ಅಂಕಲಿ ಸೊಸಾಯಿಟಿ ಚಿಂಚಲಿ ಶಾಖೆಯ 14 ನೇ ವಾರ್ಷಿಕೋತ್ಸವ ಸಮಾರಂಭದ

ಅಂಕಲಿ ಸೊಸಾಯಿಟಿ ಚಿಂಚಲಿ  ಶಾಖೆಯ 14 ನೇ ವಾರ್ಷಿಕೋತ್ಸವ ಸಮಾರಂಭದ 14th Anniversary Celebration of Ankali Society Chinchli Branch

ಲೋಕದರ್ಶನ ವರದಿ 

ಮಾಂಜರಿ 16: ಸನ್ 1988ರಲ್ಲಿ ಅಂಕಲಿ ಎಂಬ ಪುಟ್ಟ ಗ್ರಾಮದಲ್ಲಿ ಡಾ.ಪ್ರಭಾಕರ ಕೋರೆಯವರ ಮುಂದಾಳತ್ವದಲ್ಲಿ ಸ್ಥಾವನೆಯಾದ ಸಂಘವು ಅಂಕಲಿ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಯೆಂದು ಸ್ಥಾಪನೆಯಾಗಿ ಸನ್ 2007 ರಲ್ಲಿ ಸೌಹಾರ್ದ ಕಾಯ್ದೆಯಡಿ ಪರಿವರ್ತನೆ ಯೊಂದಿ ಡಾ. ಪ್ರಭಾಕರ ಕೋರೆ ಕ್ರೆಡಿಟ್ ಸೌಹಾರ್ದ ಸಹಕಾರಿ ನಿ.. ಅಂಕಲಿ ಸನ್ 2023ರಲ್ಲಿ ಸೊಸಾಯಟ ಪರಿವರ್ತನೆ ಹೊಂದಿ ಈಗ ಡಾ. ಪ್ರಭಾಕರ ಕೋರೆ ಕೋ-ಆಪ್ ಕ್ರೆಡಿಟ್ ಸೊಸಾಯಿಟಿ ನಿಯಮಿತ, ಅಂಕಲಿ(ಬಹುರಾಜ್ಯ) ಎಂಬ ನಾಮದೊಂದಿಗೆ ಸಂಸ್ಥೆಯ ಸಂಸ್ಥಾಪಕರಾದ ಡಾ.ಪ್ರಭಾಕರ ಕೋರೆ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ದೇವೇಂದ್ರ ಕರೋಶಿ ಇವರುಗಳ ಮಾರ್ಗದರ್ಶನದಲ್ಲಿ ಗಡಿರಾಜ್ಯಗಳಾದ ಮಹಾರಾಷ್ಟ್ರ ್ಘ ಗೋವಾ ರಾಜ್ಯಗಳಲ್ಲಿ ಬೇಗನೆ ಶಾಖೆಗಳನ್ನು ಪ್ರಾರಂಭಿಸಲಿದೆ. ಎಂದು ಸಂಸ್ಥೆಯ  ಅಧ್ಯಕ್ಷರಾದ ಮಹಾಂತೇಶ್ ಪಾಟೀಲ್ ಹೇಳಿದರು. 

