179ನೇ ದಿನದ ಕಾರ್ಖಾನೆ ವಿರೋಧಿ ಹೋರಾಟ ಯಶಸ್ವಿ ಪಂಜಾಬ್ ಸಣ್ಣ ಕಾರ್ಖಾನೆಗಳಿಂದ ಉದ್ಯೋಗ ಸೃಷ್ಟಿಸಿದೆ
179th day of anti-factory protest successful Punjab creates jobs from small factories
ಕೊಪ್ಪಳ 28: ನಗರಸಭೆ ಮುಂದೆ ಬಲ್ಡೋಟ ತೊಲಗಿಸಿ ಕೊಪ್ಪಳ ಉಳಿಸಿ ಹೋರಾಟದ 179ನೇ ದಿನ ಪೂರ್ಣಗೊಳಿಸಿತು. ಧರಣಿಗೆ ಬೆಂಬಲಿಸಿ ಪಂಜಾಬ್ ರಾಜ್ಯದಿಂದ ಬಂದ ನಿವೃತ್ತ ಸೈನಿಕ ಅಮರಸಿಂಗ್ ರವರು ಮಾತನಾಡಿ, ಇಲ್ಲಿ ಸ್ಥಾಪಿಸಿದ ಕಾರ್ಖಾನೆಗಳು ನಗರಕ್ಕೆ, ಗ್ರಾಮಕ್ಕೆ ಹೊಂದಿಕೊಂಡ ಬೃಹತ್ ಕೈಗಾರಿಕೆಗಳಿಂದ ಮಕ್ಕಳ, ಮಹಿಳೆಯರ, ವೃದ್ದರ ಆರೋಗ್ಯಕ್ಕೆ ತೊಂದರೆ ಕೊಡುತ್ತಿವೆ. ಇಲ್ಲಿನ ಶುಷ್ಕ ವಾತಾವರಣ ಕೆಡಿಸಿ ತಮ್ಮ ಲಾಭ ಒಂದೇ ಅನ್ನುವುದಾದರೆ ಜನರೇಕೆ ಇದನ್ನು ಸಹಿಸಿಕೊಳ್ಳಬೇಕು. ನಮ್ಮ ಸಿಖ್ ಧರ್ಮದಲ್ಲಿ ಪ್ರಕೃತಿಗೆ ಮೊದಲ ಆದ್ಯತೆ ಇದೆ. ಪ್ರಕೃತಿ ಹಾಳು ಮಾಡಲು ಯಾರಿಗೂ ಅಧಿಕಾರವಿಲ್ಲ. ಪಂಜಾಬ ರಾಜ್ಯ ಸಣ್ಣ ಮತ್ತು ಗುಡಿ ಕೈಗಾರಿಕೆಗಳ ಮೇಲೆ ಆಧಾರವಾಗಿದೆ.
ನಮ್ಮಲ್ಲಿ ಕೃಷಿ, ಕೈಗಾರಿ ಸಮತೋಲನವಾಗಿದೆ. ನಮಲ್ಲಿ ಬಿಸಿಲು ಹೆಚ್ಚು. ಈ ನಾಡು ತಂಪಾದ ಹವಾಗುಣವೆಂದು ಓದಿದ್ದೇವೆ. ಆದರೆ ಈಗ ಇಂತಹ ಮಾಲಿನ್ಯದ ಕಾರಣಕ್ಕೆ ಧಗೆ ಇಲ್ಲಿಯೂ ಹೆಚ್ಚಾಗಿದೆ. ನೀರು, ಗಾಳಿ ಮಾಲಿನ್ಯ ಮಾಡದೆ ಕಾಪಾಡಿಕೊಂಡರಷ್ಟೇ ಮುಂದಿನ ಮಕ್ಕಳ ಭವಿಷ್ಯ ಉಳಿಯುತ್ತದೆ ಎಂದರು.ಸಾಮಾಜಿಕ ಹೋರಾಟಗಾರ ಕಳಕಪ್ಪ ಟಿ. ಬೆಟಗೇರಿ ಮಾತನಾಡಿ, ಶಾಸಕರು ಕೊಪ್ಪಳ ಭಾಗ್ಯನಗರದ ಒಂದೂವರೆ ಲಕ್ಷ ಜನರ ಆರೋಗ್ಯ ಅಪಾಯದಲ್ಲಿದೆ ಎಂಬ ಅರಿವು ಇದ್ದಾಗ ಸೆಇಪಡಿಸಬೇಕು. ಅದರ ಪರಿಣಾಮವನ್ನು ಜನರು ತಮ್ಮ ಪ್ರತಿಕ್ರಿಯೆ ರೂಪದಲ್ಲಿ ಹೋರಾಡಿ ತೋರಿಸುತ್ತಾರೆ ಎಂದರು.
ಧರಣಿಯಲ್ಲಿ ಮಾನವ ಬಂಧುತ್ವ ವೇದಿಕೆ ಮುಖಂಡರಾದ ಟಿ. ರತ್ನಾಕರ, ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ, ಪ್ರಕಾಶಕ ಡಿ.ಎಂ. ಬಡಿಗೇರ, ಮಾಲಾ ಬಡಿಗೇರ, ಭೀಮಸೇನ ಕಲಕೇರಿ, ಮೂಕಪ್ಪ ಮೇಸ್ತ್ರಿ ಬಸಾಪುರ, ಶರಣು ಶೆಟ್ಟರ್, ನಾಗಪ್ಪ ಅಬ್ಬಿಗೇರಿ, ಮಹಾದೇವಪ್ಪ ಮಾವಿನಮಡು, ಈಶ್ವರ್ಪ ಕೂಕನಪಳ್ಳಿ, ರಾಜಶೇಖರ ಏಳುಭಾವಿ, ವೈ. ಸತ್ಯನಾರಾಯಣ, ಯಮನೂರ್ಪ ಹಾಲಳ್ಳಿ, ನಾಗರಾಜ ಕುಷ್ಟಗಿ, ಬಿ.ಜಿ.ಕರಿಗಾರ, ಬಸವರಾಜಪ್ಪ ಶೆಟ್ಟರ್, ಶಿವಪ್ಪ ಹಲಗೇರಿ, ಈಶ್ವರ್ಪ, ದುರುಗೇಶ ಹಳ್ಳಿ ಇದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 