ಇಂದು ಕವಿ ಸಮ್ಮೇಳನ ಹಾಗೂ ಮುಶಾಯರಾ ಕೊಪ್ಪಳಕ್ಕೆ 15 ಜನ ರಾಷ್ಟ್ರೀಯ ಕವಿಗಳ ಆಗಮನ

ಇಂದು ಕವಿ ಸಮ್ಮೇಳನ ಹಾಗೂ ಮುಶಾಯರಾ   ಕೊಪ್ಪಳಕ್ಕೆ 15 ಜನ ರಾಷ್ಟ್ರೀಯ ಕವಿಗಳ ಆಗಮನ 15 national poets arrive in Koppal for poet conference and mushaira today

ಇಂದು ಕವಿ ಸಮ್ಮೇಳನ ಹಾಗೂ ಮುಶಾಯರಾ   ಕೊಪ್ಪಳಕ್ಕೆ 15 ಜನ ರಾಷ್ಟ್ರೀಯ ಕವಿಗಳ ಆಗಮನ 

ಕೊಪ್ಪಳ 24: ನಗರದ ಸಾಹಿತ್ಯ ಭವನದಲ್ಲಿ ದಿ, 25 ರ ಶನಿವಾರ ರಾತ್ರಿ 9:00  ಗಂಟೆಗೆ ಅಖಿಲ ಭಾರತ ಬೃಹತ್ ಕವಿಗೋಷ್ಠಿ ಹಾಗೂ ಮುಷಾಯರಾ ಕಾರ್ಯಕ್ರಮ ಪ್ರತಿ ವರ್ಷದಂತೆ ಈ ವರ್ಷವೂ ಸಹ ಕರ್ನಾಟಕ ಉರ್ದು ಅಕಾಡೆಮಿ ಅವರ ಸಂಯುಕ್ತ ಆಶ್ರಯದಲ್ಲಿ ಜರುಗಲಿದೆ. ಇದರಲ್ಲಿ ಹದಿನೈದು ಜನ ಉರ್ದು ಮತ್ತು ಹಿಂದಿ ರಾಷ್ಟ್ರ ಮಟ್ಟದ ಕವಿಗಳು ಕೊಪ್ಪಳಕ್ಕೆ ಆಗಮಿಸಲಿದ್ದಾರೆ ಎಂದು ನಗರದ ಫಿರ ದೋಸ್ ಸಾಂಸ್ಕೃತಿ ಕ್ರೀಡೆ ಮತ್ತು ತರಬೇತಿ ಸಂಸ್ಥೆ ಯ ಅಧ್ಯಕ್ಷರಾದ ಮೊಹಮ್ಮದ್ ರಫಿಯುದ್ದೀನ್ ಅಹಮದ್‌ರವರು ತಿಳಿಸಿದ್ದಾರೆ.ಸದರಿ ಬೃಹತ್ ಕವಿ ಸಮ್ಮೇಳನ ಹಾಗೂ ಉರ್ದು ಮುಷಾಯರಾ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರ ಮಟ್ಟದ ಉರ್ದು ಹಿಂದಿ ಸಾಹಿತಿ ಮತ್ತು ಕವಿಗಳು ಪಾಲ್ಗೊಂಡು ಕವನ ವಾಚನ ಮಾಡಲಿದ್ದಾರೆ, ಅಂದು ರಾತ್ರಿ ಒಂಬತ್ತು ಗಂಟೆಯಿಂದ ಬೆಳಗಿನ ಜಾವದ ವರೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ನಮ್ಮ ದೇಶದ ಹಿರಿಯ ಕವಿ ಮತ್ತು ಸಾಹಿತಿಗಳಾದ ಗಾಜಿಯಾ ಬಾದಿನ ಗೋವಿಂದ್ ಗುಲ್ಶನ್, ಶಕೀಲ್ ಅಹಮದ್ ಮುಂಬೈ, ನದೀಮ್ ಶಾದ್ ದೇವಬಂಧ ,ಸುರೇಂದರ್ ಸಿಂಗ್ ಶಜರ್, ಅಬರಾರ ಕಾಶಿಫ್ ಅಮರಾವತಿ, ಅನಾ ದೆಹಲ್ವಿ ದೆಹಲಿ, ಹಾಮಿದ ಭೂಸಾವಲ್ಲಿ, ಚಾಚಾ ಪಾಲಠುರಿ ತೆಲಂಗಾಣ, ಚಾಂದನಿ ಪಾಂಡೆ ಕಾನ್ಪುರ್, ಸಿರಾಜ್ ಸೋಲಾಪುರಿ ಮುಂಬೈ, ಸುಹಾನಾ ನಾಜ್ ಮುಂಬೈ, ವೀನೀತ್ ಶಂಕರ್ ಪುಣೆ, ರಾಧಿಕಾ ಮಿತ್ತಲ್ ದೆಹಲಿ, ಮಡ್ಡಿ ಕ್ರಸ್ಟಿ ಪುಣೆ, ಹಾಗೂ ರಾಯಚೂರಿನ ಡಾ, ಇಫ್ತೆ ಕಾರ್ ಶಕೀಲ್, ಮತ್ತು ಸ್ಥಳೀಯ ಕೊಪ್ಪಳದ ಹಿರಿಯ ಸಾಹಿತಿ ಮತ್ತು ಕವಿಗಳಾದ ಅನ್ವರ್ ಹುಸೇನ್, ಮೌಲಾನ ಮಹಮ್ಮದ್ ಅಲಿ ಹಿಮಾಯಿತಿ ಹಾಗೂ ವಿಜಾರತ್ ಅಲಿ ತಾಯರ್ ರವರು ತಮ್ಮ ಕವನ ವಾಚನ ಮಾಡಲಿದ್ದಾರೆ ಇದರಲ್ಲಿ ಇಬ್ಬರು ಹಾಸ್ಯ ಕವಿಗಳು ಪಾಲ್ಗೊಂಡು ಎಲ್ಲರನ್ನು ಭಾರಿ ಪ್ರಮಾಣದ ಹಾಸ್ಯಮಯ ಕವನ ವಾಚನ ಮಾಡಿ ಜನರನ್ನು ರಂಜಿಸಲಿದ್ದಾರೆ, ಇದರ ನಿರೂಪಣೆಯನ್ನು ಕೊಪ್ಪಳದ ಉರ್ದು ಸಾಹಿತಿ ಮೊಹಮ್ಮದ್ ಬದಿಯುದ್ದೀನ್ ಅಹಮದ್ ನವೀದ ರವರು ನೆರವೇರಿಸಲಿದ್ದಾರೆ. 

