ಸಮುದ್ರದಲ್ಲಿ ಅಲೆಗೆ ಸಿಲುಕಿ 17 ವರ್ಷದ ಬಾಲಕ ಸಾವು
17-year-old boy dies after being swept away by waves in the sea
ಕಾರವಾರ 17: ಮಾಜಾಳಿ ರಾಮನಾಥ ಕಡಲತೀರದಲ್ಲಿ ಸಮುದ್ರದ ಅಲೆಗೆ ಸಿಲುಕಿ 17 ವರ್ಷದ ಬಾಲಕ ಯಶ್ ಶಾಮ್ ಮಹಾಲೆ ಮಂಗಳವಾರ ಮೃತಪಟ್ಟಿದ್ದಾನೆ. ಶಿವರಾತ್ರಿ ಅಮಾವಾಸ್ಯೆ ಪ್ರಯುಕ್ತ ಮಜಾಳಿ, ಅಂಗಡಿ,ಅಸ್ನೋಟಿ, ಬಾವುಳ ಸೇರಿದಂತೆ ಏಳು ದೇವಸ್ಥಾನದ ದೇವರು ಪಲ್ಲಕ್ಕಿ ಯಲ್ಲಿ ತಂದು ಸಮುದ್ರ ಸ್ನಾನದ ಸಂಪ್ರದಾಯ ಜಾರಿಯಲ್ಲಿದೆ.
ಈ ವೇಳೆ ಜನರು ಸಹ ಸಮುದ್ರ ಸ್ನಾನಕ್ಕೆ ಇಳಿಯುತ್ತಾರೆ. ಸಮುದ್ರ ತುಂಬಾ ಪ್ರಕ್ಷುಬ್ಧ ಇರುವ ಕಾರಣ ಬಾಲಕ ಯಶ್ ಅಲೆಗೆ ಸಿಲುಕಿ ಅಸ್ವಸ್ಥಗೊಂಡಿದ್ದಾನೆ. ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಆತ ಮೃತಪಟ್ಟ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮತ್ತೊಬ್ಬ ಯುವಕ ಮೂರ್ಚೆ ಕಾಯಿಲೆ ಪ್ರಯುಕ್ತ ಕಡಲದಂಡೆಯಲ್ಲಿ ಬಿದ್ದನಾದರೂ, ಚೇತರಿಸಿಕೊಂಡ ಎಂದು ಸಾರ್ವಜನಿಕರು ಹೇಳಿದ್ದಾರೆ. ಬಿಸಿಲ ಝಳ ಹಾಗೂ ಪ್ರಕ್ಷುಬ್ಧ ಸಮುದ್ರದ ಕಾರಣ ಬಾಲಕ ಮೃತಪಟ್ಟ ದುರ್ಘಟನೆ ನಡೆದು ಹೋಗಿದೆ. ಚಿತ್ತಾಕುಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 