149ನೇ ದಿನದ ಬಲ್ಡೋಟ ಹಟಾವೋ ಧರಣಿ ಯಶಸ್ವಿ ಬಸಾಪುರ ಕೆರೆ ಕುರಿತು ಜಿಲ್ಲಾಧಿಕಾರಿ ಹೇಳಿಕೆ ಖಂಡಿಸುತ್ತೇನೆ: ಬಾಕಳೆ
149th day of Baldota Hatao Dharani, success, I condemn the statement of the District Collector regar
ಲೋಕದರ್ಶನ ವರದಿ
ಕೊಪ್ಪಳ 29: ತಾಲೂಕಿನ ಬಸಾಪುರ ಕೆರೆಯನ್ನು ಬಲ್ಡೋಟ ಕಂಪನಿಗೆ ಉಳಿಸಲು ತಿಣುಕಾಡುತ್ತಿರುವ ಜಿಲ್ಲಾಧಿಕಾರಿ ಹರಸಾಹಸ ಮೆಚ್ಚಲೆಬೇಕು ಎಂದು ನ್ಯಾಯವಾದಿ, ಭೂಮಿ ಕಳೆದುಕೊಂಡ ರಾಜು ಬಾಕಳೆ ಹೇಳಿದರು. ಮುಂದುವರಿದು ಜಿಲ್ಲಾಧಿಕಾರಿ ಎಲ್ಲಿಲ್ಲದ ಆದೇಶಗಳನ್ನು ಉಲ್ಲೇಖ ಮಾಡಿ ಕೆರೆಯನ್ನು ಕಾರ್ಖಾನೆಗೆ ಸುಪ್ರೀಂ ಕೋರ್ಟ್ ಉಳಿಸಿ ಕೊಟ್ಟಿದೆ ಎನ್ನುವಂತೆ ಹೇಳಿದ್ದು ನಾಚಿಕೆಯಾಗುತ್ತಿದೆ ಎಂದರು.
ಧರಣಿಯಲ್ಲಿ ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ ಮತ್ತು ಮಂಜುನಾಥ ಜಿ. ಗೊಂಡಬಾಳ, ಪ್ರಕಾಶಕ ಡಿ.ಎಂ. ಬಡಿಗೇರ, ನಿವೃತ್ತ ಪ್ರಾಚಾರ್ಯ ಬಿ.ಜಿ. ಕರಿಗಾರ, ಮಹಿಳಾ ನಾಯಕಿಯರಾದ ಜ್ಯೋತಿ ಎಂ. ಗೊಂಡಬಾಳ, ಸರೋಜಾ ಬಾಕಳೆ, ಕಾವ್ಯ ಪ್ರಸನ್ನ ಗಡಾದ, ನಿವೃತ್ತ ಅಂಚೆ ಅಧಿಕಾರಿ ರವಿ ಕಾಂತನವರ, ಮೂಕಪ್ಪ ಮೇಸ್ತ್ರಿ ಬಸಾಪುರ, ಮಹಾದೇವಪ್ಪ ಮಾವಿನಮಡು, ರಾಜಶೇಖರ ಏಳುಬಾವಿ, ವೀರೇಶ ಕಟ್ಟಿ, ಸುಂಕಮ್ಮ ಗಾಂಧಿನಗರ, ಗಂಗಮ್ಮ ಸಿರವಾರ, ಮಲ್ಲಮ್ಮ ಮುಂಡರಗಿ, ಗಂಗಮ್ಮ ದೊಡ್ಡಮನಿ, ಶಿವಪ್ಪ ಹಲಗೇರಿ, ನಾಗರಾಜ ಕುಷ್ಟಗಿ ಲಾಚನಕೇರಿ, ಪಂಪಣ್ಣ ಚಿಂತಪಲ್ಲಿ, ಮಲ್ಲಪ್ಪ ಹಡಪದ, ವಿಜಯ ಮಹಾಂತೇಶ ಹಟ್ಟಿ, ಶಿವಪ್ಪ ಜಲ್ಲಿ, ಪಾಪಣ್ಣ ಶಹಾಪುರ, ರೇವಣಸಿದ್ದೇಶ್ವರ ಚಿತ್ರಗಾರ, ಭೀಮಪ್ಪ ಯಲಬುರ್ಗಾ ಇತರರು ಇದ್ದರು.
ಇಂದು ನಗರಕ್ಕೆ : ಹುಬ್ಬಳ್ಳಿ ಖ್ಯಾತ ಸಾಹಿತಿ ಡಾ. ಶ್ಯಾಮಸುಂದರ್ ಬಿದರಕುಂದಿ ಅವರ ಆಗಮನ : ರವಿವಾರ 29.03.2026 ರಂದು ಬಲ್ದೋಟ ಹಟಾವೋ ಕೊಪ್ಪಳ ಬಚಾವೋ, ಬಸಾಪುರ ಕೆರೆ ಸಾರ್ವಜನಿಕರಿಗೆ ಮುಕ್ತಗೊಳಿಸಿ, 20 ಕಾರ್ಖಾನೆ ಬಾಧಿತ ಹಳ್ಳಿ ಜನರ ಜೀವ ಉಳಿಸಿ, ತುಂಗಭದ್ರಾ ವಿಶ್ವಗೊಳಿಸುವ ಕಾರ್ಖಾನೆಗಳನ್ನು ಸೀಜ್ ಮಾಡಲು ಆಗ್ರಹಿಸಿದ ಧರಣಿ 150ನೇ ದಿನ ಪೂರೈಸಲಿದ್ದು ಬೆಳಿಗ್ಗೆ 11:50 ಗಂಟೆಗೆ ಅಶೋಕ ವೃತ್ತದಲ್ಲಿ ಮಾನವ ಸರಪಳಿ ಮಾಡಿ ಬಸಾಪುರ ಕೆರೆ ಬಲ್ಡೋಟ ಕಂಪನಿಗೆ ಸೇರಿದ್ದು ಎಂದು ಹೇಳಿದ ಜಿಲ್ಲಾಧಿಕಾರಿ ಹೇಳಿಕೆಯನ್ನು ಖಂಡಿಸಲಾಗುವುದು.
ಇದಕ್ಕೂ ಮುನ್ನ ಬಾಧಿತ ಹಿರೇಬಗನಾಳ ಮುಂ. ಗ್ರಾಮಗಳಿಗೆ ಹುಬ್ಬಳ್ಳಿಯ ಖ್ಯಾತ ಸಾಹಿತಿ ಡಾ. ಶ್ಯಾಮಪ್ರಸಾದ್ ಬಿದರಕುಂದಿ ಅವರು ಭೇಟಿ ನೀಡಿ ಬಾಧಿತ ಜನರ ನೋವು ಆಲಿಸಿ ಕೊಪ್ಪಳಕ್ಕೆ ಬಂದು ಹೋರಾಟವನ್ನು ಬೆಂಬಲಿಸಿ ಮಾತನಾಡುತ್ತಾರೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 