ಕಾರ್ಯಕ್ರಮದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ವಿವಿಧ ಗಣ್ಯರು ಅಧಿಕಾರಿ ವರ್ಗದವರು ಕರ್ನಾಟಕ ಉರ್ದು ಅಕಾಡೆಮಿಯ ಅಧ್ಯಕ್ಷ ಮತ್ತು ಸದಸ್ಯರು ಪಾಲ್ಗೊಳ್ಳಲಿದ್ದಾರೆ, ಸದರಿ ಬೃಹತ್ ಮುಷಾಯರಾ ಕಾರ್ಯಕ್ರಮದಲ್ಲಿ ಕೊಪ್ಪಳ ನಗರ ಮತ್ತು ಸುತ್ತಮುತ್ತಲಿನ ಊರಿನ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು. ಸದರಿ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಪ್ರತ್ಯೇಕ ಆಸನದ ವ್ಯವಸ್ಥೆಯನ್ನು ಸಹ ಮಾಡಲಾಗಿದೆ ಎಂದು ಕಾರ್ಯಕ್ರಮ ಸಂಘಟಕ ಸಮಿತಿಯ ಸಂಚಾಲಕರು ಪ್ರಕಟಣೆಯಲ್ಲಿ ತಿಳಿಸಿ ಸರ್ವರನ್ನು ಸ್ವಾಗತಿಸಿದ್ದಾರೆ.