ಗೋವಾದ ಬಿಚ್ಚೋಲಿಯಂನಲ್ಲಿ ನೆಡೆದ ಕನ್ನಡಿಗರ 16ನೇ ಸಾಂಸ್ಕೃತಿಕ ಸಮ್ಮೇಳನ
16th Kannadigas Cultural Conference held in Bicholiam, Goa
ಕೊಪ್ಪಳ 16: ಪಕ್ಕದ ಗೋವಾ ರಾಜ್ಯದ ಬಿಚೋಲಿಯಂ ನಗರದ ಹಿರಾ ಬಾಯಿ ಮೆಮೋರಿಯಲ್ ಹಾಲ್ ನಲ್ಲಿ 16ನೇ ಬಾರಿಗೆ ಗೋವಾ ಕನ್ನಡಿಗರ ಸಾಂಸ್ಕೃತಿಕ ಸಮ್ಮೇಳನ ಯಶಸ್ವಿಯಾಗಿ ಜೋರುಗಿತು,ಕನ್ನಡ ಪ್ರಾಚೀನ ಭಾಷೆಗಳಲ್ಲಿ ಒಂದು ಅಲ್ಲದೆ ಈ ಕನ್ನಡವು ಭಾರತದ 4 ಪ್ರಮುಖ ಶಾಸ್ತ್ರೀಯ ಭಾಷೆಗಳಲ್ಲಿ ಒಂದಾಗಿದ್ದು, ದೀರ್ಘ ಇತಿಹಾಸ ಮತ್ತು ಸ್ವತಂತ್ರ ಸಾಹಿತ್ಯ ಪರಂಪರೆಯವನ್ನು ಹೊಂದಿದೆ. ಕನ್ನಡವು ಶ್ರೀಮಂತ ಹಾಗೂ ಇತಿಹಾಸ ಹೊಂದಿರುವ ಭಾಷೆಯಾಗಿದ್ದು ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ಏಕೈಕ ಭಾಷೆಯಾಗಿದೆ. ಕನ್ನಡ ಸಾಹಿತ್ಯದ ಅನೇಕ ಕೃತಿಗಳು ಜಗತ್ತಿನ ಬೇರೆ ಎಲ್ಲಾ ಭಾಷೆಗಳಿಗೆ ಭಾಷಾಂತರ ಕೊಂಡು ಕನ್ನಡದ ಹಿರಿಮೆಯನ್ನು ಹೆಚ್ಚಿಸಿವೆ ಎಂದು ಸಮ್ಮೇಳನದ ಸರ್ವಾಧ್ಯಕ್ಷಕನ್ನಡಪರ ಚಿಂತಕ ಕನ್ನಡದ ನುಡಿ ಸೇವಕ ಸಮಾಜಸೇವಕ ರಾಷ್ಟ್ರೀಯ ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾದ ಡಾ. ಸಂಗನ ಬಸಪ್ಪ ಬಿರಾದಾರ್ ಹೇಳಿದರು.
ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರ ಮೆರವಣಿಗೆ ವಿಶಿಷ್ಟ ಪೂರ್ಣವಾಗಿದ್ದು ಸುಮಾರು 751 ಮಹಿಳೆಯರು ಪೂರ್ಣ ಕುಂಬದೂಂದಿಗೆ ಸಾಂಸ್ಕೃತಿಕ ಕಲಾತಂಡಗಳ ವೈಭವಯುತ ಅದ್ದೂರಿ ಮೆರವಣಿಗೆಯಲ್ಲಿ ನನ್ನನ್ನು ಸಮ್ಮೇಳನ ಅಧ್ಯಕ್ಷನಾಗಿ ಸ್ಥಳೀಯರಿಂದ ಅಪಾರ ಗೌರವ ಸನ್ಮಾನ ಪ್ರೀತಿ ಗೌರವ ಆದರಗಳೊಂದಿಗೆ ಆತಿಥಿ ಸತ್ಕಾರ ನೀಡಿ ಕಾರ್ಯಕ್ರಮವನ್ನು ಅದ್ಭುತ ಪೂರ್ವ ಯಶಸ್ಸು ಗೂಳಿಸಲು ಗೋವಾದ ಕನ್ನಡಿಗರು ಕಾರಣ ಎಂದು ಡಾ. ಸಂಗನ ಬಸಪ್ಪ ಬಿರಾದಾರ್ ಭಾವುಕರಾಗಿ ಹೇಳಿದರು. ಈ ಗೋವಾದ ಕರ್ಮಭೂಮಿಯಲ್ಲಿ ನಮ್ಮ ಕನ್ನಡ ಪದ ಸಹೋದರ ಸಹಕಾರ ಇಲ್ಲಿನ ಜನತೆಯೊಂದಿಗೆ ಅವರ ರೀತಿ ನೀತಿ ಸಂಸ್ಕಾರದೊಂದಿಗೆ ಬೆರೆತು ತಾವು ಬೆಳೆದು ತಮ್ಮ ಉದ್ಯೋಗ ಅಭಿವೃದ್ಧಿ ಮಾಡಿಕೊಂಡು ಗೋವಾದಲ್ಲಿ ಕನ್ನಡದ ಕನ್ನಡಿಗರ ಅಭಿವೃದ್ಧಿಗಾಗಿ ಕನ್ನಡ ಜನತೆಗೆ ದೊಡ್ಡ ಕೊಡುಗೆಯಾಗಿ ಸಮಾಜವನ್ನು ಮುನ್ನಡೆಸುವ ಕಾರ್ಯ ಈ ರೀತಿ ನಿರಂತರವಾಗಿ ಆಗಬೇಕು ಎಂದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 