14ರಂದು ಲಿಂಗಾಯತ, ಜಂಗಮ ವಧು ವರರ ಬೃಹತ್ ಸಮಾವೇಶ
ಲೋಕದರ್ಶನ ವರದಿ
ಗದಗ 10: ಗದಗದಲ್ಲಿ ವೀರಶೈವ ಲಿಂಗಾಯತ ಮತ್ತು ಜಂಗಮ ವಧು ವರರ ಬೃಹತ್ ಸಮಾವೇಶವನ್ನು 25 ವರ್ಷದಿಂದ ರಾಜ್ಯದಲ್ಲಿ ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದು ಈ ಸಲವು ಗದಗ ನಗರದ ಚೇಂಬರ್ ಆಫ್ ಕಾಮಸರ್್ ಎಪಿಎಮ್ಸಿ ಹಾಲ ಗದಗದಲ್ಲಿ ದಿ. 14ರಂದು ಮುಂಜಾನೆ 11.00ರಿಂದ ಮಧ್ಯಾಹ್ನ 03.00 ಘಂಟೆಗಳ ವರೆಗೆ ವಧು ವರರ ಅನ್ವೇಷಣೆ ಇರುವುದು ಎಂದು ಅಧ್ಯಕ್ಷರು ಆದ ರವಿ ಹಂದಿಗೋಳ ತಿಳಿಸಿದರು.
ಈ ಸಮಾವೇಶದಲ್ಲಿ ವಧು ವರರನ್ನು ಪರಸ್ಪರ ಪರಿಚಯಿಸಲಾಗುವುದು, ಅಪೇಕ್ಷೆ ಹೊಂದಿದ ವಧು ವರರು ಹಾಗೂ ಪಾಲಕರನ್ನು ಸ್ಥಳದಲ್ಲಿಯೇ ಮಾತುಕತೆಗೆ ಅವಕಾಶ ಕಲ್ಪಿಸಲಾಗುವುದು, ಹಾಗೂ ಸಮಾವೇಶದಲ್ಲಿ ಭಾಗವಹಿಸಿ ಸದಸ್ಯತ್ವ ಪಡೆದವರಿಗೆ ಮದುವೆ ನಿಶ್ಚಯದವರೆಗೆ ಮಾಹಿತಿ ಹಾಗೂ ಪರಸ್ಪರ ತೋರಿಸುವ ಸೇವೆ ನೀಡಲಾಗುವುದು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಕೋರಿದರು.ಈ ಸಮಾವೇಶದಲ್ಲಿ ಬರುವ ವಧು ವರರು 2 ಭಾವಚಿತ್ರ (ಪೋಟೋ) ಮತ್ತು ಜಾತಕದೊಂದಿಗೆ ಭಾಗವಹಿಸಬಹುದು ವಿಧವೆ, ವಿಧುರ, ಮರು ವಿವಾಹ ಆಗಬಯಸುವವರು ಅಂಗವಿಕಲರು, ಪಾಲಕರು ಸಹ ಭಾಗವಹಿಸಬಹುದು ಎಂದು ತಿಳಿಸಿದರು.ಪತ್ರಿಕಾ ಗೋಷ್ಠಿಯಲ್ಲಿ ಅಖಿಲ ಭಾರತ ವೀರಶೈವ ಸೇವಾ ಸಭಾ ಟ್ರಸ್ಟ್ ನ ಅದ್ಯಕ್ಷರಾದ ರವಿ ಹಂದಿಗೋಳ, ಕಾರ್ಯದಶರ್ಿಗಳು ಶಕುಂತಲಾ ನಂದಿಮಠ, ಮತ್ತು ಕನರ್ಾಟಕ ವೀರಶೈವ ವಧು ವರರ ಅಧ್ಯಕ್ಷರು ಆದ ಶಿವಕುಮಾರ ಹಿರೇಮಠ ಹಾಗೂ ಪ್ರಕಾಶ ಅಂಗಡಿ ಭಾಗಿಯಾಗಿದ್ದರು.
ದಕ್ಷಿಣ ಭಾರತದ ಕೋಗಿಲೆ ಎಸ್. ಜಾನಕಿ ನಿಧನ; 88ನೇ ವಯಸ್ಸಿನಲ್ಲಿ ಕೊನೆಯುಸಿರು
ಮಹಾರಾಷ್ಟ್ರದಲ್ಲಿ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡ್ಡಿ; ಎಸ್ಸಿಆರ್ 25 ರೈಲುಗಳ ಮಾರ್ಗ ಬದಲಾವಣೆ
ಖಾನಾಪೂರ ಶಾಸಕ ಹಲಗೇಕರ ಅಡ್ಡ ಮತದಾನ ಮಾಡಿದರಾ?, ಅಂಜಲಿ ನಿಂಬಾಳಕರ್ ಮಾತಿನ ಮರ್ಮವೇನು
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ
ಚಂದ್ರಪುರ ಅರಣ್ಯದಲ್ಲಿ ಕಾಡುಪ್ರಾಣಿ ದಾಳಿಗೆ ಯುವಕ ಬಲಿ
ಅಧಿಕಾರ ದರ್ಪ : ಖಾನಾಪುರ ತಹಸೀಲ್ದಾರ್ ವಿರುದ್ಧ ಶಿಸ್ತುಕ್ರಮಕ್ಕೆ ಪಿಡಿಒಗಳಿಂದ ಡಿಸಿ, ಚು. ಆಯೋಗಕ್ಕೆ ದೂರು 