ಅವರು ಗುರುವಾರರಂದು ರಾಯಬಾಗ್ ತಾಲೂಕಿನ ಚಿಂಚಲಿ ಗ್ರಾಮದಲ್ಲಿರುವ ಶಾಖೆಯ 14 ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ಈ ಸಮಾರಂಭದ ಅಧ್ಯಕ್ಷತೆ ವಹಿಸಿದ ಶಾಖಾ ಅಧ್ಯಕ್ಷರಾದ ಜಗನ್ನಾಥ ಶಿವಗೌಡಾ ಪಾಟೀಲ ಮಾತನಾಡಿ ಚಿಂಚಲಿ  ಶಾಖೆಯಾಗಿ ಆರಂಭಗೊಂಡಾಗಿನಿಂದ ಇಲ್ಲಿಯವರೆಗೆ 35 ಕೋಟಿ 34 ಲಕ್ಷ ರೂ, ಠೇವು ಸಂಗ್ರಹಿಸಿ, 15 ಕೋಟಿ 35 ಲಕ್ಷ ರೂ ಸಾಲ ವಿತರಿಸಿ, ವಾರ್ಷಿಕ ವಹಿವಾಟು 279 ಕೋಟಿ ಹಾಗೂ ಪ್ರಚಲಿತ ಆರ್ಥಿಕ ವರ್ಷದಲ್ಲಿ 85 ಲಕ್ಷ ರೂ, ಲಾಭ ಆಗಿರುತ್ತದೆ ಎಂದು  ಹೇಳಿದರು. ಶಾಖೆಯ ಸಲಹಾ ಸಮಿತಿಯ ಸದಸ್ಯರು ್ಘ ವ್ಯವಸ್ಥಾಪಕ ನಿರ್ದೇಶಕರಾದ ಡಿ.ಎಸ್ ಕರೋಶಿ ಇವರ ಮಾರ್ಗದರ್ಶನದಲ್ಲಿ ಶಾಖೆಯು ಹೆಚ್ಚಿನ ರೀತಿಯಲ್ಲಿ ಪ್ರಗತಿ ಪಥದತ್ತ ಮುನ್ನಡೆಸಲು ಪ್ರಯತ್ನಿಸುತ್ತೇವೆ ಎಂದು ಶಾಖಾ ವ್ಯವಸ್ಥಾಪಕರಾದ ಪ್ರದೀಪ ಬಿಳ್ಳೂರೆ ತಿಳಿಸಿದರು. 

ಶಾಖೆಯ 14 ನೇ ವಾರ್ಷಿಕೋತ್ಸವ ನಿಮಿತ್ಯ ಶ್ರೀ ಲಕ್ಷ್ಮೀ ಪೂಜೆಯನ್ನು ಸಲಹಾ ಸಮಿತಿಯ ಅಧ್ಯಕ್ಷರಾದ ಜಗನ್ನಾಥ ಶಿವಗೌಡಾ ಪಾಟೀಲ ಹಾಗೂ ವಸಂತ ಕೃಷ್ಣಾ ಕರಾಕಾಯಿ ನೇರವೇರಿಸಿದರು ಹಾಗೂ ಗ್ರಾಮೀಣ ಭಾಗದ ಜನರಿಗೆ ಹಲವಾರು ರೀತಿಯ ಆರ್ಥಿಕ ಸೇವೆಗಳನ್ನು ್ಘ ಜೀವ ವಿಮೆ ಹಾಗೂ ವಾಹನ ವಿಮೆ ಒದಗಿಸುತ್ತಾ ಕೋರ್ ಬ್ಯಾಂಕಿಂಗ್ ಸೇವೆಯೊಂದಿಗೆ ಗ್ರಾಹಕರ ವಿಶ್ವಾಸನೀಯ ಸಂಸ್ಥೆಯಾಗಿ ಹೊರಹೊಮ್ಮುತ್ತಿದೆ. ಶಾಖೆಯ ಈ ಅಮೋಘವಾದ ಬೆಳವಣಿಗೆಗೆ ಶಾಖೆಯ ಎಲ್ಲ ಸದಸ್ಯರು, ಸಲಹಾ ಸಮಿತಿ ಸದಸ್ಯರು, ಸಿಬ್ಬಂದಿಗಳ ಪ್ರಮಾಣಿಕ ಸೇವೆ, ಗ್ರಾಹಕರ ಪ್ರೀತಿ ವಿಶ್ವಾಸ ಹಾಗೂ ಸಹಾಯ ಸಹಕಾರ ನೀಡುತ್ತಿರುವುದೇ ಕಾರಣ ಎಂದು ಹೇಳಿದರು.  

ಈ ಸಂದರ್ಭದಲ್ಲಿ ಅಂಕುಶ ಜಾಧವ, ವಸಂತ ಕರಾಕಾಯಿ, ಗುರುಲಿಂಗ ಕುಂಬಾರ, ಭಾಗಪ್ಪ ಚೌಗುಲೆ, ಬಾಬು ನಿಂಗನೂರೆ ಮತ್ತು ಜಾಕೀರಹುಸೇನ ಬಿಚ್ಚು. ಗ್ರಾಹಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.