ಬಲ್ಡೋಟ ವಿರೋಧಿ ಹೋರಾಟಕ್ಕೆ 150 ದಿನ ಪೂರ್ಣಅಶೋಕ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಬಸಾಪುರ ಕೆರೆ ಪರಭಾರೆಗೆ ವಿರೋಧ

ಬಲ್ಡೋಟ ವಿರೋಧಿ ಹೋರಾಟಕ್ಕೆ 150 ದಿನ ಪೂರ್ಣಅಶೋಕ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಬಸಾಪುರ ಕೆರೆ ಪರಭಾರೆಗೆ ವಿರೋಧ 150 days of anti-Baldota struggle: Human chain formed at Purna Ashoka Circle to oppose Basapura Lake

ಕೊಪ್ಪಳ 29  : ಇಲ್ಲಿನ ನಗರಸಭೆ ಮುಂಭಾಗದಲ್ಲಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆ ಮೂಲಕ ಹಮ್ಮಿಕೊಂಡಿರುವ ಬಲ್ಡೋಟ ವಿರೋಧಿ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹದ 150ನೇ ದಿನದ ಭಾಗವಾಗಿ ಅಶೋಕ ವೃತ್ತದಲ್ಲಿ ಬಸಾಪುರ ಕೆರೆ ಪರಭಾರೆಯನ್ನು ವಿರೋಧಿಸಿ ಮಾನವ ಸರಪಳಿ ನಿರ್ಮಿಸಿ ಜಿಲ್ಲಾಡಳಿತ ಕ್ರಮವನ್ನು ವಿರೋಧಿಸಲಾಯಿತು. ಈ ಸಂದರ್ಭದಲ್ಲಿ ಹುಬ್ಬಳ್ಳಿಯಿಂದ ಆಗಮಿಸಿದ ಹಿರಿಯ ಸಾಹಿತಿ ಡಾ. ಶ್ಯಾಮಸುಂದರ ಬಿದರಕುಂದಿ ಅವರು ಬಾಧಿತ ಗ್ರಾಮಗಳ ಭೇಟಿ ಮಾಡಿ ಬಂದು ವೇದಿಕೆಯಲ್ಲಿ ಮಾತನಾಡುತ್ತಾ ಮಮ್ಮಲ ಮರುಗಿದರು.

ನಮಗೆ ಒಂದು ಗಂಟೆ ಈ ಗ್ರಾಮಗಳಲ್ಲಿ ಓಡಾಡಲು ಕಷ್ಟ ಆಯ್ತು. ಇಡೀ ಬದುಕನ್ನು ಅವರು ಅಲ್ಲಿ ಹೇಗೆ ಸವೆಸುತ್ತಿದ್ದಾರೆ ಎಂಬುದೇ ಅರ್ಥವಾಗುತ್ತಿಲ್ಲ. ಜನಪ್ರತಿನಿಧಿಗಳು ಸರಕಾರ ಅವರನ್ನು ಮತ್ತು ಮುಂದೆ ಅಂತದ್ದೇ ಪರಿಸ್ಥಿತಿಗೆ ಒಳಗಾಗುವ ಕೊಪ್ಪಳ ಭಾಗ್ಯನಗರದ ಜನರನ್ನು ಕೇವಲ ಮತದಾರರು ಬೆಂಬಲಿಗರು ಎಂದು ಭಾವಿಸದೆ ಮನುಷ್ಯರೆಂದು ಭಾವಿಸಬೇಕು ಎಂದು ಕರೆ ನೀಡಿದರು. ಕರುಳಿನ ಕರೆಗೆ ಓಗೊಟ್ಟು ನಡೆಯುತ್ತಿರುವ ಈ ಹೋರಾಟದ 200ನೇ ದಿನಕ್ಕೆ ಪತ್ನಿ ಸಮೇತ ಆಗಮಿಸುವುದಾಗಿ ಘೋಷಿಸಿದರು. ಜಂಟಿ ಕ್ರಿಯಾ ವೇದಿಕೆ ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ಹೋರಾಟ ಎಷ್ಟೇ ದಿನ ನಡೆದರು ಮುನ್ನಡೆಸಲು ನಾವು ಸಿದ್ಧರಿದ್ದೇವೆ

