್ರಶಸ್ತಿ, ತಾಲೂಕಾ ಆರೋಗ್ಯಾಧಿಕಾರಿ ಡಾ.ಗೈಬುಸಾಬ ಗಲಗಲಿ ಅವರಿಗೆ ವೈದ್ಯ ಭೂಷಣ ಪ್ರಶಸ್ತಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ರಮೇಶ ಅವಟಿ ಅವರಿಗೆ ಜ್ಞಾನ ನಿಧಿ ಪ್ರಶಸ್ತಿ, ಪ್ರಗತಿಪರ ರೈತ ಸಂಗಪ್ಪ ಮರನೂರ ಅವರಿಗೆ ಭೂತಾಯಿಯ ಹೆಮ್ಮೆಯ ಮಗ ಪ್ರಶಸ್ತಿ, ಜಿಲ್ಲಾ ಸೌಹಾರ್ದ ಅಭಿವೃದ್ಧಿ ಅಧಿಕಾರಿ ವೆಂಕಟೇಶ ರಾಠೋಡ ಅವರಿಗೆ ಸಹಕಾರಿ ಸಾಧಕ ಪ್ರಶಸ್ತಿ, ಪತ್ರಕರ್ತ ಎಂ.ಎನ್‌.ನದಾಫ್ ಅವರಿಗೆ ಮಾಧ್ಯಮ ಮಿತ್ರ ಪ್ರಶಸ್ತಿ, ಸಮಾಜ ಸೇವಕ ದಯಾನಂದ ಧರಿಗೋಣ ಅವರಿಗೆ ಸಮಾಜಸೇವಾ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಗುವುದು. 

2024-25 ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 8ನೇ ರಾ​‍್ಯಂಕ್ ಪಡೆದ ಐಶ್ವರ್ಯ ಬೆಳ್ಳಂಕಿ, ಸ್ವಾತಿ ಪಾಟೀಲ ಅವರಿಗೆ ವಿದ್ಯಾರ್ಥಿ ಚೇತನ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಡಾ.ಪಿ.ಬಿ.ಬಾಗೇವಾಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.