ಬೆಂಗಳೂರು,
ಏ.13,ಕೋವಿಡ್-19 ತಡೆಗಟ್ಟಲು ಲಾಕ್ ಡೌನ್ ಜಾರಿಯಾದಾಗಿನಿಂದ ಹಗಲಿರುಳು
ಶ್ರಮಿಸುತ್ತಿರುವ ಪೊಲೀಸರಿಗೆ ಅವರ ಆರೋಗ್ಯದ ಹಿತದೃಷ್ಟಿಯಿಂದ ಕೆಫೀನ್ ಮುಕ್ತ ನೀರಿನ
ಬಾಟಲಿಯನ್ನು ವಿತರಿಸಲಾಗಿದೆ.ವಲೆಂಶಿಯಾ ನ್ಯೂಟ್ರಿಶನ್ ಲಿಮಿಟೆಡ್ ನಿಂದ
ಬೌನ್ಸ್ ಸೂಪರ್ ಪಾನೀಯವನ್ನು ಕಂಪನಿಯ ಪ್ರತಿನಿಧಿಗಳು ಸುಮಾರು 15,000 ಬಾಟಲಿಯನ್ನು
ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರಿಗೆ ವಿತರಿಸಿದ್ದಾರೆ.ಈ ಸಂಸ್ಥೆ
ದೇಶದ ಪ್ರಪ್ರಥಮ ಕೆಫೀನ್ ಅಂಶ ಮುಕ್ತ, ವೈವಿಧ್ಯತೆಯುಳ್ಳ ಪಾನೀಯವಾಗಿದೆ. ಅಲ್ಲದೇ,
ಉಷ್ಣವಲಯದ ಹವಾಮಾನ ಸ್ಥಿತಿಗಳಿಗೆ ಪೂರಕ ಅಂಶಗಳನ್ನು ಹೊಂದಿದ್ದು, ರೋಗ ನಿರೋಧಕ ಶಕ್ತಿ
ತುಂಬುತ್ತದೆ. ಕಂಪನಿಯ ಈ ಕಾರ್ಯಕ್ಕೆ ಆಯುಕ್ತರು ಶ್ಲಾಘಿಸಿದ್ದು, ಲಾಕ್ ಡೌನ್ ಅನ್ನು ಸಾರ್ವಜನಿಕರು ಗಂಭೀರವಾಗಿ ಪರಿಗಣಿಸುವಂತೆ ಆಗ್ರಹಿಸಿದ್ದಾರೆ.