ಯಾರು ಅಂತರಾತ್ಮವನ್ನು ಕಾಣುತ್ತಾರೋ ಅವರನ್ನು ಯೋಗಿಗಳು ಎಂದು ಕರೆಯುತ್ತಾರೆ: ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು
15th Commemoration of the Puttaraja Gawais
ಧಾರವಾಡ 19 : ‘ಇಂದು ಹೊರಮುಖವಾದ ಇಂದ್ರಿಯಗಳನ್ನು ಯಾರು ಒಳಮುಖ ಮಾಡಿಕೊಂಡು ಅಂತರಾತ್ಮವನ್ನು ಕಾಣುತ್ತಾರೋ ಅವರನ್ನು ಯೋಗಿಗಳು ಎಂದು ಕರೆಯುತ್ತಾರೆ. ಅಂಥ ದಿವ್ಯಾತ್ಮ ಯೋಗಿಗಳ ಸಾಲಿಗೆ ಡಾ.ಪುಟ್ಟರಾಜ ಕವಿಗವಾಯಿಗಳು ಸೇರುತ್ತಾರೆ’ ಎಂದು ಧಾರವಾಡ ಮುರುಘಾಮಠದ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ಪಾ.ಪು. ಸಭಾಭವನದಲ್ಲಿ ಪುಟ್ಟರಾಜ ಗವಾಯಿ ಪ್ರತಿಷ್ಠಾನವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಸಹಯೋಗದಲ್ಲಿ ಏರಿ್ಡಸಿದ್ದ ಪುಟ್ಟರಾಜ ಗವಾಯಿಗಳ 15ನೇ ಪುಣ್ಯಸ್ಮರಣೆ ಹಾಗೂ ಸಂಗೀತೋತ್ಸವ ಕಾರ್ಯಕ್ರಮದ ಸಾನ್ನಿಧ್ಯವಹಿಸಿದ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮಾತನಾಡುತ್ತ ‘ಡಾ. ಪುಟ್ಟರಾಜ ಗವಾಯಿಗಳು ಪ್ರಾತಃಸ್ಮರಣೀಯರು. ಇಂಥ ಮಹಾತ್ಮರನ್ನು ಸ್ಮರಿಸುವುದರಿಂದ ಘನಮುಕ್ತಿ ದೊರಕುತ್ತದೆ. ಹುಟ್ಟು-ಸಾವು ಎಂಬ ಬಂಧನಗಳಿಂದ ಆತ್ಮ ನಿವೃತ್ತಿಯನ್ನು ಹೊಂದುತ್ತದೆ. ಇಂಥ ಮಹಾತ್ಮರಾದ ಪುಟ್ಟರಾಜ ಕವಿಗವಾಯಿಗಳನ್ನು ಪುಟ್ಟರಾಜ ಗವಾಯಿ ಪ್ರತಿಷ್ಠಾನವು ಸ್ಮರಿಸುತ್ತಿರುವುದು ಅತ್ಯಂತ ಸ್ತುತ್ಯಾರ್ಹವಾದದ್ದು’ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಖ್ಯಾತ ಎಲುವು ಕೀಲು ತಜ್ಞ ಡಾ. ದೀಲೀಪ ದೇಶಪಾಂಡೆ ಮಾತನಾಡುತ್ತ, ‘ನಾನೊಬ್ಬ ಅಪ್ಪಟ ಸಂಗೀತಪ್ರೇಮಿ. ಆದರೆ ನನಗೆ ಪುಟ್ಟರಾಜ ಗವಾಯಿಗಳ ಮುಖತಃ ದರ್ಶನ ಸಿಗಲಿಲ್ಲ. ಆದರೆ ಅವರಿಂದ ರೂಪುಗೊಂಡ ಶಿಷ್ಯರನೇಕರನ್ನು ಕಂಡಾಗ ಗುರುಗಳು ನನ್ನ ಕಣ್ಮುಂದೆ ಬಂದು ನಿಲ್ಲುತ್ತಾರೆ. ಪಂ. ವೆಂಕಟೇಶಕುಮಾರ ಅವರು ಎಲ್ಲರನ್ನೂ ಒಂದೆಡೆ ಕೂಡಿಸಿ ಗುರುಗಳನ್ನು ಸ್ಮರಿಸುವದು ನಿಜವಾಗಲೂ ಶ್ಲಾಘನೀಯ ಕಾರ್ಯವಾಗಿದೆ’ ಎಂದರು.