ಆದರೆ ಸರಕಾರ ಬೇಗ ಜನರ ಗೋಳನ್ನು ಅರಿಯಬೇಕು ಇಲ್ಲವಾದಲ್ಲಿ ಜನರೇ ಯಾರು ಏನೆಂದು ಅರಿತು ಆಲೋಚಿಸುತ್ತಾರೆ ಎಂಬ ಎಚ್ಚರಿಕೆಯ ಸಂದೇಶ ನೀಡಿದರು. ಸಂಚಾಲಕ ಮಂಜುನಾಥ ಜಿ. ಗೊಂಡಬಾಳ ಕೆರೆ ರಕ್ಷಣೆಗೆ ಇರುವ ಕಾನೂನು ಕುರಿತು ವಿವರಣೆ ನೀಡಿ ಮಾತನಾಡಿದರು.ಜಂಟಿ ಕ್ರಿಯಾ ವೇದಿಕೆ ಸಂಚಾಲಕ ಮಲ್ಲಿಕಾರ್ಜುನ ಬಿ. ಗೋನಾಳ, ಡಾ. ಮಂಜುನಾಥ ಸಜ್ಜನ್, ಸಂತೋಷ ದೇಶಪಾಂಡೆ, ರಮೇಶ ತುಪ್ಪದ, ಶರಣು ಡೊಳ್ಳಿನ, ಶಿವಕುಮಾರ ಕುಕನೂರು, ಎನ್‌.ಕೆ.ಪಿ.ಎಂ. ಶಾಲೆಯ ಸ್ಥಾಪಕ ಬಿ.ಕೆ. ಪಟ್ಟಣಶೆಟ್ಟಿ, ಮಹಿಳಾ ನಾಯಕಿಯರಾದ ಜ್ಯೋತಿ ಎಂ. ಗೊಂಡಬಾಳ, ಸಾವಿತ್ರಿ ಮುಜುಮದಾರ, ಸರೋಜಾ ಬಾಕಳೆ, ಕಾವ್ಯ ಗಡಾದ, ಸೌಮ್ಯ ನಾಲ್ವಾಡ,  ವಿದ್ಯಾ ನಾಲ್ವಾಡ, ಸಿ.ವಿ. ಜಡಿಯವರ, ಬಿ.ಜಿ.ಕರಿಗಾರ, ಮೂಕಪ್ಪ ಮೇಸ್ತ್ರಿ ಬಸಾಪುರ, ಯಮನೂರ​‍್ಪ ಹಾಲಳ್ಳಿ, ಮಂಗಳೇಶ ರಾಠೋಡ್, ಹನುಮಂತ ಕಟಿಗಿ, ಸಂಗಪ್ಪ ವಾರದ, ಗ್ಯಾನೇಶ ಹ್ಯಾಟಿ, ರಾಜೇಶ ಸಸಿಮಠ, ಜಿ.ಎಸ್‌.ಕಡೇಮನಿ, ಗುಡದಪ್ಪ ಹಡಪದ, ನಾಗರಾಜ ಕುಷ್ಟಗಿ, ವೈ. ಸತ್ಯನಾರಾಯಣ, ಪಂಪಣ್ಣ ಚಿಂತಪಲ್ಲಿ, ಮಹಾಂತೇಶ ಕೊತಬಾಳ, ರವಿ ಕಾಂತನವರ, ವಿಜಯ ಮಹಾಂತೇಶ ಹಟ್ಟಿ, ಶ್ರೀನಿವಾಸ ಪಂಡಿತ ಮುಂತಾದವರು ಇದ್ದರು.