ಬಲ್ಡೋಟ ವಿರೋಧಿ 13ನೇ ದಿನದ ಧರಣಿ ಯಶಸ್ವಿ
13th day of anti-Baldota sit-in successful
ಕೊಪ್ಪಳ: ನಗರಕ್ಕೆ ಹೊಂದಿಕೊಂಡು ಬೃಹತ್ ಬಂಡವಾಳ ಹೂಡಿ ವಿಸ್ತರಣೆ ಮಾಡಲು ಮುಂದಾದ ಬಲ್ಡೋಟ (ಬಿಎಸ್ಪಿಎಲ್‌ವಿರುದ್ಧ ಫೆ. 24ರಂದು ಕೊಪ್ಪಳದ ಜನರು ಜಾಗ್ರೃತರಾಗಿ ಈ ವಿಸ್ತರಣೆ ಅನುಮತಿ ರದ್ದು ಮಾಡಬೇಕೆಂದು ಬೀದಿಗಿಳಿದು ಕೊಪ್ಪಳ ಭಾಗ್ಯನಗರ ಬಂದ್ ಮಾಡಿ ಪ್ರತಿಭಟಿಸಿದ್ದು ಅದೇ ಹೋರಾಟವನ್ನು ಮುಂದುವರೆಸಲಾಗಿದೆ. ಬಲ್ಡೋಟಾ ಮತ್ತು ಇತರೆ ಕಾರ್ಖಾನೆಗಳ ವಿಸ್ತರಣೆ ಮತ್ತು ಹೊಸ ಕಾರ್ಖಟನೆ ಸ್ಥಾಪನೆ ವಿರೋಧಿಸಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿಯ 13ನೇ ದಿನದಲ್ಲಿ ಶ್ರೀ ಗುರುಬಸವೇಶ್ವರ ಚಾರಿಟೆಬಲ್ ಟ್ರಸ್ಟ್ ಮತ್ತು ಇದರ ಮಹಿಳಾ ಘಟಕ ಪದಾಧಿಕಾರಿಗಳು ಹಾಗೂ ಸದಸ್ಯರು ದೊಡ್ಡ ಮಟ್ಟದ ಬೆಂಬಲ ವ್ಯಕ್ತಪಡಿಸಿದರು. ವಿಗುಬಚಾಟ್ರ ಮಹಿಳಾ ನಾಯಕಿ ಸೌಮ್ಯ ನಾಲವಾಡ ಅವರು ನಗರದ ಸ್ವಚ್ಛ ಪರಿಸರವನ್ನು ಹಾಳು ಮಾಡಲು ಬಂದ ವಿಷ ಉಗುಳುವ ಕಾರ್ಖಾನೆಗಳು ಬೇಡ ಎಂದು ಈ ಭಾಗದ ಆರಾಧ್ಯ ದೈವ ಗವಿಸಿದ್ದೇಶ್ವರರು ಬೀದಿಗೆ ಬಂದಾಗ ಸಾವಿರಾರು ಮಹಿಳೆಯರು ಅವರನ್ನು ಬೆಂಬಲಿಸಿ ಹೋರಾಟಕ್ಕೆ ಬಂದ ನಮಗೆ ಕುಹಕದ ಮಾತನಾಡಿದವರು ಸಹ ನಮ್ಮಲ್ಲಿದ್ದಾರೆ. ಅಂತವರಿಗೆ ಮತ್ತು ನಮ್ಮ ಬದುಕಿಗೆ ಈ ಹೋರಾಟ ಗೆದ್ದು ತೋರಿಸಲು ಮಹಿಳೆಯರು ದೊಡ್ಡ ಸಂಖ್ಯೆಯಲ್ಲಿ ಹೋರಾಟದ ಕಣಕ್ಕಿಳಿಯಲು ಛಲ ತೊಡುತ್ತೇವೆ ಎಂದರು.
ಪ್ರಗತಿ ಮಹಿಳಾ ಸಂಘದ ನಾಯಕಿ ಸಂಧ್ಯಾ ಮಾದಿನೂರು 2008ರಲ್ಲಿ ಅಡಿಗಲ್ಲು ಇಡುವಾಗ ಬಸಾಪುರ ಕೆರೆಯಲ್ಲಿ ನಾನು ವೇದಿಕೆಯ ಹಿರಿಯರು ಲಬೊ ಲಬೊ ಎಂದು ಬಾಯಿ ಬಡಿದುಕೊಳ್ಳುತ್ತಾ ತಡೆಯಲು ಮುಂದಾದ ನಮ್ಮನ್ನು ಬಂಧಿಸಿ ಮುನಿರಾಬಾದ್ ಠಾಣೆಯಲ್ಲಿ ಇಟ್ಟಿದ್ದರು. ್ದಂದು ನಮ್ಮ ಮಾತು ಕೇಳದ್ದಕ್ಕೆ ಇಂದು ಲಕ್ಷಾಂತರ ಜನರು ಬಾಯಿ ಬಡಿದುಕೊಳ್ಳುವ ಹಾಗೆ ಆಗಿದೆ ಎಂದರು. 1.5 ಲಕ್ಷ ಜನ ನಗರದಲ್ಲಿ ಇದ್ದು ಇವರಿಗೆ ಆರೋಗ್ಯ ಆತಂಕವನ್ನುಂಟು ಮಾಡಿರುವ ಬಲ್ಡೋಟ ವಿಸ್ರಣೆಯ ಶಾಸ್ವತತಡೆ ಆದೇಶ ತರದಿದ್ದರೆ ಇನ್ನು ಸಹಿಸಿಕೊಳ್ಳಲು ಆಗುವುದಿಲ್ಲ. ಜನಪ್ರತಿನಿದಿನಗಳು ಮೌನ ಮುರಿದು ಬಾಧಿತವಾದ 20 ಹಳ್ಳಿ, ಮತ್ತು ನಗರದ ಜನರ ಆರೋಗ್ಯ ಕಾಪಾಡಬೇಕು. ನಾವು ಸುಮ್ಮನಿಲ್ಲ ಕಾಯ್ದು ನೋಡುತ್ತಿದ್ದೇವೆ, ಶೀಘ್ರ ಉತ್ತರಿಸುತ್ತೇವೆ ಎಂದರು.