ಪಿ.ಎಂ.ಪಾಟೀಲ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಹಿರೇಮಲ್ಲೂರ ಈಶ್ವರನ್ ಪ.ಪೂ.ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಶಶಿಧರ ತೋಡಕರ ಅವರನ್ನು ಸನ್ಮಾನಿಸಲಾಯಿತು.
ಆರಂಭದಲ್ಲಿ ಪ್ರತಿಷ್ಠಾನದ ಉಪಾಧ್ಯಕ್ಷ ಶಂಕರ ಕುಂಬಿ ಅವರು ಮಾತನಾಡುತ್ತ, ‘ಪ್ರತಿುಷ್ಥಾನವು ಹಿರಿಯ ಕಲಾವಿದರನ್ನು ಗೌರವಿಸುವದು, ಕಿರಿಯ ಕಲಾವಿದರಿಗೆ ವೇದಿಕೆಯನ್ನೊದಗಿಸಿ ಕೊಡುವಂಥ ಕಾರ್ಯವನ್ನು ಮಾಡುತ್ತಿದೆ. ಇದಕ್ಕೆ ಬೆನ್ನೆಲುಬಾಗಿ ಪಂ. ವೆಂಕಟೇಶಕುಮಾರ, ಪಂ. ಡಿ. ಕುಮಾರದಾಸ, ಶಫೀಕ ಖಾನ್ ಹೀಗೆ ಅನೇಕ ಹಿರಿ-ಕಿರಿಯ ಕಲಾವಿದರು ಸೇವೆ ಸಲ್ಲಿಸುತ್ತಿದ್ದಾರೆ ಎಂದು ಪ್ರಾಸ್ತಾವಿಕ ಮಾತುಗಳನ್ನಾಡಿದರು.
ನಂತರ ಜರುಗಿದ ಸಂಗೀತೋತ್ಸವದಲ್ಲಿ ಗದುಗಿನ ಡಾ. ನಾರಾಯಣ ಹಿರೇಕೊಳಚಿ ಅವರು ವಯೋಲಿನ್‌ದಲ್ಲಿ ಅಮೃತವರ್ಷಿಣಿ ರಾಗವನ್ನು ಪ್ರಸ್ತುತಪಡಿಸಿದರು. ಪುಣೆಯ ಯುವ ಗಾಯಕ ವಿರಾಜ ಜೋಶಿ ಗಾಯನದಲ್ಲಿ ಯಮನ್ ರಾಗವನ್ನು ಪ್ರಸ್ತುತಪಡಿಸಿದರು. ತಬಲಾದಲ್ಲಿ ಶ್ರೀಧರ ಮಾಂಡ್ರೆ, ಪುಣೆಯ ಪಾಂಡುರಂಗ ಪವಾರ ಹಾಗೂ ಸತೀಶ ಭಟ್ಟ ಹೆಗ್ಗಾರ ಅವರು ಹಾರ್ಮೋನಿಯಂ ಸಾಥ್ ನೀಡಿದರು.
ಪ್ರವೀಣ ಮತಗಿ ನಿರೂಪಿಸಿದರು, ಐಶ್ವರ್ಯ ದೇಸಾಯಿ ಪ್ರಾರ್ಥಿಸಿದರು. ಡಾ. ಅರ್ಜುನ ವಠಾರ ವಂದಿಸಿದರು.
ಕಾರ್ಯಕ್ರಮದಲ್ಲಿ ಪಂ. ಸೋಮನಾಥ ಮರಡೂರ, ಪಂ. ಬಿ.ಎಸ್. ಮಠ, ಅಕ್ಕಮಹಾದೇವಿ ಮಠ, ಡಾ. ರಾಚಯ್ಯ ಹಿರೇಮಠ, ಪಂ. ಕೈವಲ್ಯಕುಮಾರ ಗುರವ, ಪಂ. ಶ್ರೀಪಾದ ಹೆಗಡೆ ಕಂಪ್ಲಿ, ಡಾ. ಶಾಂತಾರಾಮ ಹೆಗಡೆ, ಡಾ. ಮಲ್ಲಿಕಾರ್ಜುನ ತರ್ಲಘಟ್ಟಿ, ಉಸ್ತಾದ್ ಶಫೀಕ ಖಾನ್, ನಿಜಗುಣಿ ರಾಜಗುರು ಅನೇಕರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 