ಸಿದ್ದು ಕೊಣ್ಣೂರ ನೇತೃತ್ವದಲ್ಲಿ ಹೊಸ ಆಯಾಮ: ಗಮನ ಸೆಳೆದ ವಚನಗಳ ವಿಶ್ಲೇಷಣೆ
188th Mahamane program
188ನೇ ಮನೆಯಲ್ಲಿ ಮಹಾಮನೆ ಕಾರ್ಯಕ್ರಮ
ಮಹಾಲಿಂಗಪುರ 06: ಸ್ಥಳೀಯ ನಿವಾಸಿ ಕಾಂಗ್ರೆಸ್ ನಾಯಕ ಸಿದ್ದು ಕೊಣ್ಣೂರ ನಿವಾಸದಲ್ಲಿ ಸೋಮವಾರ ರಾತ್ರಿ ಜರುಗಿದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮ ಗಮನ ಸೆಳೆಯಿತು ಮತ್ತು ಮನೆಯಲ್ಲಿ ಮಹಾಮನೆ ಕಾರ್ಯಕ್ರಮಕ್ಕೆ ಹೊಸ ಆಯಾಮವನ್ನೇ ನೀಡಿತು.
ಮಹಾಲಿಂಗಪುರ ಪಟ್ಟಣದಲ್ಲಿ ಕಳೆದ 15 ವರ್ಷಗಳ ಎಂಟು ತಿಂಗಳಿನಿಂದ ನಡೆಯುತ್ತಿರುವ 188ನೇ ಮನೆಯಲ್ಲಿ ಮಹಾಮನೆ ಕಾರ್ಯಕ್ರಮ ಹಿಂದೆಂದೂ ಕಾಣದ ವಿಜೃಂಭಣೆ ಮತ್ತು ಉಪನ್ಯಾಸ, ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಂದ ಜನಮನ ಸೂರೆಗೊಂಡಿತು.
ಬಸವ ಬಳಗದ ವತಿಯಿಂದ ಪ್ರತಿ ತಿಂಗಳ ಕೊನೆಯ ಸೋಮವಾರ ಜರುಗುವ ಮನೆಯಲ್ಲಿ ಮಹಾಮನೆ ಕಾರ್ಯಕ್ರಮ ಪಂಚಮಿ ಹಬ್ಬದ ಪ್ರಯುಕ್ತ ಆಗಸ್ಟ್ ಮೊದಲ ಸೋಮವಾರಕ್ಕೆ ಮುಂದೂಡಲ್ಪಟ್ಟು ಸಿದ್ದು ಕೊಣ್ಣೂರವರ ನೇತೃತ್ವದಲ್ಲಿ ಜರುಗಿತು. ಇಡೀ ತೇರದಾಳ ಮತಕ್ಷೇತ್ರದ ಜನಪ್ರತಿನಿಧಿಗಳು, ನಾಯಕರು ಮತ್ತು ತಹಶೀಲ್ದಾರ ಗೀರೀಶ ಸ್ವಾದಿ ಮತ್ತು ತಾಪಂ ಇಒ ಸಿದ್ಧಪ್ಪ ಪಟ್ಟಿಹಾಳ, ಸ್ಥಳೀಯ ಠಾಣೆಯ ಪಿಎ??? ಮಧು ಎಲ್. ಮುಂತಾದ ಅಧಿಕಾರಿಗಳ ದಂಡು ಹಾಗೂ ಗಣ್ಯ ಮಾನ್ಯರು ಭಾಗವಹಿಸಿದ ್ರ್ರಥಮ ಮನೆಯಲ್ಲಿ ಮಹಾಮನೆ ಕಾರ್ಯಕ್ರಮ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.
ಜೀ ಕನ್ನಡ ವಾಹಿನಿಯ ಸರಿಗಮಪ ಕಲಾವಿದೆ ಅನಘಾ ಪಾಟೀಲ್ ಮತ್ತು ತಂಡದವರಿಂದ ಸಂಗೀತ ಕಾರ್ಯಕ್ರಮ, ಬನಹಟ್ಟಿಯ ವಚನ ಮಂಟಪದ ಮಹಾಂತ ದೇವರು, ಶಿಕ್ಷಕಿ ಅಕ್ಕತಾಯಿ ಕಿಚಡಿ, ಸಾಹಿತಿ ಸಿದ್ದರಾಜು ಪೂಜಾರಿ, ಪತ್ರಕರ್ತ ಜಯರಾಮ ಶೆಟ್ಟಿ ಮತ್ತು ಸಿ ಆರ್ ಪಿ ದಾಕ್ಷಾಯಿಣಿ ಮಂಡಿ ಹಾಗೂ ಸಿದ್ದು ಕೊಣ್ಣೂರವರ ಧರ್ಮಪತ್ನಿ ಕವಿತಾ ಕೊಣ್ಣೂರವರು ಸೇರಿದಂತೆ ಅನೇಕರ ಮಾಡಿದ ಅಲ್ಲಮಪ್ರಭು, ಬಸವಣ್ಣ ಮತ್ತು 12ನೇ ಶತಮಾನದ ವಚನಗಳ ವಿಶ್ಲೇಷಣೆ ವಿಶೇಷವೆನಿಸಿತು. ಅವರಾದಿಯ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಅಣ್ಣ ಬಸವಣ್ಣನವರ ವಚನಕ್ಕೆ ಹೆಜ್ಜೆ ಹಾಕಿದರು.
ಭವ್ಯವೇದಿಕೆಯಲ್ಲಿ ಅದ್ದೂರಿಯಾಗಿ ಅಲಂಕರಿಸಲಾಗಿದ್ದ ಬಸವಣ್ಣನವರ ಬೃಹತ್ ಭಾವಚಿತ್ರಕ್ಕೆ ಸಿದ್ದು ಕೊಣ್ಣೂರ ಹಾಗೂ ಅವರ ಪತ್ನಿ ಕವಿತಾ, ಪುತ್ರ ಸಿದ್ದಾರ್ಥ, ಪುತ್ರಿ ಸಹನಾ ಪೂಜೆ ಸಲ್ಲಿಸಿದರು. ಬಸವ ಬಳಗದ ಅಧ್ಯಕ್ಷ ಸಿಎಂ ಕಟಗಿ, ಚಂದ್ರು ಗೊಂದಿ, ಮುಖಂಡರಾದ ಡಾ. ಎಂ. ಆರ್ . ಬೆಳಗಲಿ, ಶ್ರೀಶೈಲಪ್ಪ ಉಳ್ಳಾಗಡ್ಡಿ,ಸಂಗಪ್ಪ ಹಲ್ಲಿ, ಮಹಾದೇವ ಮಾರಾಪುರ, ಅಣ್ಣಾಜಿ ಫಡತಾರೆ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸೇರಿ ಗಮನ ಸೆಳೆಯಿತು.
ಗಾಯಕಿ ಅನಘಾ ಪಾಟೀಲ ಪ್ರಾರ್ಥಿಸಿ, ಶಿಕ್ಷಕ ಬಸವರಾಜ ಮೇಟಿ ನಿರೂಪಿಸಿದರು. ಅದ್ದೂರಿ ಪೆಂಡಾಲ್ ಹಾಕಿ ಮಹಾಪ್ರಸಾದ ವಿತರಿಸಿದ್ದೂ ಸಹ ವಿಶೇಷವೆನಿಸಿತು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 