171ನೇ ನಾರಾಯಣ ಜಯಂತಿ ಆಚರಣೆ
171st Narayana Jayanti Celebration
ಸಿರುಗುಪ್ಪ 07 : 171ನೇ ನಾರಾಯಣ ಗುರುಗಳ ಜಯಂತಿ ಶೋಷಿತರಿಗೆ ಕಾಣಿಸಿದ ನಾರಾಯಣ ಗುರು ದೇವ ಬಿ ಎಂ ಸತೀಶ್ ಸಿರುಗುಪ್ಪ - ಇಂದಿನ ಜಾಗತಿಕ ವ್ಯವಸ್ಥೆಯನ್ನು ಅವಲೋಕಿಸಿದಾಗ ಮನುಷ್ಯನಲ್ಲಿ ಮನುಷ್ಯತ್ವವೇ ಮಾಯವಾಗಿರುವಂತೆ ಕಾಣುತ್ತಿದೆ ಎಂದು ಸಿರುಗುಪ್ಪ ವಿಧಾನಸಭಾ ಕ್ಷೇತ್ರದ ಶಾಸಕರ ಸಹೋದರ ಮಹರ್ಷಿ ವಾಲ್ಮೀಕಿ ವಿದ್ಯಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷರು ಬಿ ಎಂ ಸತೀಶ್ ಅವರು ಹೇಳಿದರು.
ಕರ್ನಾಟಕ ಸರ್ಕಾರ ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್ ಬಳ್ಳಾರಿ ತಾಲೂಕ ಆಡಳಿತ ತಾಲೂಕ ಪಂಚಾಯತ್ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಹಭಾಗಿತ್ವದಲ್ಲಿ ಸಿರುಗುಪ್ಪ ನಗರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಯ ಸಭಾಭವನದಲ್ಲಿ ನಡೆದ ನಾರಾಯಣ ಗುರುಗಳ 171ನೇ ಜಯಂತಿ ಕಾರ್ಯಕ್ರಮದಲ್ಲಿ ನಾರಾಯಣ ಗುರುಗಳ ಭಾವಚಿತ್ರಕ್ಕೆ ಮಾಲಾರೆ್ಣ ದೀಪ ಬೆಳಗಿಸಿ ಪುಷ್ಪ ಅರ್ಿಸಿ ಗೌರವ ನಮನ ಸಲ್ಲಿಸಿ ಅವರು ಮಾತನಾಡುತ್ತಾ ಒಂದೇ ಜಾತಿ ಒಂದೇ ಮತ ಒಂದೇ ದೇವರು ಎಂದು ಇಡೀ ಮನುಕುಲಕ್ಕೆ ಸಾರಿದವರು ಸಂತ ಶ್ರೇಷ್ಠ ನಾರಾಯಣ ಗುರುಗಳು ಇಂದಿನ ಸಮಾಜದಲ್ಲಿ ಧರ್ಮದ ಹೆಸರಿನಲ್ಲಿ ಜಾತಿಯ ವಿಷ ಭಾವನೆಗಳನ್ನು ಬಿತ್ತಿ ನಮ್ಮ ಧರ್ಮ ನಮ್ಮ ಸಿದ್ಧಾಂತ ಎನ್ನುತ್ತಾ ಮತ ಬ್ರಾಂತಿಯಿಂದ ಪರಸ್ಪರ ಹೊಡೆದಾಡಿಕೊಳ್ಳುತ್ತಿದ್ದಾರೆ ಎಂದು ಅವರು ಮಾತನಾಡುತ್ತಿದ್ದರು.
