ನಿಷ್ಠೆ, ಪ್ರಾಮಾಣಿಕತೆಗಳಿಂದ ಕೂಡಿದ ಕಾಯಕ ಶ್ರೇಷ್ಠ.ಪುರಾಣಿಕ ಬಿ.ಬಾಬು
178th Mahamane Program
ಕಂಪ್ಲಿ29 ಇಲ್ಲಿನ ಸಾಂಗತ್ರಯ ಸಂಸ್ಕ್ರತ ಪಾಠಶಾಲೆಯಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ 178ನೇಮಹಾಮನೆ ಕಾರ್ಯಕ್ರಮ ನಡೆಯಿತು. ಕುರುಗೋಡು ತಾಲೂಕಿನ ಹೊಸ ಯಲ್ಲಾಪುರದ ಶ್ರೀಗುರುಲಿಂಗೇಶ್ವರಸ್ವಾಮಿಮಠದ ಪುರಾಣಿಕ ಬಿ.ಬಾಬು ‘ಶರಣರ ದೃಷ್ಟಿಯಲ್ಲಿ ಕಾಯಕ’ ವಿಶೇಷ ಉಪನ್ಯಾಸ ನೀಡಿ, ಶರಣರ ದೃಷ್ಠಿಯಂತೆ ಕಾಯಕದಲ್ಲಿ ಮೇಲು ಕೀಳು, ಶ್ರೇಷ್ಠ, ಕನಿಷ್ಟ ಎನ್ನುವ ಭಾವನೆಗಳಿಲ್ಲ. ತ್ರಿಕರಣ ಶುದ್ಧಿಯಿಂದ ಮಾಡುವ ಕಾಯಕ ಶ್ರೇಷ್ಠವಾಗಿದೆ. ಶರಣರು ಕಾಯಕದಲ್ಲಿ ಕೈಲಾಸ ಕಂಡಿದ್ದಾರೆ. ಕಾಯಕದಲ್ಲಿ ನಿಷ್ಠೆ, ಪ್ರಾಮಾಣಿಕತೆ ಕೂಡಿರಬೇಕು. ಶರಣರು, ದಾರ್ಶನಿಕರು ಕಾಯಕದಲ್ಲಿ ತೊಡಗಿಕೊಂಡು ಅಲೌಕಿಕ ಸಾಧನೆ ತೋರಿದರು ಎಂದರು. ನಂತರ ತತ್ವಪದ ಹಾಡಿದರು.
ಎಮ್ಮಿಗನೂರಿನ ಸಹಿಪ್ರಾ ಶಾಲೆ ಅತಿಥಿ ಶಿಕ್ಷಕ ಎಚ್.ಮಲ್ಲೇಶ್ ಮಾತನಾಡಿ, ಯುವಜನತೆ ಸಾಮಾಜಿಕ ಜಾಲತಾಣಗಳಲ್ಲಿ ತೊಡಗಿಕೊಳ್ಳುವ ಮೂಲಕ ತಮ್ಮ ಜವಾಬ್ದಾರಿಗಳಿಂದ ವಿಮುಖರಾಗುತ್ತಿದ್ದಾರೆ. ಸಾಮಾಜಿಕ ಜಾಲಾತಾಣಗಳನ್ನು ಬಳಸಿಕೊಂಡು ಏಕಾಏಕಿ ವೈರಲ್ ಆಗಲು ಬಯಸುವ ಗೀಳು ಯುವಕರಲ್ಲಿ ಹೆಚ್ಚುತ್ತಿರುವುದು ಕಳವಳಕಾರಿಯಾಗಿದೆ ಎಂದರು.ತಾಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಜಿ.ಪ್ರಕಾಶ್ ಅಧ್ಯಕ್ಷತೆವಹಿಸಿದ್ದರು. ಪಾಠಶಾಲೆ ನಿರ್ದೇಶಕ ಅಶೋಕ ಕುಕನೂರು, ಪರಿಷತ್ತಿನ ಕಾರ್ಯಾಧ್ಯಕ್ಷ ಬಂಗಿ ದೊಡ್ಡ ಮಂಜುನಾಥ, ಪ್ರಮುಖರಾದ ಎಸ್.ಡಿ.ಬಸವರಾಜ, ಎಚ್.ನಾಗರಾಜ, ಚಂದ್ರಯ್ಯ ಸೊಪ್ಪಿಮಠ, ಪಾಮಯ್ಯ ಶರಣರು, ಎಲಿಗಾರ ವೆಂಕಟರೆಡ್ಡಿ, ಎಸ್.ರಾಮು, ಬಿ.ಎಂ.ರುದ್ರಯ್ಯ, ಎಚ್.ಪಂಪಾಪತಿ, ಕೆ.ಯಂಕಾರೆಡ್ಡಿ, ಪಿ.ಪಾಂಡುರಂಗ, ಬಡಿಗೇರ ಜಿಲಾನ್‌ಸಾಬ್, ಯು.ಎಂ.ವಿದ್ಯಾಶಂಕರ್, ಚನ್ನಬಸಪ್ಪ, ಸೇರಿ ಇತರರಿದ್ದರು.
ಮೇ02ತಾಲೂಕು ಶರಣ ಸಾಹಿತ್ಯ ಪರಿಷತ್ತು ಶ್ರೀಗುರುಲಿಂಗೇಶ್ವರಸ್ವಾಮಿಮಠದ ಪುರಾಣಿಕ ಬಿ.ಬಾಬು ಮಾತನಾಡಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 