ಅಮ್ಮೆಂಬಳ ಸುಬ್ಬರಾವ್ ಪೈ ರವರ 173 ನೇ ಜನ್ಮ ದಿನಾಚರಣೆ
173rd Birth Anniversary of Ammembal Subbarao Pai
ಧಾರವಾಡ 19: ಇಂದು ರುಡ್‌ಸೆಟ್ ಸಂಸ್ಥೆ ಗಾಂಧಿನಗರ, ಧಾರವಾಡದಲ್ಲಿ ಕೆನರಾ ಬ್ಯಾಂಕಿನ ಸಂಸ್ಥಾಪಕರಾದ ಅಮ್ಮೆಂಬಳ ಸುಬ್ಬರಾವ್ ಪೈ ರವರ 173 ನೇ ಜನ್ಮದಿನವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕರಾದ ಪೃಥ್ವಿರಾಜ ಗೌರಮ್ಮನವರ ಅವರು ಅಮ್ಮೆಂಬಳ ಸುಬ್ಬರಾವ್ ಪೈ ರವರ ಭಾವಚಿತ್ರಕ್ಕೆ ಪುಷ್ಪವನ್ನು ಅರ್ಿಸಿ ಶಿಬಿರಾರ್ಥಿಗಳನ್ನು ಉದ್ಧೇಶಿಸಿ ಮಾತನಾಡಿ, ಅಮ್ಮೆಂಬಳ ಸುಬ್ಬರಾವ್ ಪೈ ಅವರು ಕೆನರಾ ಬ್ಯಾಂಕ ಸ್ಥಾಪನೆ ಮಾಡಿದ ಉದ್ಧೇಶ, ರಾಷ್ಟ್ರಕ್ಕೆ ಕೆನರಾ ಬ್ಯಾಂಕ ನೀಡಿರುವ ಕೊಡುಗೆಯನ್ನು ಶಿಬಿರಾರ್ಥಿಗಳಿಗೆ ವಿವರಣೆ ನೀಡಿ, ಗ್ರಾಹಕರ ನಂಬಿಕೆಯ ಮೇಲೆ ಕೆನರಾ ಬ್ಯಾಂಕ ಸ್ಥಾಪಿತವಾಗಿದ್ದು ಜೊತೆಗೆ ಗ್ರಾಹಕರ ಜೊತೆ ಒಳ್ಳೇಯ ಸಂಬಂಧಗಳಿಂದ ಬಲಿಷ್ಠವಾಗಿದೆ ಎಂದು ಹೇಳಿದರು.
ರುಡ್‌ಸೆಟ್ ಸಂಸ್ಥೆ ಸ್ಥಾಪನೆಯಲ್ಲೂ ಕೆನರಾ ಬ್ಯಾಂಕ್ ಧರ್ಮಸ್ಥಳ ಶಿಕ್ಷಣ ಸಂಸ್ಥೆ ಜೊತೆಗೂಡಿ ದೇಶದಲ್ಲಿ 27 ಶಾಖೆಗಳ ಮೂಲಕ ನಿರುದ್ಯೋಗಿ ಯುವಕ ಯುವತಿಯರಿಗೆ ವಿವಿಧ ಸ್ವ ಉದ್ಯೋಗ ತರಬೇತಿಗಳನ್ನು ನೀಡಿ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡುವಲ್ಲಿ ತನ್ನದೇ ಪಾತ್ರ ನಿರ್ವಹಿಸುತ್ತದೆ ಎಂದು ಹೇಳಿ ರುಡ್‌ಸೆಟ್ ಸಂಸ್ಥೆಯ ಮತ್ತು ಕೆನರಾ ಬ್ಯಾಂಕಿನ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಮಹಿಳೆಯರಿಗಾಗಿ ಏರಿ್ಡಸಿದ ಟೇಲರಿಂಗ ತರಬೇತಿಯ ಶಿಬಿರಾರ್ಥಿಗಳಿಗೆ ಕರೆ ನೀಡಿದರು. ಈ ಸಂದರ್ಭದಲ್ಲಿ ಹಿರಿಯ ಉಪನ್ಯಾಸಕರಾದ ಜಗದೀಶ ಸಿ ಪೂಜಾರ, ಚನ್ನಪ್ಪ ದೇವಗಿರಿ, ಸಿಬ್ಬಂದಿಗಳಾದ ಮಧ್ವರಾಜ್ ಭಟ್, ಮಹೇಶ ಗೌಡರ, ಚಂದ್ರು ಕುರಕುಂದಿ, ಶಿವಪ್ಪ ಮೊಕಾಶಿ, ಶಿವಪ್ಪ ತೊಂಡಿಹಾಳ ಮತ್ತು ಮಹಿಳಾ ಟೇಲರಿಂಗ ಶಿಬಿರಾರ್ಥಿಗಳು ಹಾಜರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 