ಉಪ ತಹಶೀಲ್ದಾರ್ ಸಿದ್ದಾರ್ಥ ಕಾರಂಜಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಗುರುಗಳು ಸಮಾಜದ ಉದ್ಧಾರದ ಕಾರ್ಯವನ್ನು ಆರಂಭಿಸಿದ್ದು ಅರವಿಪುರಂ ನಲ್ಲಿ ಶಿವನ ಮೂರ್ತಿ ಪ್ರತಿಷ್ಠಾಪನೆಯ ಮೂಲಕ ಮನುಷ್ಯರಾಗಿ ಹುಟ್ಟಿದರೂ ಮನುಷ್ಯರಾಗಿ ಬಾಳುವ ಅವಕಾಶದಿಂದ ವಂಚಿತರಾದ ಶೋಷಿತ ಸಮುದಾಯಗಳ ಏಳಿಗೆಗಾಗಿ ಗುರುಗಳು ಶಿವನ ಮೂರ್ತಿ ಪ್ರತಿಷ್ಠಾಪನೆ ಯೊಂದಿಗೆ ದಿಟ್ಟ ಹೆಜ್ಜೆ ಇಟ್ಟರು ಎಂದು ಕರೆ ಕೊಟ್ಟರು ಡಾ ಬಿ ಆರ್ ಅಂಬೇಡ್ಕರ್ ಸಂಘದ ಅಧ್ಯಕ್ಷ ಕೊಡ್ಲೆ ಮಲ್ಲಿಕಾರ್ಜುನ ಅವರು ಮಾತನಾಡಿ ನಾವು ಭಾರತೀಯರು ಕ್ಷೇತ್ರರಾಧನೆಯಲ್ಲಿ ಅಷ್ಟು ನಂಬಿಕೆ ಇಟ್ಟುಕೊಂಡಿದ್ದಾರೆ ಇದನ್ನು ಅರಿತ ನಾರಾಯಣ ಗುರುಗಳು ಕ್ಷೇತ್ರಾರಾಧನೆಯ ಮೂಲಕವೇ ಜನರಲ್ಲಿ ವಿಶ್ವಾಸ ಮೂಡಿಸಿದರು ಎಂದು ಮಾತನಾಡುತ್ತಿದ್ದರು ಈಡಿಗರ ಸಮಾಜದ ನಾರಾಯಣ ಗುರುಗಳ ಸಂಘದ ತಾಲೂಕ ಅಧ್ಯಕ್ಷ ಎಚ್ ಇ ರಾಮಾಂಜನೇಯ ಮಾತನಾಡಿದರು ಉಪಾಧ್ಯಕ್ಷರು ಹೆಚ್ ಹುಲಿಯಪ್ಪ ರಾಷ್ಟ್ರೀಯ ಸಾಕ್ಷರತಾ ಸಮಾಜ ಸುಧಾರಕ ಅಬ್ದುಲ್ ನಬಿ ಹೆಚ್ ಇ ಚಂದ್ರಶೇಖರ್ ಹೆಚ್ ಮಂಜುನಾಥ್ ಇ ಮಹೇಶ್ ಲಿಂಗನಗೌಡ ತಾಲೂಕ ಪಂಚಾಯತ್ ವ್ಯವಸ್ಥಾಪಕಿ ಸುಜಾತ ಕೋರಿ ಸಮಾಜದವರು ಗಣ್ಯರು ಭಾಗವಹಿಸಿದ್ದರು ಸನ್ಮಾನ್ಯರಿಗೆ ಗೌರವಿಸಲಾಯಿತು ಸಿಹಿ ವಿತರಿಸಲಾಯಿತು.
ಅದ್ದೂರಿಯಿಂದ ಜರುಗಿದ ಕೋಣ ಬಿಡುವ ಸಂಪ್ರದಾಯ ಕಾರ್ಯಕ್ರಮ : ಸಂಕೇಶ್ವರ ಮಹಾಲಕ್ಷ್ಮೀ ಜಾತ್ರೆಯ ಚೊಚ್ವಲು ಕಾರ್ಯಕ್ಕೆ ಚಾಲನೆ
ನಂದು ಮುಡಶಿ ಬೆವರು ಸುರಿಸಿ ಸ್ವಂತ ಜಮೀನಿನಲ್ಲಿ ಬೆಳೆದ ಅಕ್ಕಿ, ಜೋಳ ತಂದು ಕೊಟ್ಟಿಲ್ಲ. ಎಲ್ಲಿಂದ ಬಂದಿವೆ, ಆತನ ಸಾತಭಾರ ನನಗೆ ಗೊತ್ತಿದೆ : ಬಸನಗೌಡಾ
ಮಾಹಾಲಕ್ಷ್ಮೀ ಜಾತ್ರೆ ಲೆಕ್ಕ ಸಭೆಯಲ್ಲಿ ರಾಜಕೀಯ ಹಗ್ಗ ಜಗ್ಗಾಟದಿಂದ ಗಲಾಟೆ, ಆನೆ, ಪ್ರಮಾಣದಿಂದ ಜನರ ಛೀಮಾರಿ
ಸ್ಕೈರೂಟ್ ಏರೋಸ್ಪೇಸ್ನ ವಿಕ್ರಮ್-1 ಉಡಾವಣೆ ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರಕ್ಕೆ ಮಹತ್ವದ ಮೈಲುಗಲ್ಲು: ಪ್ರಧಾನಿ ಮೋದಿ
ಜೊಡಿ ಹತ್ಯೆಗೆ ತಿರುವು: ಆಸ್ತಿಗಾಗಿ ಇಬ್ಬರು ಮೈದುನರ ಹತ್ಯೆ ಮಾಡಿಸಿದ ಅತ್ತಿಗೆ : ಪೊಲೀಸ ತನಿಖೆಯಲ್ಲಿ ಬಹಿರಂಗ
ಬೆಳಗಾವಿಯ ಹೃದಯಭಾಗದಲ್ಲಿ ಚಿನ್ನಾಭರಣ ಅಂಗಡಿ ಲೂಟಿ : ಸ್ಥಳಕ್ಕೆ ಪೊಲೀಸರ ದೌಡು 