ಗವಿಶ್ರೀಗಳ ಮಾತಿಗೆ ಗೌರವಿಸಿ ಕಾರ್ಖಾನೆ ವಿಸ್ತರಣಗೆೆ ಶಾಸ್ವತ ತಡೆ ಆದೇಶ ತರುವತನಕ ಬಿಡುವುದಿಲ್ಲ ಎಂದು ಟ್ರಸ್ಟ್ ಕಾರ್ಯದರ್ಶಿ ರಾಜೇಶ ಸಸಿಮಠ ತಾಕೀತು ಮಾಡಿದರು. ಜೊತೆಗೆ ಪ್ರಕೃತಿ ಕಾಳಜಿಯ ಶರಣರ ವಚನ ಗಾಯನ ಮಾಡಿದ್ದು ವಿಶೇಷವಾಗಿತ್ತು. ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಕೊಪ್ಪಳ ಇದರ ಜಂಟಿ ಕ್ರಿಯಾ ವೇದಿಕೆ ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರು ಮಹಿಳೆಯರು ಹೋರಾಟಕ್ಕೆ ಹೆಚ್ಚು ಹೆಚ್ಚು ಧುಮುಕಬೇಕು ಎಂದರು.
ಶ್ರೀವಿಗುಬಚಾಟ್ರ ಅಧ್ಯಕ್ಷ ಗುಡದಪ್ಪ ಹಡಪದ, ಎಂ. ಬಸವರಾಜಪ್ಪ, ಗಾಳೆಪ್ಪ ಕಡೆಮನಿ, ಶಿವಸಂಘಪ್ಪ ವಣಗೆರಿ, ಶಿವಪುತ್ರ್ಪ ಲಕ್ಕುಂಡಿ, ಎಂ. ಎಸ್. ಬೀರಲದಿನ್ನಿ, ಅರ್ಚನಾ ಸಸಿಮಠ, ಮಂಜುಳಾ ಪಾಟೀಲ್. ಸಂಗಪ್ಪ ಕೊಟ್ರ್ಪ ವಾರದ, ಕಾವ್ಯಾ ಗಡಾದ, ಸುಶೀಲಾ ರಾಂಪೂರ. ಜ್ಯೇತಿ ಕದ್ರಳ್ಳಿಮಠ, ಈರಮ್ಮ ಕೊಳ್ಳಿ, ಜ್ಯೋತಿ ಎಸ್. ಬಳ್ಳೊಳ್ಳಿ, ಶರಣಮ್ಮ ಹೆಚ್. ಕಲ್ಮಂಗಿ, ಶಿಲ್ಪಾ ಆರ್. ಸಸಿಮಠ, ವೀರಭದ್ರ್ಪ ನಂದ್ಯಾಲ, ರೂಪಾ ಎಸ್ ಶಿಂಗ್ರಿ, ವಿಶಾಲಾಕ್ಷಿ ಸಸಿಮಠ, ಉಮಾ ಕೊಪ್ಪಳ, ಮಲ್ಲಪ್ಪ ಕಡಗದ, ರವಿ ಕಾಂತನವರ, ಮರುಳಸಿದ್ಧೇಶ್ವರ, ಶಲಣಬಸನಗೌಡ ಪಾಟೀಲ, ಶಿವಪುತ್ರ್ಪ ಲಕ್ಕುಂಡಿ, ಬಾಪುಗೌಡ ಪಾಟೀಲ್, ಮಲ್ಲಪ್ಪ ಕಡಗದ, ಗದಿಗೆಪ್ಪ ಅಮಾತಿ, ಎಸ್ಬಿ ರಾಜೂರ, ಬಾಳಮ್ಮ ಮಾಳೆಕೊಪ್ಪ, ಪರಿಮಳ ವಿ.ಎಚ್., ಶಂಭುಲಿಂಗಪ್ಪ ಹರಗೇರಿ, ಶಿವಬಸಯ್ಯ ವೀರಾಪೂರ, ಮುರುಗೇಶ, ಶಾಂತಯ್ಯ ಅಂಗಡಿ, ಗುರುರಾಜ, ಈರಮ್ಮ ಕೊಳ್ಳಿ ಧರಣಿಯಲ್ಲಿ ಭಾಗವಹಿಸಿದ್ದರು. ಸಾಹಿತಿ ಡಿ.ಎಂ. ಬಡಿಗೇರ, ಎ. ಎಂ. ಮದರಿ, ಕೆ. ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ಮೂಕಪ್ಪ ಮೇಸ್ತ್ರಿ ಬಸಾಪುರ, ಮಖಬೂಲ್ ರಾಯಚೂರು, ಮಹಾದೇವಪ್ಪ ಎಸ್ ಮಾವಿನಮಡು, ಭೀಮಪ್ಪ ಯಲಬುರ್ಗಾ, ಗವಿಸಿದ್ದಪ್ಪ ಹಲಿಗಿ, ರಣದಪ್ಪ ಕವಲೂರು, ಶಿವಪ್ಪ ಹಡಪದ ಧರಣಿ ನೇತೃತ್ವವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 