ಬೆಳಗಾವಿ: 14ನೇ ಹಣಕಾಸು ಹಾಗೂ ಉಳಿತಾಯದ ಹಣದಲ್ಲಿ ಕಾಮಗಾರಿಗಳಿಗೆ ಸೂಚನೆ
ಲೋಕದರ್ಶನ ವರದಿ
ಬೆಳಗಾವಿ 17: 14ನೇ ಹಣಕಾಸು ಯೋಜನೆಯಲ್ಲಿ ನಗರದ ಪ್ರತಿ ವಾರ್ಡಗಳಿಗೆ ರೂ. 20 ಲಕ್ಷದಂತೆ ಅಭಿವೃದ್ಧಿ ಕಾಮಗಾರಿಗಳನ್ನು ಹಂಚಿಕೆ ಮಾಡಲಾಗಿದೆ. ಹಂಚಿಕೆ ಮಾಡಲಾದ ಕಾಮಗಾರಿಗಳನ್ನು ಶೀಘ್ರವಾಗಿ ಕೈಗೆತ್ತಿಕೊಂಡು ಮುಕ್ತಾಯಗೊಳಿಸಲು ಅಧಿಕಾರಿಗಳಿಗೆ ಶಾಸಕ ಅನಿಲ ಬೆನಕೆ ತಿಳಿಸಿದ್ದಾರೆ. ಇಂದು ಮಹಾನಗರ ಪಾಲಿಕೆಯಲ್ಲಿ ನಡೆದ ಅಧಿಕಾರಿಗಳ ಸಭೆ ನಡೆಸಿದ ಅವರು ಯೋಜನೆ ಉಳಿತಾಯದ ಸುಮಾರು 10 ಕೋಟಿ ಹಣದಲ್ಲಿ ನಗರದ ವಾರ್ಡಗಳಿಗೆ ಅಭಿವೃದ್ಧಿ ಕಾರ್ಯಗಳಿಗೆ ಹಣ ಹಂಚಿಕೆ ಮಾಡಲಾಗಿದ್ದು, ಕಾಮಗಾರಿಗಳನ್ನು ಶೀಘ್ರವಾಗಿ ಅಧಿಕಾರಿಗಳು ಮಾಡಬೇಕು ಎಂದರು.
ಮಾನ್ಸೂನ್ನಲ್ಲಿ ತೊಂದರೆಯಾಗದಂತೆ ನಗರದ ಎಲ್ಲ ಗಟಾರುಗಳು, ನಾಲೆಗಳು ಸ್ವಚ್ಛವಾಗಬೇಕು ಎಂದು ಶಾಸಕರು ಸೂಚಿಸಿದ್ದು, ಮಳೆಯಿಂದ ಜನರಿಗೆ ಅನಾನುಕೂಲವಾದರೆ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂದು ಶಾಸಕ ಅನಿಲ ಬೆನಕೆ ಎಚ್ಚರಿಸಿದ್ದಾರೆ. ಮಳೆಗಾಲದಲ್ಲಿ ಗಟಾರುಗಳು ತುಂಬಿ, ರಸ್ತೆಗಳಲ್ಲಿ ನೀರು ನಿಂತು ಅಪಾರ ತೊಂದರೆಯಾಗುತ್ತಿದೆ. ಸೊಳ್ಳೆಗಳ ನಿಯಂತ್ರಣ ಮಾಡಬೇಕಾದ ಅನಿವಾರ್ಯತೆ ಇದೆ, ಈ ಬಗ್ಗೆ ಹಲವು ದೂರುಗಳನ್ನು ಜನರಿಂದ ಸ್ವೀಕರಿಸಿದ್ದು ಯಾವುದೇ ತೊಂದರೆಯಾಗದಂತೆ ನಗರದಲ್ಲಿ ವ್ಯವಸ್ಥೆಯಾಗಬೇಕು, ಪಾಲಿಕೆ ಆಡಳಿತ ಸಜ್ಜಾಗಬೇಕು ಎಂದು ಶಾಸಕರು ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ
ನೀಟ್: ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ, ಮೃತ ವಿದ್ಯಾರ್ಥಿಗಳ ಆತ್ಮಕ್ಕೆ ಶಾಂತಿ ಕೋರಿ ಕ್ಯಾಂಡಲ್ ಪ್ರತಿಭಟನೆ
1991ರ ಆರ್ಥಿಕ ಸುಧಾರಣೆಗಳನ್ನು ಶ್ಲಾಘಿಸಿದ ಖರ್ಗೆ; ಸಮಗ್ರ ಅಭಿವೃದ್ಧಿಗೆ ಎರಡನೇ ಹಂತದ ಉದಾರೀಕರಣಕ್ಕೆ ಕರೆ 